ಪಾವಗಡ: ತಾಲೂಕಿನ ಜನಸಾಮಾನ್ಯರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಒತ್ತಾಯಿಸಿ, ಪಾವಗಡ ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ತಾಲೂಕಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಗಳ ಮೂಲಕ ಪಾವಗಡಕ್ಕೆ ಶೀಘ್ರ ನೀರು ಹರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಬರಗಾಲ ಪೀಡಿತ ಪ್ರದೇಶವಾಗಿರುವ ಪಾವಗಡದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಸಂಬಂಧಪಟ್ಟ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
ತಾಲೂಕಿನ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು, ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯರು, ಸಿಬ್ಬಂದಿ ಹಾಗೂ ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ಸಾರ್ವಜನಿಕರಿಗೆ ಸಮರ್ಪಕ ವೈದ್ಯಕೀಯ ಸೇವೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ರಾಜ್ಯದಲ್ಲಿ ಗುಟ್ಕಾ ನಿಷೇಧದಿಂದಾಗಿ ರೈತರಿಂದ ವರ್ತಕರು ಅಡಿಕೆ ಕೊಳ್ಳಲು ಹಿಂದು ಮುಂದು ನೋಡುತ್ತಿದ್ದು ಗುಟ್ಕಾನಿಷೇದವನ್ನು ಸರ್ಕಾರ ಕೂಡಲೆ ಹಿಂಪಡೆಯಬೇಕೆಂದು ಒತ್ತಾಯಿಸಲಾಗಿದೆ.
ಇದಲ್ಲದೆ, ವೃದ್ಧರು, ಅಂಗವಿಕಲರು,ವಿದವೆಯರು,ಸಂದ್ಯಾಸುರಕ್ಷ ಮುಂತಾದ ಮಾಶಾಸನಗಳನ್ನು ಕರ್ನಾಟಕ ಸರ್ಕಾರವು ನಿಗದಿತ ಸಮಯದಲ್ಲಿ ನೀಡಬೇಕು ಮತ್ತು ಕೆ ವೈ ಸಿ ಯಿಂದ ಪಡಿತರದಾರರು ಸರ್ವರ್ ಸಮಸ್ಯೆಯಿಂದ ದಿನಗಳ ಗಟ್ಟಲೆ ಕಾಯುವುದು ತಪ್ಪಿಸುವಂತೆ ಹಾಗೂ ತಾಲ್ಲೂಕಿನಲ್ಲಿ ದನಕರುಗಳಿಗೆ ಮೇವು ಬ್ಯಾಂಕ್ ಮತ್ತು ಗೋ ಶಾಲೆಗಳನ್ನು ತೆರೆಯಬೇಕೆಂದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇತ್ಯಾದಿ, ತಾಲೂಕಿನ ಜನರ ಪ್ರಮುಖ ಬೇಡಿಕೆಗಳನ್ನು ಪರಿಗಣಿಸಿ ಸಂಬಂಧಪಟ್ಟ ಇಲಾಖೆಗಳ ಮೂಲಕ ತ್ವರಿತವಾಗಿ ಕ್ರಮ ಕೈಗೊಂಡು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮುಖಂಡರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಈ ಪ್ರತಿಭಟನಾ ಸಂದರ್ಭದಲ್ಲಿ ಮಾಜಿ ಶಾಸಕರು. ತಿಮ್ಮರಾಯಪ್ಪ. ಆರ್ ಸಿ. ಅಂಜಿನಪ್ಪ, ತಿಮ್ಮಾರೆಡ್ಡಿ, ಬಲರಾಮ್ ರೆಡ್ಡಿ,. ಸೊಗಡು ವೆಂಕಟೇಶ್, ಕಡಪಲ ಕೆರೆ ನರಸಿಂಹಪ್ಪ, ಕಡಮಲಕುಂಟೆ ಓಬಳೇಶ್, ಅಪ್ಬಂಡೆ ಗೋಪಾಲ್, ಗಗನ್, ಬಿಜೆಪಿ ತಾಲುಕು ಅಧ್ಯಕ್ಷರು ಅಶೋಕ್, ನಲಿಗಾನಹಳ್ಳ. ಮಂಜುನಾಥ್ ಉಪಸ್ಥಿತರಿದ್ದರು


