ಪಾಂಡವಪುರ : ತಾಲೂಕಿನ ಚಿನಕುರಳಿಯಲ್ಲಿ ಇರುವ ಜ್ಞಾನ ವಿಕಾಸ ಶಾಲೆಯ ಬಾಲಕಿಯರ ಕಬಡ್ಡಿ ತಂಡ ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾoಗಣ ದಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಬೇಬಿ ಬೆಟ್ಟದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳನ್ನು ಮಣಿಸಿ ವಿಜೇತಾರಾಗಿ ತಾಲೂಕು ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ.
ಕಬ್ಬಡ್ಡಿ ಆಟದಲ್ಲಿ ಜ್ಞಾನ ವಿಕಾಸ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿಯರಾದ ಸೃಷ್ಟಿ, ಸಹನಾ, ವರ್ಷಿತಾ,ದಕ್ಷ, ಆಯಿಷಾ,ಒಂಬತ್ತ ನೆ ತರಗತಿ ಸ್ವಪ್ನ, ಪಾಯಲ್, ತುಷಿತ ಮುಂತಾದವರು ಭಾಗವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮಿ ಹಾಗೂ ದೈಹಿಕ ಶಿಕ್ಷಕ ಸಂದೀಪ್ ಸೇರಿದಂತೆ ಶಾಲೆಯ ಶಿಕ್ಷಕಿಯರ ವೃಂದ, ಆಡಳಿತ ಮಂಡಳಿಕಾರ್ಯದರ್ಶಿ ಗಜೇಂದ್ರ ಗೋವಿಂದ ರಾಜು ಎಲ್ಲರೂ ಕ್ರೀಡಾ ಪಟುಗಳನ್ನು ಅಭಿನಂದಿಸಿದ್ದಾರೆ
ಜ್ಞಾನ ವಿಕಾಸ ಶಾಲೆಯ ಬಾಲಕಿಯರ ತಂಡ ಕಬ್ಬಡಿ ತಾಲೂಕು ಮಟ್ಟಕ್ಕೆ ಆಯ್ಕೆ

