Breaking
Tue. Jan 27th, 2026

ಎಮ್.ವಿ.ಎಸ್ಎಸ್‌ ನಿಂದ ಒಳಮೀಸಲಾತಿ ಜಾರಿಗಾಗಿ ವಿವಿದ ರೀತಿ ಹೋರಾಟಕ್ಕೆ ತಯಾರಿ

ಬೆಂಗಳೂರು : ಒಳಮೀಸಲಾತಿ  ಜಾರಿಗಾಗಿ ಮಾದಿಗ ಸಮುದಾಯಗಳ ಸ್ವಾಭಿಮಾನಿದ ಒಕ್ಕೂಟ M S S V ವತಿಯಿಂದ ದಿನಾಂಕ 7.1.2025 ಮಂಗಳವಾರ ರಂದು ಪೂರ್ವಭಾವಿ ಸಭೆಯನ್ನು ತಾಮರ ಹೋಟೆಲ್ ನಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಸಮುದಾಯದ ಪ್ರಮುಖ ಮುಖಂಡರು ಮತ್ತು ಸಮುದಾಯದ ಹಿತೈಷಿಗಳು ಪಾಲ್ಗೊಂಡಿದ್ದು, ಮಾದಿಗ ಸಮುದಾಯದ ಮುಂದಿನ ನವಪೀಳಿಗೆಗೆ ಏಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಂದಿನಗಳ ಅರೋಗ್ಯಕಾರವಾಗಿ ಇರಲಿಕ್ಕೆ ಬಹುಮತಾಭಿಪ್ರಾಯದಿಂದ ಈ ನಿರ್ಣಯಗಳು  ಕೆಳಗಿನoತೆ ಕಾರ್ಯರೂಪಕ್ಕೆತರುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ದಿನಾಂಕ 10.1.2025 ಶುಕ್ರವಾರ  ನ್ಯಾಯಮೂರ್ತಿ  ಮಾನ್ಯ ನಾಗಮೋಹನ್ ದಾಸ್ ರವರಿಗೆ ರಾಜ್ಯ ಮುಖಂಡರಿಂದ ಸಿದ್ದಪಡಿಸಿದ ಮಾಹಿತಿಯನ್ನು ಮನವಿ ಸಲ್ಲಿಸುವುದು.

ದಿನಾಂಕ 22.1.2025 ಎಲ್ಲಾ ಜಿಲ್ಲೆಗಳಲ್ಲೂ ಒಕ್ಕೂಟದಿಂದ ಪತ್ರಿಕಾಗೋಷ್ಠಿ ಮಾಡುವುದು.

ದಿನಾಂಕ 23.1.2025 ಗುರುವಾರ ರಂದು ರಾಜ್ಯಾದ್ಯoತ  ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಆಯೋಗಕ್ಕೂ ಮತ್ತು ಮುಖ್ಯಮಂತ್ರಿಗಳಿಗೆ ಹಾಕ್ಕೊತ್ತಾಯದ ಮನವಿ ಸಲ್ಲಿಸುವುದು. ದಿನಾಂಕ 29.1.2025 ಬುಧವಾರ ರಂದು ನ್ಯಾಯಮೂರ್ತಿ A. J. ಸದಾಶಿವ ಆಯೋಗದ ವರದಿಯಲ್ಲಿರುವ ವೈಜ್ಞಾನಿಕವಾದ ಸಮೀಕ್ಷೆಯ ದತ್ತಾoಶಗಳನ್ನು ಮತ್ತೆ ಕರೆದು ಪರಿಗಣಿಸಲು ಒತ್ತಾಯಿಸಿ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ನಡೆಸಲಾಗುವುದೆಂದು ಘೋಷಿಸಿದರು

ವರದಿ : ಸಾಕೆ ನಾರಾಯಣ

Related Post

Leave a Reply

Your email address will not be published. Required fields are marked *