Breaking
Tue. Jan 27th, 2026

ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ 6 ರೂಗಳ ಏರಿಕೆ

ನವದೆಹಲಿ : ಮಾರ್ಚ್ ತಿಂಗಳ ಮೊದಲ ದಿನವೇ ಎಲ್‌ಪಿಜಿ ಗ್ರಾಹಕರಿಗೆ ಬಿಗ್ ಶಾಖ್, ಮಾರ್ಚ್ 1, 2025 ರಂದು ಎಲ್‌ಪಿಜಿ ಬೆಲೆಗಳು ಏರಿಕೆಯಾಗುತ್ತಿದ್ದು. ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಹೆಚ್ಚಿಸಿವೆ ಎಂದು ತಿಳಿದು ಬಂದಿದೆ. ದೆಹಲಿಯಿಂದ ಕೋಲ್ಕತ್ತಾ ವರೆಗೆ ಈ ಸಿಲಿಂಡರ್ ನ ಬೆಲೆ 6 ರೂಗಳು ಏರಿಕೆಯಾಗಿದೆ.ಇದಕ್ಕೂ ಮೊದಲು ಅಂದರೆ ಫೆಬ್ರವರಿ 1, 2025 ರಂದು, ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 7 ರೂಗಳ ವರೆಗೆ ಇಳಿಸಿದ್ದವು. ಆದರೇ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಫೆಬ್ರವರಿಯಲ್ಲಿ ಸತತ ಎರಡನೇ ತಿಂಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿತ್ತು. ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಎಲ್‌ಪಿಜಿ ಬೆಲೆಯನ್ನು ಪರಿಷ್ಕರಣೆಯು ಈ ಬದಲಾವಣೆಯ ಏರಿಳಿತಾಗಳಿಗೆ ಕಾರಣ ಎನ್ನಲಾಗಿದೆ.

Related Post

Leave a Reply

Your email address will not be published. Required fields are marked *