Breaking
Mon. Aug 17th, 2026

ಇಂದು ಸಂಜೆ 4 ಗಂಟೆಯೊಳಗೆ ಅರ್ಜಿಸಲಿಕೆಗೆ ಅವಕಾಶ, ಇಲ್ಲದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ರದ್ದು!

ಬೆಂಗಳೂರು (ಆ.17:)ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಪ್ರಮುಖ ಹಂತವಾದ ಗಣತಿ ನಮೂನೆ ಸಲ್ಲಿಕೆಗೆ ದಿನಾಂಕ ಆ.17 (ಇಂದು) ಸಂಜೆ 4 ಗಂಟೆಯವರೆಗೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶ ಇದೆ.ಬೂತ್ ಮಟ್ಟದ ಅಧಿಕಾರಿ (BLO) ಮೂಲಕ ಈಗಾಗಲೇ ಫಾರ್ಮ್ ಪಡೆದಿರುವ ಮತದಾರರು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಸಹಿ ಹಾಕಿ ನಿಗದಿತ ಸಮಯದೊಳಗೆ BLOಗೆ ಹಿಂತಿರುಗಿಸಬೇಕೆಂದು ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ASDDO ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿದ್ದರೆ ನಿರ್ಲಕ್ಷ್ಯ ಮಾಡದೆ SIR ಪ್ರಕ್ರಿಯೆಯಲ್ಲಿ ಕೆಲವು ಮತದಾರರನ್ನು ASDDO (Absent, Shifted, Death, Duplicate, Others) ವಿಭಾಗಗಳಲ್ಲಿ ನಿಮ್ಮ ಹೆಸರನ್ನು ಗುರುತಿಸಲಾಗಿದೆ. ಎಂದರೆ ನಿರ್ಲಕ್ಷ್ಯ ಮಾಡದೆ ಸಂಬಂಧಪಟ್ಟ BLO ಅಥವಾ ಚುನಾವಣಾ ನೋಂದಣಾಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ನೀಡಿ ರೋಲ್‌ಬ್ಯಾಕ್ ಮಾಡಿಸಿಕೊಳ್ಳಬೇಕು. ಇಲ್ಲವಾದರೆ ಆಗಸ್ಟ್ 24ರಂದು ಪ್ರಕಟವಾಗುವ ಕರಡು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸದಿರುವ ಸಾಧ್ಯತೆ ಇರುತ್ತವೆ.ಪ್ರಸ್ತುತ ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದು, ಇವರಲ್ಲಿ 1,08,34,595 (19.55%) ಮಂದಿಯನ್ನು ASDDO ವರ್ಗಕ್ಕೆ ಸೇರಿಸಲಾಗಿದೆ.ಈ ಪೈಕಿ ಒಟ್ಟು 1.08 ಕೋಟಿ ಮತದಾರರ ಹೆಸರು ಹಾಲಿ ಮತದಾರರ ಪಟ್ಟಿಯಿಂದ ರದ್ದಾಗುವ ಸಾಧ್ಯತೆ ಇದ್ದು. ಉಳಿದ 4,45,97,719 ಮತದಾರರ ಹೆಸರು ಕರಡು ಪಟ್ಟಿಯಲ್ಲಿ ಮುಂದುವರಿಯಲಿದೆ.ನೀವು ಸ್ಥಳಾಂತರವಾಗಿದ್ದರೆ Form-6 ತುಂಬಲು ಅವಕಾಶASDDO ಪಟ್ಟಿಯಲ್ಲಿರುವ ಸ್ಥಳಾಂತರಗೊಂಡ ಮತದಾರರು ಅಗತ್ಯ ದಾಖಲೆಗಳೊಂದಿಗೆ Form-6 ಸಲ್ಲಿಸಿದರೆ, ಪರಿಶೀಲನೆಯ ಬಳಿಕ ಅರ್ಹತೆ ಇದ್ದರೆ ಮತ್ತೆ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಬಹುದು. ಇದುವರೆಗೆ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳದ ಹೊಸ ಮತದಾರರಿಗೂ Form-6 ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.ಮುಂದಿನ ವೇಳಾಪಟ್ಟಿBLOಗಳು ಅರ್ಹ ಮತದಾರರನ್ನೂ ASDDO ಪಟ್ಟಿಗೆ ಸೇರಿಸಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ SIR ವೇಳಾಪಟ್ಟಿಯನ್ನು ಎರಡು ಬಾರಿ ಪರಿಷ್ಕರಿಸಿ ರೋಲ್‌ಬ್ಯಾಕ್‌ಗೆ ಹೆಚ್ಚುವರಿ ಅವಕಾಶ ನೀಡಿತ್ತು.ಆ.17: ಮನೆ-ಮನೆ ಭೇಟಿ ಹಾಗೂ ರೋಲ್‌ಬ್ಯಾಕ್‌ಗೆ ಕೊನೆಯ ದಿನ ಆ.27: ಅಂತಿಮ ಮತದಾರರ ಪಟ್ಟಿ ಪ್ರಕಟವಾಗುವಂತಿದ್ದು. ಹೀಗಾಗಿ ಮತದಾರರು ತಮ್ಮ ಹೆಸರು ASDDO ಪಟ್ಟಿಯಲ್ಲಿದೆಯೇ ಎಂದು ತಕ್ಷಣ ಪರಿಶೀಲಿಸಿ, ಅಗತ್ಯವಿದ್ದರೆ ಇಂದು ಸಂಜೆ 4 ಗಂಟೆಯೊಳಗೆ ಚುನಾವಣಾ ಅಧಿಕಾರಿಗಳುನ್ನು ಸಂಪರ್ಕಿಸಿ ನೋಂದಾಯಿಸುವುದು ಉತ್ತಮವಾಗಿದೆ.

Related Post

Leave a Reply

Your email address will not be published. Required fields are marked *