ರಾಜ್ಯ ಎಸ್‌ಸಿ-ಎಸ್‌ಟಿ ಪತ್ರಿಕಾ ಸಂಪಾದಕರ ಸಂಘದಿಂದ ದತ್ತಿ ಮತ್ತು ಗೌರವ ಪ್ರಶಸ್ತಿ ಪ್ರಕಟ

Nov 20, 2024

ಬೆಂಗಳೂರು : ರಾಜ್ಯ ಎಸ್‌ಸಿ – ಎಸ್‌ಟಿ ಪತ್ರಿಕಾ ಸಂಪಾದಕರ ಸಂಘವು 2024 ನೇ ಸಾಲಿನ ರಾಜ್ಯಮಟ್ಟದ ‘ದತ್ತಿ ಪ್ರಶಸ್ತಿ’ ಮತ್ತು ‘ಗೌರವ ಪ್ರಶಸ್ತಿ’ಗಳಿಗೆ ಆಯ್ಕೆಯಾದ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಿದೆ. ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರು, ಶೋಷಿತರ ಪರವಾಗಿ ಅಹರ್ನಿಶಿ ದುಡಿದ ದಲಿತರು ಮತ್ತು ದಲಿತ ಸಂವೇದನೆಯುಳ್ಳ ದಲಿತೇತರ ವೃತ್ತಿಪರ ಪತ್ರಕರ್ತರನ್ನು ಗುರುತಿಸಿ ಗೌರವಿಸಲು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿ, ದಲಿತರ ಸ್ವಾಭಿಮಾನ ಹಕ್ಕುಗಳಿಗಾಗಿ ದುಡಿದ  ಮಹನೀಯರಾದ ಡಾ. ಬಾಬಾ ಸಾಹೇಬ್ ಅಂಬೇಡ್ಕ‌ರ್, ಮಾಜಿ ಸಚಿವ ಬಿ.ರಾಚಯ್ಯ ಬಿ.ಬಸವಲಿಂಗಪ್ಪ, ಪ್ರೊ.ಬಿ.ಕೃಷ್ಣಪ್ಪ ಅವರಿಗಳ ಹೆಸರಿನಲ್ಲಿ ‘ರಾಜ್ಯಮಟ್ಟದ ದತ್ತಿನಿಧಿ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತಿದೆ. ಪ್ರಧಾನ ದತ್ತಿ ಪ್ರಶಸ್ತಿಗಳೊಂದಿಗೆ ಪತ್ರಿಕೋದ್ಯಮದಲ್ಲಿ ನಾಲ್ವರು ಹಿರಿಯ ಸಾಧಕ ದಲಿತ ಸಮುದಾಯದ ಸಂಪಾದಕರುಗಳಿಗೆ ‘ಸಂಘದ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ.   ನಂಬರ್‌ 29   ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಎಂದು ಪ್ರಶಸ್ತಿ ಪ್ರದಾನ ಸಮಿತಿ ಸಂಚಾಲಕ ರವಿಕುಮಾರ್ ಟೆಲೆಕ್ಸ್​ ಪ್ರಕಟಣೆಯಲ್ಲಿ ತಿಳಿಸಿದರು.

‘ದತ್ತಿ ಪ್ರಶಸ್ತಿ’ ಮತ್ತು ‘ಗೌರವ ಪ್ರಶಸ್ತಿ’ಗಳಿಗೆ ಆಯ್ಕೆಯಾದ ಪುರಸ್ಕೃತರ ಪಟ್ಟಿ ಹೀಗಿದ್ದು.

‘ರಾಜ್ಯ ಮಟ್ಟದ ದತ್ತಿ ಪ್ರಶಸ್ತಿ’ ಪುರಸ್ಕೃತರು:

  • ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ – ಜಿ.ಎನ್.ಮೋಹನ್, ಹಿರಿಯ ಪತ್ರಕರ್ತ ಬೆಂಗಳೂರು
  • ಬಿ. ರಾಚಯ್ಯ ದತ್ತಿ ಪ್ರಶಸ್ತಿ- ಬಿ.ಎಂ.ಹನೀಫ್, ಹಿರಿಯ ಪತ್ರಕರ್ತರು ಬೆಂಗಳೂರು
  • ಪ್ರೊ.ಬಿ.ಕೃಷ್ಣಪ್ಪ ದತ್ತಿ ಪ್ರಶಸ್ತಿ – ಮಾವಳ್ಳಿ ಶಂಕ‌ರ್, ರಾಜ್ಯ ಸಂಚಾಲಕರು-ಕರ್ನಾಟಕ ದಲಿತ ಸಂಘರ್ಷ ಸಮಿತಿ
  • ಪ್ರಧಾನ ದತ್ತಿ ಪ್ರಶಸ್ತಿಗಳೊಂದಿಗೆ ಪತ್ರಿಕೋದ್ಯಮದಲ್ಲಿ ನಾಲ್ವರು ಹಿರಿಯ ಸಾಧಕ ದಲಿತ ಸಮುದಾಯದ ಸಂಪಾದಕರುಗಳಿಗೆ ‘ಸಂಘದ ವಾರ್ಷಿಕ ಗೌರವ ಪ್ರಶಸ್ತಿ’ಗಳನ್ನು ನೀಡಿ ಗೌರವಿಸಲಾಗುತ್ತಿದೆ.
  • ಬಿ.ಬಸವಲಿಂಗಪ್ಪ ದತ್ತಿ ಪ್ರಶಸ್ತಿ – ಮಂಜುಳಾ ಹುಲಿಕುಂಟೆ, ಪತ್ರಕರ್ತೆ ಬೆಂಗಳೂರು

ವಾರ್ಷಿಕ ‘ಗೌರವ ಪ್ರಶಸ್ತಿ’ ಪುರಸ್ಕೃತರು:

  • ಕೆ. ಏಕಾಂತಪ್ಪ- ಸಂಪಾದಕರು, ಶಿವಮೊಗ್ಗ ಮಲ್ನಾಡ್‌ವಾಣಿ ಕನ್ನಡ ದಿನಪತ್ರಿಕೆ, ದಾವಣಗೆರೆ
  • ಸೊಗಡು ವೆಂಕಟೇಶ್ – ಸಂಪಾದಕರು, ವಿಶಾಲವಾರ್ತೆ ಕನ್ನಡ ದಿನಪತ್ರಿಕೆ, ತುಮಕೂರು
  • ಮಂಜುಳಾ ಕಿರುಗಾವಲು – ಸಂಪಾದಕರು, ಜನೋದಯ ಕನ್ನಡ ದಿನಪತ್ರಿಕೆ, ಮಂಡ್ಯ
  • ಸುರೇಶ್ ಸಿಂಧ್ಯ – ಹೈದ್ರಾಬಾದ್ ಕರ್ನಾಟಕ ಮುಂಜಾವು ಕನ್ನಡ ದಿನಪತ್ರಿಕೆ, ಗುಲ್ಬರ್ಗಾ

Related Post

Leave a Reply

Your email address will not be published. Required fields are marked *