Breaking
Fri. Jan 23rd, 2026

ರಾಜ್ಯ ಮುಖಂಡರಿಂದ ಸಿದ್ದಪಡಿಸಿದ ಮಾಹಿತಿಯನ್ನು ನ್ಯಾ. ನಾಗಮೋಹನ್ ದಾಸ್ ರವರಿಗೆ ಸಲ್ಲಿಕೆ.

ಒಳಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನ ಏಳು ಸದಸ್ಯರ ಸಂವಿಧಾನ ಪೀಠ ನೀಡಿರುವ ಐತಿಹಾಸಿಕವಾದ ತೀರ್ಪಿನ ಹಿನ್ನಲೆಯಲ್ಲಿ. ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಕಟ್ಟಡದಲ್ಲಿರು ನಿವೃತ್ತ ನ್ಯಾಯಾಧೀಶರಾದ ಶ್ರೀ ಹೆಚ್. ಎನ್ . ನಾಗಮೋಹನ್ ದಾಸ್ ರವರ ಅಧ್ಯಕ್ಷತೆಯ ಏಕ ಸದಸ್ಯ ಆಯೋಗ ಕಚೇರಿಗೆ ಭೇಟಿ ನೀಡಿದ ಅನೇಕ ಶೋಷಿತ ಮುಖಂಡರುಗಳು ಒಳಮೀಸಲಾತಿ ಜಾರಿಗೊಳಿಸುವ ಸಂಬಂಧ ಹಲವಾರು ವಿಷಯಗಳನ್ನು ಚರ್ಚಿಸಿ ಅನೇಕ ಸಂಘಟನೆಗಳ ಸಮೀಕ್ಷೆಯಿಂದ ಸಿದ್ದಪಡಿಸಿದ ಮಾಹಿತಿಯ ಕಡತವನ್ನು ಹಸ್ತಾಂತರಿಸಿ. ಪರಿಶಿಷ್ಟ ಜಾತಿಗೆ ಸೇರಿದ 101 ಜಾತಿಗಳ ಸ್ಥಿತಿಗತಿಗಳನ್ನು ಗಮನಸಿ ಅವರ ಆರ್ಥಿಕ, ಸಾಮಾಜಿಕ,ಶೈಕ್ಷಣಿಕ ಸ್ಥಿತಿಗಳನ್ನು ಗಮನದಲ್ಲಿ ಇಟ್ಟುಕೊಂಡು. ಸಂವಿಧಾನದ 15 ಮತ್ತು 16ನೇ ಕಲo ಗಳು ಮತ್ತು ಜನಸಂಖ್ಯೆ ಲೆಕ್ಕಚಾರ 2011ರ ಜನಗಣತಿ ಪ್ರಕಾರ  ನ್ಯಾ. ಎ.ಜೆ. ಸದಾಶಿವ ಆಯೋಗ ಶಿಫಾರಸ್ಸು ಮಾಡಿದ ವರದಿಗೆ ಮರುಜೀವ ನೀಡಿವಂತೆ ಮನವಿ ಮಾಡಲಾಗಿದ್ದು.

ಈ ಸಂದರ್ಭದಲ್ಲಿ ಅಖಿಲ ಭಾರತ ಬಹುಜನ ಸಮಾಜ ಪಕ್ಷದ ಸಂಸ್ಥಾಪಕರು ಮಾರಸಂದ್ರ ಮುನಿಯಪ್ಪ, ರಿಬ್ಲಿಕ್ ಪಾರ್ಟಿ ಆಫ್ ಇಂಡಿಯ (ಬಿ ) ಸಂಸ್ಥಾಪಕರು ಹಾಗು ಅಧ್ಯಕ್ಷರು ಡಾ : ಏನ್. ಮೂರ್ತಿ, ಆರ್.ಪಿ.ಐ (ಬಿ )ಮಹಿಳಾ ಅಧ್ಯಕ್ಷರು ಎ.ಹೆಚ್. ಸುನಿತಾ ರಮೇಶ್ ಹೈ ಕೋರ್ಟ್ ವಕೀಲರು , ನಿವೃತ್ತಿ ಐ.ಆರ್.ಎಸ್. ಅಧಿಕಾರಿ ಹೆಚ್.ಆರ್. ಭೀಮ ಶಂಕರ್, ಬಿ.ಎಸ್.ಪಿ ಗುರುಮೂರ್ತಿ, ಪ್ರೊ. ಬಿ. ಕೃಷ್ಣಪ್ಪ  ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಎಂ. ಗುರುಮೂರ್ತಿ ಶಿವಮೊಗ್ಗ , ಒಳಮಿಸಲಾತಿ ಜಾರಿಗಾಗಿ ಮಾದಿಗ ಸಮುದಾಯ ಸ್ವಾಭಿಮಾನಿ ಒಕ್ಕೂಟದ, ಬಿ.ಏನ್. ಕೇಶವಮೂರ್ತಿ, ಡಾ, ಭೀಮರಾಜು ರಾಜ್ಯಾಧ್ಯಕ್ಷ ರು ವಿಶ್ವ ಆದಿಜಾಂಬ ಮಹಾಸಭಾ, ರಿ, ಕನಾ೯ಟಕ ರಾಜ್ಯ ಬೆಂಗಳೂರು,ಕನಕೇನಹಳ್ಳಿ ಕೃಷ್ಣಪ್ಪ.  ಶಿವರಾಯ  ಅಕ್ಕರಿಕಿ ರಾಜ್ಯಾಧ್ಯಕ್ಷರು ,ಮಾದಿಗ ಮೀಸಲಾತಿ ಹೋರಾಟ ಸಮಿತಿ ಎಂ.ಆರ್.ಹೆಚ್.ಎಸ್. (ಸಂಸ್ಥಾಪಕ ) ರಾಜ್ಯ ಸಮಿತಿ ನರಸಿಂಹ ಮೂರ್ತಿ, ದಲಿತ ಸೈನ್ಯ ರಾಜ್ಯಾಧ್ಯಕ್ಷರು. ಹಾಗು ಪತ್ರಕರ್ತರು ಸಾಕೆ ನಾರಾಯಣ, ಶಿವ ಬಸಪ್ಪ ದ.ಸಂ.ಸ. ರಾಜ್ಯ ಸಮಿತಿ ಸದ್ಯಸರು, ಕರ್ನಾಟಕ ಬಹುಜನ ಚಳುವಳಿ ಬಸವರಾಜ್ ಜಮಾಧಾರ್, ವಿಜಯ್ ಕುಮಾರ್, ಶಿವಬಸಪ್ಪ ದ.ಸಂ.ಸ. ರಾಜ್ಯ ಸಮಿತಿ ಸದಸ್ಯರು, ಪತ್ರಕರ್ತರ  ಗೋಪಿ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *