
ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನಲ್ಲಿ ದಿನಾಂಕ.6/01/25 ಸೋಮವಾರ ರಿಯಲ್ ಎಸ್ಟೇಟ್ ನಾರಾಯಣ ರೆಡ್ಡಿ ಅವರದು ಅಕ್ರಮ ಸಂಬಂಧದ ವಿಚಾರವನ್ನು ಕೆಲವೊಂದು ದಿನಗಳ ಹಿಂದೆ ಗಡಿನಾಡು ಮಿತ್ರ ಪತ್ರಿಕೆಯ ಸಂಪಾದಕ ರಾಮಾಂಜಿನಪ್ಪ ರವರು ತಮ್ಮ ಪತ್ರಿಕೆಯಲ್ಲಿ ವರದಿ ಮಾಡಿದ್ದಕ್ಕೆ ದ್ವೇಷಕಾರಿದ ನಾರಾಯಣ್ ರೆಡ್ಡಿ ಅವರ ಕುಟುಂಬದ ಮಹಿಳೆಯರಿಗೆ ಕುಮ್ಮಕ್ಕು ನೀಡಿ ಪಾವಗಡ ಪಟ್ಟಣದಲ್ಲಿರನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ರಾಮಾಂಜಪ್ಪನವರನ್ನು ಅರೆ ಬೆತ್ತಲೆ ಗೊಳಿಸಿ ಮೂವರು ಮಹಿಳೆಯರು ಹಲ್ಲೆ ನಡೆಸಿರುವ ಬಗ್ಗೆ ದಿನಾಂಕ,7/01/25 ಮಂಗಳವಾರ ಬೆಳಿಗ್ಗೆ 12:00 ಸಮಯದಲ್ಲಿ ಪಾವಗಡ ತಾಲ್ಲೂಕಿನಲ್ಲಿರುವ ಪತ್ರಕರ್ತರ ಸಂಘದಿಂದ ವತಿಯಿಂದ ಪಟ್ಟಣದ ನಿರೀಕ್ಷಣ ಮಂದಿರದಿಂದ ಶನಿ ಮಹಾತ್ಮ ಸರ್ಕಲ್ ವರೆಗೂ ಪಾದಯಾತ್ರ ಮೂಲಕ ಪ್ರತಿಭಟನೆ ಕೈಗೊಂಡು. ತಾಲ್ಲೂಕು ದಂಡಾಧಿಕಾರಿಗಳಿಗೆ ಸೇರಿದಂತೆ ಆರಕ್ಷಕ ವೃತ್ತ ನಿರೀಕ್ಷ ಕರಿಗೆ ಕಾನೂನು ಕ್ರಮಕ್ಕಾಗಿ ಮನವಿ ಸಲ್ಲಿಸಲಾಯಿತು. ಈ ವೇಳೆ ಪತ್ರಕರ್ತ ಸಂಘದ ಅಧ್ಯಕ್ಷರಾದ ಹನುಮಂತರಾಯಪ್ಪ ಅವರ ಮಾತನಾಡಿ ಹಲ್ಲೆ ನಡೆಸಿರುವ ಆರೋಪಿಗಳ ವಿರುದ್ಧ ಕಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದ್ದು. ಈ ಸಂದರ್ಭದಲ್ಲಿ ತಾಲ್ಲೂಕಿನ ಅನೇಕ ಪತ್ರಕರ್ತರು ಭಾಗವಹಿಸಿದ್ದು. ಈ ಪ್ರತಿಭಟನೆಗೆ ಜೆ.ಡಿ.ಎಸ್ ಪಕ್ಷದ ತಾಲ್ಲೂಕು ಘಟಕದಿಂದ ಬೆಂಬಲ ವ್ಯಕ್ತ ಪಡಿಸಿದ್ದು. ಹಲ್ಲೆಯನ್ನು ತೀವ್ರವಾಗಿ ಖಂಡಿಸುತ್ತಾ ನಾರಾಯಣರೆಡ್ಡಿ ಮತ್ತು ಅವರ ಕುಟುಂದ ಮಹಿಳೆಯರ ಮೇಲೆ ಗೂಂಡ ಕಾಯಿದೆ ಮತ್ತು ರೌಡಿಶಿಟರ್ ಮಾಡಿ ತಾಲ್ಲೂಕಿನಿಂದ ಗಡಿಪಾರು ಮಾಡಬೇಕೆಂದು ಪಕ್ಷದ ತಾ. ಅಧ್ಯಕ್ಷ ಎನ್.ಎ.ಈರಣ್ಣ ನವರು ತ್ತಾಲ್ಲೂಕು ಆಡಳಿತವನ್ನು ಒತ್ತಾಯಿಸಿ ಭಹಿರಂಗ ಪತ್ರ ಬರೆದಿದ್ದಾರೆ.


