Site icon NBTV Kannada

ದಲಿತ ಸಾಹಿತ್ಯ ಪರಿಷತ್ತಿನ ನಡೆ ಶಾಲಾ ಕಾಲೇಜುಗಳ ಕಡೆ ಕಾರ್ಯಕ್ರಮದಲ್ಲಿ ಪ್ರತಿಭಾ ವಿದ್ಯಾರ್ಥಿಗಳಿ ಪುರಸ್ಕಾರ

ಮಾನವಿ: ದಲಿತ ಸಾಹಿತ್ಯ ಪರಿಷತ್ ಮಾನವಿ ತಾಲೂಕು ಘಟಕದ ವತಿಯಿಂದ ‘ದಲಿತ ಸಾಹಿತ್ಯ ಪರಿಷತ್ತಿನ ನಡೆ – ಶಾಲಾ ಕಾಲೇಜುಗಳ ಕಡೆ’ ಎಂಬ ಧ್ಯೇಯವಾಕ್ಯದೊಂದಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪರಿಷತ್ತಿನ ರಾಜ್ಯಾಧ್ಯಕ್ಷರಿಗೆ ಅಭಿನಂದನಾ ಸಮಾರಂಭ ಪಟ್ಟಣದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ರಾಯಚೂರು ಭಾಗದ ಯುವ ಕವಿ ಹಾಗೂ ಕ್ರಾಂತಿಕಾರಿ ಬರಹಗಾರ ಪ್ರಶಾಂತ್ ದಾನಪ್ಪ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು. ಪ್ರಶಾಂತ್ ದಾನಪ್ಪ ಹಾಗೂ ಅವರ ಸಂಗಡಿಗರು ಪ್ರಸ್ತುತಪಡಿಸಿದ ಕ್ರಾಂತಿಗೀತೆಗಳು ಕಾರ್ಯಕ್ರಮದ ಆಕರ್ಷಣೆಯಾಗಿದ್ದವು.

ಹಿರಿಯ ಚೇತನ ದಾನಪ್ಪ ನಿಲೋಗಲ್ ಅವರ ನಿಸ್ವಾರ್ಥ ಸಮಾಜ ಸೇವೆ ಮತ್ತು ಅವರ ಕುಟುಂಬ ಹಲವು ವರ್ಷಗಳಿಂದ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ವಿಶೇಷವಾಗಿದ್ದು, ಅವರಂತೆ ಅವರ ಮಾರ್ಗದರ್ಶನದಲ್ಲಿ ಬೆಳೆದ ಪುತ್ರ ಪ್ರಶಾಂತ್ ದಾನಪ್ಪ ನವರು ಸಹ ತಮ್ಮ ಬಾಲ್ಯದಲ್ಲಿ ಎದುರಿಸಿದ ಜಾತಿ ವ್ಯವಸ್ಥೆಯ ಕಟು ವಾಸ್ತವ, ಅಸ್ಪೃಶ್ಯತೆ ಹಾಗೂ ಸಾಮಾಜಿಕ ಅಸಮಾನತೆಯ ನೋವುಗಳನ್ನು ಸಾಹಿತ್ಯ ಮತ್ತು ಹಾಡುಗಳ ಮೂಲಕ ವ್ಯಕ್ತಪಡಿಸಿರುವುದು ಸಮಾಜದಲ್ಲಿ ಬಹುದೊಡ್ಡ ಜಾಗೃತಿ ಮೂಡಿಸುವ ಕಾರ್ಯವಾಗಿದ್ದು. ಇವರ ನಿರಂತರವಾದ ಬರಹ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಬಾಬಾಸಾಹೇಬ್‌ ಅಂಬೇಡ್ಕರ್ ಅವರ ಸಮಾನತೆ, ಸಾಮಾಜಿಕ ನ್ಯಾಯದ ಸಮಸಮಾಜದ ಚಿಂತನೆಗಳು ಎತ್ತಿ ತೋರುತ್ತಿದ್ದು ಇವು ಜನರಿಗೆ ಸಾಹಿತ್ಯ ಮತ್ತು ಕ್ರಾಂತಿಗೀತೆ ರೂಪವಾಗಿ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಯುವ ಬರಹಗಾರರು ಹಾಗೂ ಪ್ರತಿಭಾವಂತರು ವಿದ್ಯಾರ್ಥಿಗಳ ದೆಸೆಯಿಂದ ಹುಟ್ಟಿ ಬರಬೇಕು ಇವುಗಳ ಮೂಲಕ ಸಾಮಾಜಿಕ ಜಾಗೃತಿ ಬೆಳೆಸಬೇಕು ಎಂದು ದಲಿತ ಮುಖಂಡರಾದ ಬಾಲಸ್ವಾಮಿ ಕೊಡ್ಲಿ ಗಣ್ಯರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೊಡ್ಲಿ ರವರು ದಾನಪ್ಪ ನಿಲೋಗಲ್, ಪ್ರಶಾಂತ್ ದಾನಪ್ಪ ಅವರಂತಹ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ನಾಯಕರು, ಮಠಾಧೀಶರು, ರಾಜಕಾರಣಿಗಳು ಹಾಗೂ ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದ ವೇದಿಕೆಯಲ್ಲಿನ ಗಣ್ಯರಿಂದ ಸಾಹಿತಿ ಪ್ರಶಾಂತ್ ದಾನಪ್ಪ ಸನ್ಮಾನಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಶೈಕ್ಷಣಿಕ ಹಾಗೂ ಸೃಜನಶೀಲ ಪ್ರತಿಭೆಯನ್ನು ಗೌರವಿಸಲಾಯಿತು.

Exit mobile version