Breaking
Tue. Jan 27th, 2026

ನ್ಯಾ. ನಾಗಮೋಹನದಾಸ್ ಆಯೋಗಕ್ಕೆ ರಾಜ್ಯದ ಎಲ್ಲ ತಾಲೂಕುಗಳಿಂದ ಮಾದಿಗರ ದತ್ತಾಂಶ ಸಂಗ್ರಹಿಸಿ ಸಲ್ಲಿಸುವಂತೆ ಮಾದಿಗ ಸಂಘಟನೆಗಳಿಗೆ ಪಾವಗಡ ಶ್ರೀರಾಮ್ ಕರೆ

ಬೆಂಗಳೂರು :ರಾಜಾಜಿನಗರ ಅರಕಲಗೂಡು ವೆಂಕಟರಾಮಯ್ಯ ನವರ ಸಭಾಂಗಣದಲ್ಲಿ ಮಾದಿಗ ದಂಡೋರ ಮತ್ತು ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ  ಗೌರವಾನ್ವಿತ ಮಾನ್ಯ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗಕ್ಕೆ ಮಾದಿಗರ ದತ್ತಾಂಶ ಸಂಗ್ರಹಿಸಿ ಆಯೋಗಕ್ಕೆ ಸಲ್ಲಿಸಲು ನಿಟ್ಟಿನಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಾವಗಡ ಶ್ರೀರಾಮ್ ರವರು “ ಸ್ವಾತಂತ್ರ್ಯ ಲಭಿಸಿ ೭೫ ವರ್ಷ ಕಳೆದರು ಪರಿಶಿಷ್ಟರಲ್ಲಿ ಕೆಲವು ಜಾತಿಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಈ ಹಿಂದುಳಿಯುಕೆಗೆ ಕಾರಣ ಹುಡುಕಲು ಈಗಾಗಲೇ ಹಲವು ಆಯೋಗ, ಸಮಿತಿಗಳು ರಚನೆಯಾಗಿ ವರದಿ ಸಲ್ಲಿಕೆಯಾಗಿವೆ. ಅವುಗಳಲ್ಲಿನ ದತ್ತಾಂಶ ಮತ್ತು ಆಯಾ ತಾಲೂಕು ಮಟ್ಟದಲ್ಲಿ ಲಭ್ಯವಿರುವ ಅಂಕಿ ಅಂಶಗಳು ಸಂಗ್ರಹಿಸಿ ಪ್ರತಿ ತಾಲೂಕಿನಿಂದ ಪ್ರತ್ಯೇಕ ಮನವಿಯನ್ನು ಆಯೋಗಕ್ಕೆ ಸಲ್ಲಿಸುವುದು ಇಂದು ಅತ್ಯಗತ್ಯವಾಗಿದೆ. ಆಯ್ಕೆಯಾದ ಸರ್ಕಾರಗಳು ಆಯಾ ಕಾಲಕ್ಕೆ ತನ್ನಲ್ಲಿನ ಸಮುದಾಯಗಳ ಅಭಿವೃದ್ಧಿ, ಹಿಂದುಳಿಯುವಿಕೆ ಕುರಿತಂತೆ ಪರಾಮರ್ಶಿಸಿ ಆಸಮಾನತೆ ನಿವಾರಣೆಗೆ ಮಾಡಬೇಕೆಂದು ಸಂವಿಧಾನ ಹೇಳಿದ್ದರೂ, ರಾಜ್ಯದಲ್ಲಿ ಸಮರ್ಪಕ ಅಧಿಕಾರ ನಡೆಸಿದ, ಮಾದಿಗ ಸಮುದಾಯದ ಜನರ ಕಷ್ಟಗಳನ್ನು ಕಣ್ತೆರೆದು ನೋಡದೇ ಇದ್ದಾಗ ಸಮುದಾಯದ ಜನರು ಅವಕಾಶಗಳಿಂದ ವಂಚಿತರಾಗುತ್ತಾಬಂದಿದ್ದಾರೆ. ಇದಕ್ಕೆ ಅಂತ್ಯವಾಡಲು ಆಯೋಗದ ಮುಂದೆ ನಮ್ಮ ನೋವಿನ ಸಮರ್ಥನೆ ಮಾಡಿಕೊಳ್ಳಬೇಕಿದೆ . ಸರ್ಕಾರದ ವಿವಿಧ ಇಲಾಖೆಗಳಲ್ಲಿ ಎಲ್ಲ ಸಮುದಾಯಗಳ ದತ್ತಾಂಶ ಇರುತ್ತದೆ. ಅದನ್ನೇ ಆಧರಿಸಿ ಒಳಮೀಸಲು ನೀಡಬೇಕಿತ್ತು. ಆದಾಗ್ಯೂ ಹೊಸ ಆಯೋಗ ರಚಿಸಿದೆ. ನಮ್ಮ ಬೇಡಿಕೆ ಈಡೇರಿಸುವಾಗ ಮಾತ್ರ ಇಂತಹ ನೆಪಗಳನ್ನು ಹುಡುಕಲಾಗುತ್ತಿದೆ. ಭಾವನಾತ್ಮಕತೆ ಬಿಟ್ಟು ವಾಸ್ತವ ನೆಲೆಗಟ್ಟಿನಲ್ಲಿ ದತ್ತಾಂಶ ಇದ್ದ ಮನವಿಯನ್ನು ಆಯೋಗಕ್ಕೆ ಸಲ್ಲಿಸೋಣ ಎಂದು ಮನವಿ ಮಾಡಿದರು. ಪ್ರಕೃತಿಯಲ್ಲಿ ಅಸಮತೋಲನವಾದರೆ ಬಿರುಗಾಳಿ, ಭೂಕಂಪ, ಪ್ರವಾಹ ಹುಟ್ಟಿಕೊಳ್ಳುತ್ತವೆ. ಮಾನವ ಸಮಾಜದಲ್ಲಿ ತಾರತಮ್ಯವಾದರೆ ಕ್ರಾಂತಿ ಹುಟ್ಟಿಕೊಳ್ಳುತ್ತದೆ. ಇಂಥ ಕ್ರಾಂತಿಯನ್ನು ಮಾದಿಗ ಸಮುದಾಯ ಮಾಡಿದೆ. ಅದರ ಫಲ ದಕ್ಕುವ ಸಮಯ ಬಂದಿದೆ ಎಂದು ಪಾವಗಡ ಶ್ರೀ ರಾಮಲು ನುಡಿದ್ದರು ಹಾಗೂ ಪರಿಶಿಷ್ಟ ಜಾತಿಗಳಿಗೆ ಒಳಮೀಸಲು ಕಲ್ಪಿಸಲು ರಾಜ್ಯ ಸರ್ಕಾರ ನೇಮಿಸಿರುವ ನ್ಯಾ. ನಾಗಮೋಹನದಾಸ್ ಆಯೋಗಕ್ಕೆ ರಾಜ್ಯದ ಎಲ್ಲ ತಾಲೂಕುಗಳಿಂದ ಅಲ್ಲಿನ ಮಾದಿಗರ ದತ್ತಾಂಶ ಸಂಗ್ರಹಿಸಿ ಸಲ್ಲಿಸುವಂತೆ ಮಾದಿಗ ಸಂಘಟನೆಗಳಿಗೆ ಕರೆ ನೀಡಿದರು. ಈ ವೇಳೆ ಸಭೆಯಲ್ಲಿ ಆಯೋಜಕರಾದ ಜಿ. ಟಿ. ಮುತ್ಯಾಲು, ರಾಪ್ಟ ನರಸಿಂಹಲು, ದಲಿತ ಸೈನ್ಯ ರಾಜ್ಯಾಧ್ಯಕ್ಷರು ಹಾಗು ಪತ್ರಕರ್ತರು ಸಾಕೆ ನಾರಾಯಣ ,ಗಂಗರಾಜ್, ಮುರಳಿ ಮುತ್ಯಾಲಪ್ಪ, ಗಣೇಶ್, ಅಂಜಿನಪ್ಪ, ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Post

Leave a Reply

Your email address will not be published. Required fields are marked *