Breaking
Wed. Jun 24th, 2026

ಕರ್ನಾಟಕ ಸ್ವಾಭಿಮಾನ ಸಂಘಟನೆಗಳ ಒಕ್ಕೂಟ ಬಲವರ್ಧನೆಗೆ ಸಂಕಲ್ಪ: ಪದಾಧಿಕಾರಿಗಳ ಮಹತ್ವದ ಸಭೆ

ಬೆಂಗಳೂರು: ದಿವಂಗತ ಶ್ರೀ ಮಾನ್ಯ ಎ. ಸಿ. ರಾಜು ರವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಇಂದು ಕರ್ನಾಟಕ ಸ್ವಾಭಿಮಾನ ಸಂಘಟನೆಗಳ ವತಿಯಿಂದ ‌‌‌ ಒಕ್ಕೂಟವನ್ನು ರಾಜ್ಯಾದ್ಯಂತ ಬಲವರ್ಧನೆಗೊಳಿಸು ನಿಟ್ಟಿನಲ್ಲಿ ಸಭೆಯನ್ನು ಆಯೋಜಿಸಲಾಗಿದ್ದು . ಈ ಸಂದರ್ಭದಲ್ಲಿ ಸಭೆಯಲ್ಲಿ ” ಸಂಘಟನೆಯ ಸ್ಥಿತಿಗತಿ ಅವಲೋಕನ, ಸದಸ್ಯತ್ವ ವಿಸ್ತರಣೆ, ಯುವಜನರು ಮತ್ತು ಕಾರ್ಯಕರ್ತರ ಭಾಗವಹಿಸುವಿಕೆ, ಮುಂದಿನ ಹೋರಾಟಗಳ ಯೋಜನೆ ಮುಂತಾದ ವಿಷಯಗಳ ಕುರಿತು ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು. ಇದರೊಂದಿಗೆ, ಒಕ್ಕೂಟದ ಆರ್ಥಿಕ ಸ್ಥಿತಿ, ಸದಸ್ಯತ್ವ ಶುಲ್ಕದ ಪರಿಶೀಲನೆ, ಜಿಲ್ಲೆ ಹಾಗೂ ತಾಲ್ಲೂಕು, ಗ್ರಾಮ ಮಟ್ಟದಲ್ಲಿ ಘಟಕಯನ್ನು ಬಲಪಡಿಸುವ ಕುರಿತು ಪದಾಧಿಕಾರಿಗಳಿಂದ ಮಾತುಕತೆ ನಡೆಸಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಯಿತು ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಾಕೇ ನಾರಾಯಣ್ ರವರು ತಿಳಿಸಿದ್ದು. ಈ ವೇಳೆ ಸಭೆಯಲ್ಲಿ ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ಸ್ವಪ್ನ ಜಿ., ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮಾಲತಿ, ರಾಜ್ಯ ಉಪಾಧ್ಯಕ್ಷರಾದ ಶ್ರೀ ಲಕ್ಷ್ಮಿ ನಾರಾಯಣ, ಶ್ರೀ ಕನ್ನಡ ಧನುಷ್, ಶ್ರೀ ಸಾಕೇ ಆಂಜನೇಯಲು ಸೇರಿದಂತೆ ಒಕ್ಕೂಟದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು ಎಂದು ತಿಳಿಸಿದ್ದಾರೆ.

ನಾನು ಇಲ್ಲಪ್ಪ

Related Post

Leave a Reply

Your email address will not be published. Required fields are marked *