Breaking
Tue. Jan 27th, 2026

ಸಮಾನ ಕೆಲಸಕ್ಕೆ  ಸಮಾನ ವೇತನಕ್ಕಾಗಿ ಕಾರ್ಮಿಕ ಸಂಘಟನೆಗಳ ಒತ್ತಾಯ

ಬೆಂಗಳೂರಿನ : ಫ್ರೀಡಂ ಪಾರ್ಕ್ ಆವರಣದಲ್ಲಿ ಕಾರ್ಮಿಕರ ಸಂರಕ್ಷಣಾ ಟ್ರೇಡ್ ಯೂನಿಯನ್ ಹಾಗೂ ಕಾರ್ಮಿಕರ ಹಕ್ಕುಗಳ ಸಂರಕ್ಷಣಾ ಸಮಿತಿ ವತಿಯಿಂದ ದಿನಾಂಕ 22.2.2025 ರ ಶನಿವಾರ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿದ್ದು, ಈ ಸಂದರ್ಭದಲ್ಲಿ ತ್ಯಾಗರಾಜ್ ಮತ್ತು ಎನ್ ಓಬಳೇಶ್ ರವರು ಮಾತಾಡುತ್ತಾ.

ಕರ್ನಾಟಕ ರಾಜ್ಯಾoದತ ಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ಘನ್ಯತ್ಯಾಜ್ಯ ನಿರ್ವಹಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಾ ನಗರ ಮತ್ತು ಪಟ್ಟಣ ನಗರಗಳಲ್ಲಿ ಪೌರ ಕಾರ್ಮಿಕ ಚಾಲಕರಾಗಿ ಕಸ ಸಂಗ್ರಹಣೆ ಮಾಡುವ ಸಹಾಯಕರು , ಲೋಡರಗಳನ್ನು ಕಸಸಂಗ್ರಹಣೆ  ಸೇವೆಯನ್ನು ಪರಿಗಣಿಸಿ ತಕ್ಷಣವೇ  ಐ. ಪಿ. ಡಿ. ಸಾಲಪ್ಪರವರು ಸ್ವಚ್ಛತಾ ಕಾರ್ಮಿಕರ ಜೀವನ ಸುಧಾರಣೆ ಹಾಗೂ ಸೇವಾ ಭದ್ರತೆಗಾಗಿ ಕರ್ನಾಟಕ ರಾಜ್ಯ ಸಲ್ಲಿಸಿರುವ ಸಂಜೀವಿನಿ ಯಾವುದಾದರೂ ಎಂದರೆ  ಕರ್ನಾಟಕ ರಾಜ್ಯ ಸರ್ಕಾರವು 1972 ನೇ ಸಾಲಿನಲ್ಲಿ ಸಂವಿಧಾನ ಬದ್ದವಾಗಿ ನೇಮಿಸಿದ ” The committee of Improvement of Service and Working condition of Sweepers and Seavenger ” (ಸಾಲಪ್ಪ ಸಮಿತಿ) ಸಮಗ್ರ ವರದಿ ಹಾಗೂ ವರದಿಯ ಪ್ರಕಾರ ಅನುಸಾರ  ಕಲಮು : 2 ,5 ,7 ,17 ರಲ್ಲಿ  ತಿಳಿಸಿರುವ ಸಂವಿಧಾನಾತ್ಮಕ ಬೇಡಿಕೆಗಳನ್ನು ಈಡೇರಿಸುವಂತೆ. ಈ ಅಂಶಗಳನ್ನು ಮುಖ್ಯ ದುಷ್ಠಿಯಲ್ಲಿ ಇಟ್ಟುಕೊಂಡು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇದೆ ಫೆಬ್ರವರಿ ದಿನಾಂಕ  27 ತಾರೀಖು ರಿಂದ  ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತೀರ್ಮಾನಿಲಾಗಿದೆ. ಕರ್ನಾಟಕ ರಾಜ್ಯದಾದ್ಯಂತ ಮತ್ತು ಬೆಂಗಳೂರಿನ 198 ವಾರ್ಡ್ ಗಳಲ್ಲಿನ ಎಲ್ಲಾ ಕಸ ಸಂಗ್ರಹಿಸುವ ಮತ್ತು ತೊಲಗಿಸುವ  ಎಲ್ಲಾ ಚಾಲಕರೂ, ಸಹಾಯಕರು ಲೋಡರಸ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಿಮ್ಮ ಮತ್ತು ನಿಮ್ಮ  ಮುಂದಿನ ಪೀಳಿಗೆಗೆ ಭದ್ರತವಾದ ಜೀವನ ಕಟ್ಟು ಕೊಳ್ಳಲಿಕೆ ಈ ಹೊರಟದಲ್ಲಿ ಭಾಗವಹಿಸಿ ನಿಮ್ಮ ಜೀವನಗಳನ್ನು ಕಟ್ಟು ಕೊಂಡು ಯಶಸ್ವಿ ಗೊಳಿಸಲು ಕೋರುತ್ತಿದ್ದೀವೆ ಹಾಗೂ ರಾಜ್ಯದಲ್ಲಿರುವ ಎಲ್ಲಾ ನೇರವೇತನ ಪೌರಕಾರ್ಮಿಕರು, ಚಾಲಕ, ಸಹಾಯಕ, ಲೋಡರ್ಸ್, ಚರಂಡಿ ಕಾರ್ಮಿಕರು ಎಲ್ಲರನ್ನು ಏಕಕಾಲದಲ್ಲಿ ಖಾಯಂ ಆಗಿ, ಶೋಷಿತರ ಶೋಷಿತಣೆಯಿಂದ ಬಂಧ ಮುಕ್ತರಾಗಿ ನೆಮ್ಮದಿ ಜೀವನ ಸಾಗಿಸಲು ಸಾಧ್ಯವಾಗಬೇಕು ಎಂದು ತಿಳಸಿದರು. ಈ ಸಭೆಯಲ್ಲಿ ತ್ಯಾಗರಾಜ್, ಸಾಮಾಜಿಕ ಹೋರಾಟಗಾರ ಸಾಕೆ ನಾರಾಯಣ, ಓಬಳೇಶ್ಮುಂ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. 

Related Post

Leave a Reply

Your email address will not be published. Required fields are marked *