ಪಾವಗಡ (ಸೆ.೧೨) ; ತುಮಕೂರು ಜಿಲ್ಲೆ ಪಾವಡಗ ತಾಲ್ಲೂಕಿನ ಅರಸೀಕೆರೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಬೈಕ್ ಸವಾರನ ದಾರಿಗೆ ಬಾಲಕ ನೊರ್ವ ಅಡ್ಡಿ ಬಂದ ಎಂಬ ಕಾರಣಕ್ಕೆ. ಬೈಕ್ ಸವಾರನು ಬಾಲಕನ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಹಲ್ಲೆಗೊಳಗಾದ ನಾಲ್ವರ ಪೈಕಿ ಓರ್ವ ಮೃತ ಪಟ್ಟಿದ್ದು ಉಳಿದವರು ಗಾಯಾಳುಗಾಳಾಗಿರು ಘಟನೆ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಬೆಳ್ಳಿಬಟ್ಲು ಗ್ರಾಮದ ವಾಸಿಯಾದ ಹನುಮಂತರಾಯಪ್ಪ (೫೦) ಮೃತಪಟ್ಟ ವ್ಯಕ್ತಿಯಾಗಿದ್ದು ಇದೆ ಕುಟುಂಬ ಮೃತನ ಹೆಂಡತಿ , ಮಗಳು , ಅಳಿಯ ಮತ್ತು ಮೊಮ್ಮಗ ಹಲ್ಲೆಗೊಳಗಾದ ಇತರೆ ಬಾದಿತರಾಗಿದ್ದಾರೆ. ಈ ಘಟನೆಯ ಸಂಬಂದ ಸ್ಥಳಿಯರ ಮಾಹಿತಿ ಪ್ರಕಾರ ದೂರು ದಾಖಲಿಸಲು ಹೋದಾಗ ಪ್ರಥಮ ಹಂತದಲ್ಲಿ ಪೊಲೀಸ್ ಅಧಿಕಾರಿಗಳು ದೂರು ಸ್ವೀಕರಿಸಲು ನಿರಾಕರಿಸಿದ್ದು. ದ.ಸಂ.ಸ ಮುಖಂಡರ ಆಕ್ರೋಶದ ಮೇರೆಗೆ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಹಿನ್ನೆಲೆ :
ವಾಲ್ಮೀಕಿ ಬಿನ್ ಓಬಳಪತಿ ಎಂಬ ಹೆಸರಿನ ವ್ಯಕ್ತಿಯು ದಿನಾಂಕ ; ೧೦/೦೯/೨೦೨೫ ಸಂಜೆ ಸುಮಾರು ೪;೩೦ ಸಮಯದಲ್ಲಿ ದ್ವಿಚಕ್ರ ವಾಹನದ ಮೂಲಕ ಸಾಗುತ್ತಿರುವಾಗ ರಸ್ತೆ ಬದಿಯಲ್ಲಿ ಆಟವಾಡುತ್ತಿದ ಬಾಲಜಿ ಎಂಬ ಹುಡುಗನು ರಸ್ತೆಗೆ ಅಡ್ಡ ಬಂದ ಎಂಬ ಕಾರಣಕ್ಕಾಗಿಯೆ ಹುಡುಗನನ್ನು ಹಿಡಿದು ಮಾರಣಾಂತಿಕ ಹಲ್ಲೆ ನಡೆಸುತ್ತಿರುವ ವೇಳೆ ಹುಡುಗನ ಕುಟುಂಬದರಾದ ಲಕ್ಷ್ಮೀದೇವಮ್ಮ (ಅಜ್ಜಿ), ಹನುಮಂತರಾಯಪ್ಪ(ಅಜ್ಜ) ಈರಕ್ಕ (ತಾಯಿ), ವೆಂಕಟೇಶ್ (ತಂದೆ) ನಾಲ್ವರುಗಳು ಹಲ್ಲೆಯನ್ನು ಪ್ರಶ್ನಿಸಿದಕ್ಕೆ ಇವರ ಮೇಲೆಯು ಮಾರಕಾಸ್ತ್ರದಂತಹ ಮರದ ದಿಂಡಿನಿಂದ ಸತತ ಸುಮಾರು ಒಂದು ಗಂಟೆಯ ಕಾಲದ ವರೆಗೂ ಹೊಡೆತಗಳಿಂದ ದಾಳಿನಡೆಸಿದ್ದಾನೆ ಎನ್ನಲಾಗಿದ್ದು. ಈ ಹಲ್ಲೆಯ ನಂತರ ಕುಟುಂಬದ ಮೂವರು ಗಾಯಳುಗಳಾಗಿದ್ದು ಹಲ್ಲೆಯ ತೀವ್ರತೆಯಿಂದ ಬಳಲಿದ ಕುಟುಂಬದ ಮುಖ್ಯಸ್ಥ ಸಾವಿಗಿಡಾಗಿದ್ದಾನೆ.
ಈ ದುರಂತದ ಘಟನೆಯನ್ನು ಖಂಡಿಸಿದ ದ.ಸಂ.ಸ ಮುಖಂಡರಾದ ಸಿ.ಕೆ.ತಿಪ್ಪೇಸ್ವಾಮಿ, ಮಂಗಳವಾಡ ಮಂಜಣ್ಣ , ನ್ಯಾದಗುಂಟೆ ದುರ್ಗಣ್ಣ , ಕೆ.ಪಿ. ಲಿಂಗಣ್ಣ , ಮಂಗಳವಾಡ ಹನುಮಂತರಾಯಪ್ಪ, ಉಮೇಶ್ ಬೆಳ್ಳಿಬಟ್ಲು , ದೇವಲಕೆರೆ ಹನುಮಂತರಾಯ ರವರುಗಳು ಬಾದಿತರ ಕುಟುಂಬದ ನೆರವಿಗೆ ದಾವಿಸಿದ್ದಾರೆ.

