ತುಮಕೂರು (ಸೆ.೧೧): ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೊಡಗಿನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಇತರೆ ಮೂಲಸೌಕರ್ಯಗಳನ್ನು ಕೇಳಿದಕ್ಕಾಗಿ ದಲಿತ ಸಮುದಾಯದ ಯುವಕ ಆನಂದ್ ಬಿನ್ ರಾಮಾಂಜಿನಪ್ಪ ರವರನ್ನು ಭೀಕರವಾಗಿ ಕೊಲೆಗೈದ ಘಟನೆ ನಡೆದಿದೆ.
ತಾಲ್ಲೂಕಿನ ಪೋಲೆನಹಳ್ಳಿ ಗ್ರಾಮದ ವಾಸಿಯಾದ ಆನಂದ್ ಅವರ ಮನೆಯ ಬಳಿ ಕುಡಿಯುವ ನೀರಿನ ಸಮಸ್ಯೆಯ ತೀವ್ರತೆ ಹೆಚ್ಚಾಗಿದ್ದು ನೀರು ಬರುತ್ತಿಲ್ಲವೆಂದು ಮತ್ತು ಗ್ರಾಮ ಪಂಚಾಯತಿಯಿಂದ ದೊರೆಯಬೇಕಿದ್ದ ಮೂಲಸೌಕರ್ಯಗಳನ್ನು ಒದಗಿಸಿಕೊಡಿ ಎಂದು ಸ್ಥಳಿಯ ನೌಕರರಾದ ಬಿಲ್ ಕಲೆಕ್ಟರ್ ರಾಮಕೃಷ್ಣಯ್ಯ ಅವರ ಮಗ ಗ್ರಾಮ ಪಂಚಾಯತಿ ಸದಸ್ಯನಾದ ನಾಗೇಶ್ ಎಂಬುವರನ್ನು ಮನೆಯ ಬಳಿ ಹೋಗಿ ಏರು ಧ್ವನಿಯಿಂದ ಪ್ರಶ್ನಿಸಿದಕ್ಕಾಗಿ ರಾಮಕೃಷ್ಣಪ್ಪ, ನಾಗೇಶ್, ನಾಗಮಣಿ ಇತರರು ಸೇರಿದಂತೆ ಮಚ್ಚು ದೊಣ್ಣೆ ಯಂತಹ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬುಲೆರೋ ಜೀಪ್ ನಿಂದ ಡಿಕ್ಕಿಹೊಡೆದು ಕೊಲೆ ಮಾಡಿದ್ದಾರೆ. ಈ ಘಟನೆಯ ಸಂಬಂಧ ಕೊಡಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು. ಕೃತ್ಯಕ್ಕೆ ಒಳಪಟ್ಟವರ ಮೇಲೆ FIR ದಾಖಲಿಸಿ ಅಧಿಕಾರಿಗಳು ಕೊಲೆಗೈದ ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಿದ್ದು ಇನ್ನುಳಿದ ಇಬ್ಬರನ್ನು ಸಹ ಬಂಧಿಸುವಂತೆ ಸ್ಥಳಿಯ ದ.ಸಂ.ಸ ಮುಖಂಡರು ಆಗ್ರಸಿದ್ದು. ಪೊಲೀಸ್ ತನಿಖಿ ಪ್ರಗತಿಯಲ್ಲಿ ಸಾಗುತ್ತಿದೆ ಎಂದು ತಳಿದು ಬಂದಿದ್ದು. ಘಟನೆ ನಡೆದ ಎರಡು ವರ್ಗಗಳ ಪೈಕಿ ಆರೋಪಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿದ್ದು ಕೊಲೆಯಾದ ವ್ಯಕ್ತಿಯು ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ಸೇರಿದವರೆಂದು ಗುರುತಿಸಲಾಗಿದ್ದು ಕೊಲೆಗೆ ಜಾತಿ ರಾಜಕಾರಣ ಮತ್ತು ದೌರ್ಜನ್ಯದ ಹಲ್ಲೆ ಪ್ರಮುಖ ಕಾರಣವಾಗಿದೆ ಎಂದು ಮೇಲೋಟಕ್ಕೆ ಕಂಡುಬಂದಿದೆ.

