Breaking
Tue. Jan 27th, 2026

ಮಾದಿಗ ಸಂಘಟನೆಗಳಿಂದ 24 ರಂದು ಬೃಹತ್ ಪ್ರತಿಭಟನೆ; ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಪಾವಗಡ ಬಂದ್

module: a; hw-remosaic: 0; touch: (-1.0, -1.0); modeInfo: ; sceneMode: NightHDR; cct_value: 0; AI_Scene: (-1, -1); aec_lux: 65.0; hist255: 0.0; hist252~255: 0.0; hist0~25: 0.0;

ಪಾವಗಡ(ಸೆ.15) : ಮಾದಿಗ ಸ್ವಾಭಿಮಾನಿ ಸಂಘಟನೆ ಒಕ್ಕೂಟ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ನಗರದ ನಿರೀಕ್ಷಣ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಪೋಲೆನಹಳ್ಳಿ ಹಾಗೂ ಬೆಳ್ಳಿಬಟ್ಲು ಗ್ರಾಮಗಳಲ್ಲಿ ನಡೆದ ಕೊಲೆಯನ್ನು ಸೇರಿದಂತೆ ಜಿಲ್ಲೆಯ ಹಲವೆಡೆ ನಡೆಯುತ್ತಿರುವ ಜಾತಿ ದೌರ್ಜನ್ಯವನ್ನು ಖಂಡಿಸಿ ಸೆ.24 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ. ಮಾದಿಗ ಸ್ವಾಭಿಮಾನಿ ಸಂಘಟನೆಗೆ ಒಕ್ಕೂಟ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕೇಶವ ಮೂರ್ತಿ ಮಾತನಾಡಿ ದಿನೇ ದಿನೇ ತುಮಕೂರು ಜಿಲ್ಲೆಯಲ್ಲಿ ದಲಿತರ ಮತ್ತು ಶೋಷಿತ ವರ್ಗಗಳ ಮೇಲೆ ಸವರ್ಣಿ ಜಾತಿಗಳ ಪಾಳೇಗಾರಿಕೆ ದೌರ್ಜನ್ಯದ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಖಂಡಿಸಿ ಮಧುಗಿರಿಯಲ್ಲಿ ಇದೇ ತಿಂಗಳು ಸೆಪ್ಟೆಂಬರ್ 24 ರಂದು ಬೃಹತ ಪ್ರತಿಭಟನೆಯನ್ನು ಮಾದಿಗ ಮತ್ತು ದಲಿತ ಸಂಘಟನೆಗಳ ಒಕ್ಕೂಟದಿಂದ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳುತ್ತಾ, ಕಳೆದ ಮೂರು ದಿನಗಳ ಹಿಂದೆ ಪಾವಗಡ ತಾಲೂಕಿನ ಬೆಳ್ಳಿಬಟ್ಟು ಗ್ರಾಮದಲ್ಲಿ ಮಗುವೊಂದು ರಸ್ತೆಬದಯಲ್ಲಿ ಆಟವಾಡುತ್ತ ದ್ವಿಚಕ್ರವಾಹನಕ್ಕೆ ಅಡ್ಡ ಬಂದಿತ್ತು ಎಂಬ ಚಿಕ್ಕ ವಿಷಯಕ್ಕೆ ಮಗುವಿನ ಕುಟುಂಬದವರ ಮೇಲೆ ಹಲ್ಲೆ ಮಾಡಿ ಮಗುವಿನ ಅಜ್ಜನನ್ನು ಹಲ್ಲೆಯ ಮೂಲಕ ಕೊಂದರುವುದು ಅಮಾನವೀಯ ಘಟನೆಯಾಗಿದೆ. ಮೃತ ವ್ಯಕ್ತಿ ಹನುಮಂತರಾಯಪ್ಪ ಮಾದಿಗ ಜನಾಂಗಕ್ಕೆ ಸೇರಿದವರಾಗಿದ್ದು ಇವರ ಮೇಲೆ ನಾಯಕ ಜನಾಂಗಕ್ಕೆ ಸೇರಿದ ವಾಲ್ಮೀಕಿ ಎಂಬ ಯುವಕ ಹಲ್ಲೆ ನಡಿಸಿರುವುದಾಗಿ ಪೊಲೀಸ್ ದೂರಿನಿಂದ ಸಾಬೀತಾಗಿದೆ.ಒಂದು ವಾರದ ಹಿಂದೆ ಇಂತಹದೇ ಘಟನೆಯೂ ಮಧುಗಿರಿ ತಾಲ್ಲೂಕು ಪೋಲೇನಹಳ್ಳಿ ಗ್ರಾಮದಲ್ಲಿ ನೀರಿನ ವಿಚಾರಕ್ಕೆ ಪ್ರಶ್ನೆ ಮಾಡಿದ ಮಾದಿಗ ಜನಾಂಗಕ್ಕೆ ಸೇರಿದ ವ್ಯಕ್ತಿಯನ್ನು ಗ್ರಾಮ ಪಂಚಾಯಿತಿಯ ಸದಸ್ಯ ನಾಗೇಶ್ ಬೊಲೋರಿದಿಂದ ಗುದ್ದಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವುದು ದುರಂತದ ಸಂಗತಿ ಹೀಗೆ ಮಾದಿಗ ಸಮುದಾಯಗಳ ಮೇಲೆ ನಿರಂತರ ದೌರ್ಜನ್ಯಗಳು ಮತ್ತು ಹಲ್ಲೆಗಳು ನಡೆಯುತ್ತಿದ್ದರು ಜನಪ್ರತಿನಿಧಿಗಳು ಮತ್ತು ಪೊಲೀಸ್ ಅಧಿಕಾರಿಗಳು ಮೌನವಾಗಿರುವುದು ದೌರ್ಜನ್ಯಕ್ಕೆ ಪರೋಕ್ಷ ಬೆಂಬಲ ನೀಡಿದಂತಿದೆ, ಈ ರೀತಿಯ ಅಧಿಕಾರಿಗಳ ವರ್ತನೆಯು ಈ ಸಮಾಜಕ್ಕೆ ಶೋಭೇಟರುವಂತಹದ್ದು ಅಲ್ಲ, ಕೂಡಲೇ ಅಧಿಕಾರಿಗಳು ಇಂತಹ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.ಈ ವೇಳೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎಸ್.ಎಸ್. ಯೋಗಿ ಸಿದ್ದರಬೆಟ್ಟ , ಜಿಲ್ಲಾ ಮುಖಂಡರಾದ ಸತ್ಯಪ್ಪ, ರಾಜಣ್ಣ, ಮೇಘರಾಜ್ ಹಾಗೂ ಪಾವಗಡ ತಾಲ್ಲೂಕು ದಲಿತ ಮುಖಂಡರಾದ ಕನ್ನಮೆಡಿ ಕೃಷ್ಣ ಮೂರ್ತಿ, ಮಂಗಳವಾಡ ಮಂಜಣ್ಣ, ದೇವಲಕೆರೆ ನಿಂಗಣ್ಣ, ಉಮೇಶ್ ಬೆಳ್ಳಿಬಟ್ಲು, ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಹನುಮಂತರಾಯಪ್ಪ, ಕಡಪಲಕೆರೆ ನರಸಿಂಹಪ್ಪ , ಶೈಲಾಪುರಾ ನಾಗರಾಜು ಮುಂತಾದವರು ಉಪಸ್ಥಿತಿದ್ದರು.

Related Post

Leave a Reply

Your email address will not be published. Required fields are marked *