Site icon NBTV Kannada

ಪಾವಗಡದಲ್ಲಿ ‘ನಾಗಲಕ್ಷ್ಮಿ ಫುಡ್ ಇಂಡಸ್ಟ್ರೀಸ್’ ಆರಂಭ: ಕೋಡಿಹಳ್ಳಿ ಷಡಕ್ಷರಿ ಮುನಿ ಸ್ವಾಮೀಜಿಯಿಂದ ಉದ್ಘಾಟನೆ

ಪಾವಗಡ: ತಾಲೂಕಿನ ಕಡಮಲಕುಂಟೆ ಸಮೀಪದ ಕೈಗಾರಿಕಾ ವಲಯದಲ್ಲಿ ನಿವೃತ್ತ ಶಿಕ್ಷಕ ಮಾರಪ್ಪ ಅವರು ನೂತನವಾಗಿ ಸ್ಥಾಪಿಸಿರುವ ‘ನಾಗಲಕ್ಷ್ಮಿ ಫುಡ್ ಇಂಡಸ್ಟ್ರೀಸ್’ ಉದ್ಘಾಟನಾ ಸಮಾರಂಭ ವಿಜೃಂಭಣೆಯಿಂದ ನೆರವೇರಿತು.

ಹಿರಿಯೂರು ತಾಲೂಕಿನ ಕೋಡಿಹಳ್ಳಿ ಮಠದ ಮಠಾಧಿಪತಿಗಳಾದ ಶ್ರೀ ಷಡಕ್ಷರಿ ಮುನಿ ಸ್ವಾಮೀಜಿಯವರು ಕಾರ್ಯಕ್ರಮಕ್ಕೆ ಆಗಮಿಸಿ, ರಿಬ್ಬನ್ ಕತ್ತರಿಸುವ ಮೂಲಕ ನೂತನ ಆಹಾರ ಸಂಸ್ಕರಣಾ ಉದ್ಯಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಉದ್ಯಮದ ಬೆಳವಣಿಗೆ ಹಾಗೂ ಮಾಲೀಕರ ಮುಂದಿನ ಕಾರ್ಯಗಳಿಗೆ ಶುಭ ಹಾರೈಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಕೈಗಾರಿಕೆಗಳು ಆರಂಭವಾಗುವುದರಿಂದ ಸ್ಥಳೀಯವಾಗಿ ಉದ್ಯಮಶೀಲತೆಗೆ ಉತ್ತೇಜನ ದೊರೆಯುವುದರ ಜತೆಗೆ ಆರ್ಥಿಕ ಚಟುವಟಿಕೆಗಳಿಗೂ ಅನುಕೂಲವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಬಸವಲಿಂಗಪ್ಪ, ಶಿವಕುಮಾರ್ ಸಾಕೇಲ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ನರಸಿಂಹರಾಜ್, ವಕೀಲ ಟಿ.ಎನ್. ಪೇಟೆ ರಮೇಶ್, ಸೂರ್ಯ ಪ್ರಗತಿ ಪತ್ರಿಕೆಯ ಪತ್ರಕರ್ತ ಮೀನಕುಂಟನಹಳ್ಳಿ ನರಸಿಂಹಪ್ಪ, ನಲಿಗಾನಹಳ್ಳಿ ಮಂಜುನಾಥ್, ವೈ.ಎನ್. ಹಳ್ಳಿ ಸುಬ್ಬಾರಾಯಪ್ಪ ಸೇರಿದಂತೆ ತಾಲೂಕಿನ ವಿವಿಧ ದಲಿತ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.

Exit mobile version