Breaking
Fri. Aug 14th, 2026

ಬೊಮ್ಮಕ್ಕನಹಳ್ಳಿ ಅಂಡರ್ ಪಾಸ್ ಹದಗೆಟ್ಟು ವಾಹನ ಸವಾರರ ಪರದಾಟ: ಅಪಘಾತಗಳಿಗೆ ಹೊಣೆಯಾರು

ಮೊಳಕಾಲ್ಮುರು(ಅ.14): ರಾಂಪುರದಿಂದ ಬಳ್ಳಾರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 150ಎಕರೆಗೆ ಹೊಂದಿಕೊಂಡಿರುವ ಬೊಮ್ಮಕ್ಕನಹಳ್ಳಿ ಅಂಡರ್ ಪಾಸ್ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ದಿನನಿತ್ಯ ನೂರಾರು ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.

ಹೆದ್ದಾರಿಯ ಅಡಿಯಲ್ಲಿ ಹಾದುಹೋಗುವ ಈ ಅಂಡರ್ ಪಾಸ್ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು, ಕಿತ್ತುಹೋಗಿರುವ ಡಾಂಬರು ಮತ್ತು ಮಳೆ ನೀರು ನಿಲ್ಲುವುದರಿಂದ ಕೆಸರುಮಯವಾಗುವ ಭೀತಿ ಇದ್ದು .ಎರಡೂ ಬದಿ ಬ್ಯಾರಿಕೇಡ್ ಹಾಕಿದ್ದರೂ ರಸ್ತೆ ದುರಸ್ತಿ ಮಾತ್ರ ಆಗಿಲ್ಲ
ಇಲ್ಲಿನ ಸಂಚಾರವು ಬಸ್, ಬೈಕ್ ಸವಾರರಿಗೆ ನರಕಯಾತನೆಯಾಗಿದ್ದು
ಪ್ರತಿದಿನ ಈ ಮಾರ್ಗವಾಗಿ ಬಳ್ಳಾರಿ, ರಾಂಪುರ, ಸುತ್ತಮುತ್ತಲ ಗ್ರಾಮಗಳಿಂದ ಬರುವ ಸರ್ಕಾರಿ ಬಸ್ಸುಗಳು, ಶಾಲಾ ವಾಹನಗಳು, ಸರಕು ಲಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಪ್ರಯಾಣಿಸಲು ಪರದಾಡುತ್ತಿದ್ದಾರೆ. ಗುಂಡಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅಪಘಾತಗಳು ನಡೆಯುವ ಭೀತಿ ಎದುರಾಗಿದೆ. ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ.

“ಇಲ್ಲಿ ದಿನಕ್ಕೆ 2-3 ಬಾರಿ ಬೈಕ್ ಸ್ಕಿಡ್ ಆಗುತ್ತದೆ. ಗರ್ಭಿಣಿಯರು, ವೃದ್ಧರು ಬಸ್‌ನಲ್ಲಿ ಹೋಗುವಾಗ ಪ್ರತಿ ಗುಂಡಿಗೂ ಜರ್ಕ್ ಆಗುತ್ತದೆ.‌ ಇಲ್ಲಿನ ಸವಾರರು ಜೀವದ ಭಯದಲ್ಲಿಸಂಚಾರ ಮಾಡುತದತಿದ್ದು, ಈ ಗುಂಡಿಗಳಿಂದ ಅಪಘಾತಗಳಾದರೆ ಯಾರು ಹೊಣೆ ಎಂದು ” ಎಂದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರ ಆಗ್ರಹ;
ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಅಂಡರ್ ಪಾಸ್ ರಸ್ತೆಯನ್ನು ಸರಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. “NH-150Aಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ತಿಂಗಳುಗಳಿಂದ ಈ ಸ್ಥಿತಿ ಉಂಟಾಗಿದ್ದು ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಸರಿಯಲ್ಲ” ಎಂದು ಸಾರ್ವಜನಿಕರು ದೂರಿ. ಕೂಡಲೇ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಮಾಡಿ ನೀರು ನಿಲ್ಲದಂತೆ ಒಳಚರಂಡಿ ವ್ಯವಸ್ಥೆ ಕಲ್ಪಿಸಿ. ರಾತ್ರಿ ವೇಳೆಗೆ ರಿಫ್ಲೆಕ್ಟರ್ ಮತ್ತು ದೀಪಗಳ ಅಳವಡಿಸಿ. ಜನರ ಪ್ರಾಣಕ್ಕೆ ಕುತ್ತು ತರುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಆಗ್ರಹಿಸಿದ್ದಾರೆ,

NHAI ಗೆ ಮನವಿ:
ಈ ಅಂಡರ್ ಪಾಸ್ ರಾಷ್ಟ್ರೀಯ ಹೆದ್ದಾರಿ 150A ವ್ಯಾಪ್ತಿಗೆ ಬರುವುದರಿಂದ ಇದರ ದುರಸ್ತಿ ಮತ್ತು ನಿರ್ವಹಣೆಯ ಜವಾಬ್ದಾರಿ NHAIಗೆ ಇದೆ. ಆದರೆ ಕಳೆದ ಹಲವು ತಿಂಗಳಿನಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಸಾರ್ವಜನಿಕರು, ಕೂಡಲೇ NHAI ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗುಂಡಿಗಳನ್ನು ಮುಚ್ಚಿ, ರಸ್ತೆಯನ್ನು ಸಂಚಾರಯೋಗ್ಯ ಮಾಡಬೇಕು ಎಂದು ಸ್ಥಳೀಯರು ಆಶಿಸಿದ್ದಾರೆ.

Related Post

Leave a Reply

Your email address will not be published. Required fields are marked *