ಸ್ಥಳಿಯ ನಾಗರಿಕರಿರಿಂದ : ಸಚಿವ ದಿನೇಶ್ ಗುಂಡೂರಾವ್ ರವರಿಗೆ ಮನವಿ
ಬೆಂಗಳೂರು : ನಗರದಲ್ಲಿನ ಜಕ್ಕರಾಯನಕೆರೆಯು ಹಲವು ವರ್ಷಗಳಿಂದ ಆಟದ ಮೈದಾನವಾಗಿದ್ದು, ಸ್ಥಳೀಯರಿಗೆ ಅನುಕೂಲವಾಗಿತಿತ್ತು ಅದರೆ ಇತ್ತೀಚಿಗೆ ಕೆಲವು ವರ್ಷಗಳಿಂದ ಅದು ಟ್ರಾಫಿಕ್ ಪೊಲೀಸ್ ಇಲಾಖೆಯ ಹಳೆಯ ವಾಹನಗಳ ನಿಲ್ದಾಣವಾಗಿ ಮಾರ್ಪಟ್ಟಿದೆ. ಅಲ್ಲದೆ ಈ ಜಾಗವು ನಿರ್ಜನ ಪ್ರದೇಶದಂತಿದ್ದು ಅಕ್ರಮ ಚಟುವಟಿಕೆಗಳು ನಡೆಯುವ ಅನುಮಾನಗಳನ್ನು ಸ್ಥಳೀಯರಲ್ಲಿ ಹುಟ್ಟು ಹಾಕಿದ್ದು ಎಂದು. ಈ ಕಾರಣಕ್ಕೆ ಇಲ್ಲಿ ವಾಹನ ನಿಲುಗಡೆಯ ಅನುಮತಿಯನ್ನು ರದ್ದುಗೊಳಿಸಿ ಮತ್ತೆ ಅ ಪ್ರದೇಶವನ್ನು ಆಟದ ಮೈದಾನವಾಗಿಸಿ P.N.R ಕಾಲೋನಿ, ವಾಟರ್ ಟ್ಯಾಂಕ್, .ಹನುಮಂತಪ್ಪ ಕಾಲೋನಿ, ಶಾಸ್ತ್ರೀ ನಗರಕ್ಕೆ ಸೇರಿದ ಸುಮಾರು 92 ಮನೆಗಳ ನಾಗರಿಕರಿಗೆ ವಾಯುವಿಹಾರಕ್ಕೆ ಅನುಮತಿ ಮಾಡಿಕೊಡುವಂತೆ ಹಾಗು ಅವರ ಆರೋಗ್ಯ ದೃಷ್ಟಿಯಲ್ಲಿ ಅ ಪ್ರದೇಶದಲ್ಲಿ ಉತ್ತಮ ಉದ್ಯಾನವನ್ನು ನಿರ್ಮಿಸಿ ಕೊಡಬೇಕೆಂದು ಕೋರಿ ಸ್ಥಳೀಯ ಶಾಸಕರು ಹಾಗೂ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರಿಗೆ ಸ್ಥಳೀಯ ನಾಗರಿಕರು ಮನವಿಯಲ್ಲಿ ಸಲ್ಲಿಸಿದ್ದು. ಈ ಸಂದರ್ಭದಲ್ಲಿ ಪಿ. ಎನ್. ನಾಗೇಶ್ ರಾವ್, ಕೆ ಮೋಹನ್ ಬಾಬು, ಕಾಂಗ್ರೆಸ್ ಶ್ರೀನಿವಾಸ್, ನಾಗೇಶ್ ದಾಸರಿ,ಕಿಶೋರ್, ಕೆ ಬಾಬು, ಆನಂದ, ಜೀಮ್ ಶ್ರೀನಿವಾಸ್, ಪ್ರಭಾಕರ್, ಗೋಪಿ ಶಾಸ್ರಿನಗರ, ಜಯರಾಮ್, ರಾಮಯ್ಯ ಬೆಂಜಾಮನ್, ಗಣೇಶ್, ಸಾಕೆ ನಾರಾಯಣ,ಮುಂತಾದ ಉಪಸ್ಥಿತರಿದ್ದರು.

