Breaking
Tue. Aug 25th, 2026

AECS ಲೇಔಟ್ ಅಕ್ರಮಗಳ ಕುರಿತು ಸಮಗ್ರ ತನಿಖೆಗೆ ವಿವಿಧ ಸಂಘಟನೆಗಳ ಆಗ್ರಹ

ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಅಭಿಯಂತರರ ಪಾತ್ರದ ಕುರಿತು ತನಿಖೆ ನಡೆಸಿ – ತನಿಖೆ ಪೂರ್ಣಗೊಳ್ಳುವವರೆಗೆ ಅಮಾನತು ಮಾಡಬೇಕು

ಬೆಂಗಳೂರು(ಆ. 23): ನಗರದ ಮಹದೇವಪುರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 85 – ದೊಡ್ಡನೆಕ್ಕುಂದಿ, ಬೆಂಗಳೂರು ಪೂರ್ವ ಪಾಲಿಕೆ ವ್ಯಾಪ್ತಿಯ AECS ಲೇಔಟ್ ನಲ್ಲಿ ಹೋಟೆಲ್‌ಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಪಿ.ಜಿ (PG)‌ಗಳಿಗೆ ನಿಯಮಬಾಹಿರವಾಗಿ ಅನುಮತಿಗಳನ್ನು ನೀಡಲಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಅಂತೇಯೆ ಕಟ್ಟಡ ಅತಿಕ್ರಮಣಗಳು ಹಾಗೂ ಕಟ್ಟಡ ನಿಯಮ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಲಂಚ ಸ್ವೀಕಾರ, ಅಧಿಕಾರ ದುರುಪಯೋಗ ಹಾಗೂ ಕರ್ತವ್ಯಲೋಪ ನಡೆದಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ.

ಈ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳಾದ ಶ್ರೀಕಾಂತ ಕೆ., ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಶ್ರೀ ಸಂತೋಷ್, ಸಹಾಯಕ ಅಭಿಯಂತರರು ಅವರ ಪಾತ್ರದ ಕುರಿತು ಯಾವುದೇ ಪೂರ್ವಗ್ರಹವಿಲ್ಲದೆ ಸಮಗ್ರ, ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ದಲಿತ ಪರ ಸಂಘಟನೆಗಳ ಒಕ್ಕೂಟ ಹಾಗೂ ಕನ್ನಡ ಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿವೆ.

ಯಾವೆಲ್ಲಾ ವಿಷಯಗಳ ತನಿಖೆ ನಡೆಯಬೇಕು?


• AECS ಲೇಔಟ್ ನಲ್ಲಿ ಹೋಟೆಲ್‌ಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಪಿ.ಜಿ (PG)ಗಳಿಗೆ ನೀಡಿರುವ ಅನುಮತಿಗಳ ಪರಿಶೀಲನೆ.
• ಕಟ್ಟಡ ನಕ್ಷೆ, ಪರವಾನಗಿ ಹಾಗೂ ಸಂಬಂಧಿತ ಅನುಮೋದನೆಗಳು ನಿಯಮಾನುಸಾರವಿದೆಯೇ ಎಂಬುದರ ಪರಿಶೀಲನೆ.
• ಕಟ್ಟಡ ಅತಿಕ್ರಮಣ ಮತ್ತು ನಿಯಮ ಉಲ್ಲಂಘನೆಗಳ ಕುರಿತು ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಪರಿಶೀಲನೆ.
• ಸಾರ್ವಜನಿಕರಿಂದ ಬಂದ ದೂರುಗಳು ಮತ್ತು ಅವುಗಳ ಮೇಲೆ ಕೈಗೊಂಡ ಕ್ರಮಗಳ ಪರಿಶೀಲನೆ.
• ಸಂಬಂಧಪಟ್ಟ ಅಧಿಕಾರಿಗಳ File Note, Inspection Report, Permission ಮತ್ತು ಸಂಬಂಧಿತ ದಾಖಲೆಗಳ ಪರಿಶೀಲನೆ.
• ಲಂಚ ಸ್ವೀಕಾರ ಅಥವಾ ಅಧಿಕಾರ ದುರುಪಯೋಗದ ಆರೋಪಗಳ ಕುರಿತು ಸೂಕ್ತ ತನಿಖೆ ನಡೆಸುವುದು.

ತನಿಖೆ ಪೂರ್ಣಗೊಳ್ಳುವವರೆಗೆ ಅಮಾನತಿಗೆ ಆಗ್ರಹ

ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಬೇಕಾದರೆ, ತನಿಖೆಯ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವ ಸಾಧ್ಯತೆ ಇರದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ತನಿಖೆ ಪೂರ್ಣಗೊಳ್ಳುವವರೆಗೆ ಅಮಾನತುಗೊಳಿಸಿ, ಸ್ವತಂತ್ರ ತನಿಖಾ ಸಂಸ್ಥೆ ಅಥವಾ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ತನಿಖೆಯಲ್ಲಿ ಆರೋಪಗಳು ಸಾಬೀತಾದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೇವಾ ನಿಯಮಗಳಡಿ ಶಿಸ್ತು ಕ್ರಮ ಹಾಗೂ ಅನ್ವಯಿಸುವ ಕಾನೂನುಗಳಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ

ಸಾರ್ವಜನಿಕರ ದೂರುಗಳು ಮತ್ತು ಆರೋಪಗಳ ಬಗ್ಗೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಸ್ಪಂದಿಸಿ ಪಾರದರ್ಶಕ ತನಿಖೆ ಆರಂಭಿಸದಿದ್ದಲ್ಲಿ, ಫ್ರೀಡಂ ಪಾರ್ಕ್‌ನಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟ ಹಾಗೂ ಕನ್ನಡ ಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಗಳು ಎಚ್ಚರಿಸಿವೆ.

ಇನ್ನೂ ಈ ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ಯುವ ಸಮೂದ ರಾಜ್ಯಾಧ್ಯಕ್ಷರಾದ ಡಾ.ಎಸ್.ಸಂಗಮೇಶ್‌ ವಹಿಸಲಿದ್ದು ಪಾರದರ್ಶಕವಾದ ಆಡಳಿತೆ ವ್ಯವಸ್ಥೆ ನಗರದಲ್ಲಿ ಸ್ಥಾಪನೆಯಾಗಬೇಕು ಅಧಿಕಾರಿಗಳಿದ ನಾವಿಲ್ಲ ನಮ್ಮಿಂದ ಅಧಿಕಾರಿಗಳಿದ್ದಾರೆ ಇದನ್ನು ಅರಿತು ಅವರು ಸೇವೆ ಸಲ್ಲಿಸಿದಾಗಲೆ ಜನರ ಬದುಕು ಸುಗಮವಾಗುವುದು ಅದಕ್ಕಾಗಿಯೇ ನಿಮ್ಮೀ ಹೋರಾಟ ಎಂದು ಮಾಧ್ಯಮಗಳಗೆ ತಿಳಿಸಿದರು.

Related Post

Leave a Reply

Your email address will not be published. Required fields are marked *