Breaking
Thu. Aug 7th, 2025

ಜಕ್ಕರಾಯನ ಕೆರೆಯ ಪ್ರತಿಭಾ ಮೈದಾನ ರಕ್ಷಣೆಗೆ ಮರು ಮನವಿ.

ಸ್ಥಳಿಯರಿಂದ : ಸಚಿವ ದಿನೇಶ್ ಗುಂಡೂರಾವ್ ರವರಿಗೆ ಎರಡನೇ ಬಾರಿ ಮನವಿ

ಬೆಂಗಳೂರು : ನಗರದಲ್ಲಿನ ಜಕ್ಕರಾಯನಕೆರೆಯು ಹಲವು ವರ್ಷಗಳಿಂದ ಆಟದ ಮೈದಾನವಾಗಿದ್ದು, ಸ್ಥಳೀಯರಿಗೆ ಅನುಕೂಲವಾಗಿತಿತ್ತು ಅದರೆ ಇತ್ತೀಚಿಗೆ ಕೆಲವು ವರ್ಷಗಳಿಂದ ಅದು ಟ್ರಾಫಿಕ್ ಪೊಲೀಸ್ ಇಲಾಖೆಯ ಹಳೆಯ ವಾಹನಗಳ ನಿಲ್ದಾಣವಾಗಿ ಮಾರ್ಪಟ್ಟಿದೆ. ಅಲ್ಲದೆ ಈ ಜಾಗವು ನಿರ್ಜನ ಪ್ರದೇಶದಂತಿದ್ದು ಅಕ್ರಮ ಚಟುವಟಿಕೆಗಳು ನಡೆಯುವ ಅನುಮಾನಗಳನ್ನು ಸ್ಥಳೀಯರಲ್ಲಿ ಹುಟ್ಟು ಹಾಕಿದ್ದು ಎಂದು. ಈ ಹಿಂದೆ ಫೆ.24-2025 ಸ್ಥಳೀಯ ವಾಸಿಗಳು ಸ್ಥಳೀಯ ಶಾಸಕರಿಗೆ ಮನವಿ ಪತ್ರ ನೀಡಿದ್ದರು ಇದೀಗ ಈ ಕಾರಣಕ್ಕೆ ಇಲ್ಲಿ ವಾಹನ ನಿಲುಗಡೆಯ ಅನುಮತಿಯನ್ನು ರದ್ದುಗೊಳಿಸಿ ಮತ್ತೆ ಅ ಪ್ರದೇಶವನ್ನು ಆಟದ ಮೈದಾನವಾಗಿಸಿ P.N.R ಕಾಲೋನಿ, ವಾಟರ್ ಟ್ಯಾಂಕ್, .ಹನುಮಂತಪ್ಪ ಕಾಲೋನಿ, ಶಾಸ್ತ್ರೀ ನಗರಕ್ಕೆ ಸೇರಿದ ಸುಮಾರು 92 ಮನೆಗಳ ನಾಗರಿಕರಿಗೆ ವಾಯುವಿಹಾರಕ್ಕೆ ಅನುಮತಿ ಮಾಡಿಕೊಡುವಂತೆ ಹಾಗು ಅವರ ಆರೋಗ್ಯ ದೃಷ್ಟಿಯಲ್ಲಿ ಅ ಪ್ರದೇಶದಲ್ಲಿ ಉತ್ತಮ ಉದ್ಯಾನವನ್ನು ನಿರ್ಮಿಸಿ ಕೊಡಬೇಕೆಂದು ಕೋರಿ ಮತ್ತೊಮ್ಮೆ ಈ ಭಾಗದ ಜನರು ಮತ್ತು ಕೆಲ ಮುಖಂಡರು ಸ್ಥಳೀಯ ಶಾಸಕರು ಹಾಗೂ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರಿಗೆ ಸ್ಥಳೀಯ ನಾಗರಿಕರು ಮರು ಮನವಿಯನ್ನು ಮನವಿಯನ್ನು 4/02/2025 ರಂದು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪಿ. ಎನ್. ನಾಗೇಶ್ ರಾವ್, ಕೆ ಮೋಹನ್ ಬಾಬು, ಕೆ ಶ್ರೀನಿವಾಸ್, ನಾಗೇಶ್ ದಾಸರಿ,ಕಿಶೋರ್, ಕೆ ಬಾಬು, ಆನಂದ, ಜೀಮ್ ಶ್ರೀನಿವಾಸ್, ಪ್ರಭಾಕರ್, ಗೊಳ್ಳಪಲ್ಲಿ ನರಸಿಂಹಲು , ಜಯರಾಮ್, ಮಾಸ್ಟರ್ ಜಯಣ್ಣ , ನಾಗಯ್ಯ ಬೆಂಜಾಮನ್, ಗಣೇಶ್, ಮುಂತಾದವರು ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *