ಹೈದರಾಬಾದ್ : ಕೌಟುಂಬಿಕ ಕಲಹದ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದ ಪತ್ರಕರ್ತ ಓರ್ವನ ಮೇಲೆ ತೆಲುಗಿನ ಹಿರಿಯ ನಟ ಮೋಹನ್ ಬಾಬು ಹಲ್ಲೆ ನಡೆಸಿರುವ ಘಟನೆ ಇತ್ತೀಚೆಗಷ್ಟೇ ವರದಿಯಾಗಿದೆ.
ಜಲಪಲ್ಲಿಯಲ್ಲಿರುವ ಅವರ ಮನೆಗೆ ಮೋಹನ್‌ಬಾಬು ಕಿರಿಯ ಪುತ್ರ ಮನೋಜ್ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದಾಗ ಅಲ್ಲಿದ್ದ ಖಾಸಗಿ ಭದ್ರತಾ ಸಿಬ್ಬಂದಿ ಅವರನ್ನು ಮನೆಯಿಂದ ಹೊರಗೆ ತಳ್ಳುವ ಪ್ರಯತ್ನದಲ್ಲಿದ್ದಾಗ,
ಈ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದ ವೇಳೇ ಓರ್ವ ಖಾಸಗಿ ಸುದ್ದಿ ವಾಹಿನಿಯ ಪತ್ರಕರ್ತನ ಮೇಲೆ ಮೋಹನ್‌ಬಾಬು ಹಲ್ಲೆ ನಡೆಸಿದ್ದಾರೆ.
ಮೋಹನ್ ಬಾಬು ಅವರು ಪ್ರಶ್ನೆ ಮಾಡಿದ ಪತ್ರಕರ್ತನಿಗೆ ವಾಹಿನಿಯ ಮೈಕ್‌ನಿಂದ ಹೊಡೆಯಲು ಪ್ರಯತ್ನಿಸುತ್ತಿರುವುದನ್ನು ಸ್ಥಳಿವಾಗಿ ನೆರೆದಿದ್ದ ಎಲ್ಲಾ ದೃಶ್ಯ ಮಾಧ್ಯಮಗಳು ತೋರಿಸಿವೆ. ಹಲ್ಲೆಯ ನಂತರ ಪತ್ರಕರ್ತನಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.
ನಟ ಮೋಹನ್ ಬಾಬು ಅವರ ಕುಟುಂಬದಲ್ಲಿನ ಕೆಲವು ಭಿನ್ನಾಭಿಪ್ರಾಯಗಳ ಕುರಿತಂತೆ ಪೊಲೀಸರಿಗೆ ದೂರು ನೀಡಿದ ಸುದ್ದಿ ಬಯಲಿಗೆ ಬಂದಿವೆ. ಪುತ್ರ ಮನೋಜ್ ಮತ್ತು ಅವರ ಪತ್ನಿ ಜಲಪಲ್ಲಿಯ ಅವರ ಮನೆಯನ್ನು ಬೆದರಿಕೆ ಮತ್ತು ಬಲವಂತದ ಮೂಲಕ ಸ್ವಾಧೀನಪಡಿಸಿಕೊಳ್ಳುವ ಸಂಯೋಜಿತ ಯೋಜನೆಯನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆದರೆ, ತಾನು ಆಸ್ತಿಯಲ್ಲಿ ಪಾಲು ಕೋರದೆ ಸ್ವಾಭಿಮಾನಕ್ಕಾಗಿ ಹೋರಾಟ ನಡೆಸುತ್ತಿದ್ದೇನೆ ಎಂದು ಮನೋಜ್ ಸುದ್ದಿಗಾರರಿಗೆ ತಿಳಿಸಿದರು. ತನಗೆ ಮತ್ತು ತನ್ನ ಕುಟುಂಬಕ್ಕೆ ಪೊಲೀಸರಿಂದ ರಕ್ಷಣೆಯನ್ನು ಕೋರಿದ್ದೇನೆ, ನಂತರ ಈ ವಿಷಯದ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದ್ದೇನೆ ಎಂದು ತಿಳಿಸಿದರು. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಮನೋಜ್, ತನ್ನ ವಿರುದ್ಧ ತನ್ನ ತಂದೆ ಮಾಡಿದ ಆರೋಪಗಳು ಆಧಾರರಹಿತ, ದುರುದ್ದೇಶಪೂರಿತ ಮತ್ತು ಸುಳ್ಳು ಎಂದು ಬಣ್ಣಿಸಿದ್ದಾರೆ.
ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಮೋಹನ್ ಬಾಬು ಅವರ ಹಿರಿಯ ಪುತ್ರ ಮಂಚು ವಿಷ್ಣು ಹೇಳಿದ್ದಾರೆ. ಮೋಹನ್ ಬಾಬು ಅವರ ದೂರಿನ ಆಧಾರದ ಮೇಲೆ ಪೊಲೀಸರು ಈ ಹಿಂದೆ ಮನೋಜ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಮೋಹನ್ ಬಾಬು ಅವರು ಸೋಮವಾರ ತಮ್ಮ ದೂರಿನಲ್ಲಿ ಮನೋಜ್ ಮತ್ತು ಕೆಲವರು ಡಿಸೆಂಬರ್ 8 ರಂದು ತಮ ನಿವಾಸದಲ್ಲಿ ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 30 ವ್ಯಕ್ತಿಗಳು ನಿವಾಸಕ್ಕೆ ಅತಿಕ್ರಮವಾಗಿ ನುಗ್ಗಿ ಸಿಬ್ಬಂದಿಯನ್ನು ಬೆದರಿಸಿ ಆವರಣದಿಂದ ಹೊರಹಾಕಿದ್ದಾರೆ ಎಂದು ಅವರ ಉದ್ಯೋಗಿಯೊಬ್ಬರು ಮಾಹಿತಿ ನೀಡಿದರು.