
ಬೆಂಗಳೂರು, ಜು.1: ಕರ್ನಾಟಕ ಸ್ವಾಭಿಮಾನ ಸಂಘಟನೆಗಳ ಒಕ್ಕೂಟದ ರಾಜ್ಯಮಟ್ಟದ ಪದಾಧಿಕಾರಿಗಳ ಆಯ್ಕೆ ಸಭೆಯು ಇಂದು ಬುದುವಾರ ನಡೆದಿದ್ದು, ಸಭೆಯಲ್ಲಿ ಸರ್ವಾನುಮತದ ಘೋಷಣೆಯಿಂದ ಗಣೇಶ್ ಸಿಂಹ ಅವರನ್ನು ಒಕ್ಕೂಟದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು. ಇದೆ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಆಯ್ಕೆಮಾಡು ಅಭಿನಂದನೆ ಸಲ್ಲಿಸಲಾಯಿತು. ಗಣೇಶ್ ಸಿಂಹ ಅವರ ನೇತೃತ್ವದಲ್ಲಿ ಸಂಘಟನೆ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿ ಹಾಗೂ ಕನ್ನಡ, ನಾಡು-ನುಡಿ, ನೆಲ-ಜಲ ಸಂರಕ್ಷಣೆ, ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಹಕ್ಕುಗಳ ಪರ ಪರಿಣಾಮಕಾರಿ ಹೋರಾಟ ಮುಂದುವರಿಯಲಿ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾದ ಸಾಕೇ ನಾರಾಯಣ್ ಆಶಯ ವ್ಯಕ್ತಪಡಿಸಿದರು.
ಸಂಘಟನೆಯ ಬಲವರ್ಧನೆ ಹಾಗೂ ಚಟುವಟಿಕೆಗಳನ್ನು ರಾಜ್ಯಾದ್ಯಂತ ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕೆಂದು ಸಭೆಯಲ್ಲಿ ಕರೆ ನೀಡಲಾಯಿತು.
ಆಯ್ಕೆಯಾದ ಪದಾಧಿಕಾರಿಗಳ ಪಟ್ಟಿ
ರಾಜ್ಯಾಧ್ಯಕ್ಷರು – ಗಣೇಶ್ ಸಿಂಹ
ಪ್ರಧಾನ ಕಾರ್ಯದರ್ಶಿ – ಸಾಕೇ ನಾರಾಯಣ
ಕಾರ್ಯಾಧ್ಯಕ್ಷರು – ಶಂಕರ್ ಎಸ್.
ರಾಜ್ಯ ಸಂಘಟನಾ ಕಾರ್ಯದರ್ಶಿ – ಪ್ರವೀಣ್ ಕುಮಾರ್
ರಾಜ್ಯ ಉಪಾಧ್ಯಕ್ಷರು – ಲಕ್ಷ್ಮೀ ನಾರಾಯಣ ರಾಮನ್
ರಾಜ್ಯ ಉಪಾಧ್ಯಕ್ಷರು – ಕೃಷ್ಣಮೂರ್ತಿ ಎ.
ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ – ಸ್ವಪ್ನ ಜೀ
ಮಹಿಳಾ ರಾಜ್ಯ ಉಪಾಧ್ಯಕ್ಷೆ – ನಾಗರತ್ನ ಎಂ. ಎ.
ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿ – ಮಾಲತಿ ವಿ.
ಕಾರ್ಮಿಕರ ಘಟಕದ ಮಹಿಳಾ ರಾಜ್ಯಾಧ್ಯಕ್ಷೆ – ಶಶಿಕಲಾ ಆರ್.
ಮಹಿಳಾ ಗೌರವಾಧ್ಯಕ್ಷೆ – ಶಕುಂತಲಾ ಗೌಡ
ರೈತ ಘಟಕದ ಮಹಿಳಾ ರಾಜ್ಯಾಧ್ಯಕ್ಷೆ – ನಂದಿನಿ (ಚಿಕ್ಕಬಳ್ಳಾಪುರ)
ರಾಜ್ಯ ಯುವ ಘಟಕದ ಉಪಾಧ್ಯಕ್ಷರು – ಕನ್ನಡ ಧನುಷ್
ದಲಿತ ಮುಖಂಡರು – ನಂಜಪ್ಪ
ಇನ್ನು ಸಭೆಯಲ್ಲಿ ಒಕ್ಕೂಟದ ಹಿರಿಯ ಮುಖಂಡರು, ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭಾಶಯಗಳನ್ನು ತಿಳಿಸಿದರು.

