ಹುಣಸೂರು : ಮೈಸೂರು ಜಿಲ್ಲಿಯ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ಸರಿಸಮಾನವಾಗಿ ಕುಳಿತು ತಿಂಡಿ ತಿಂದ ಎಂಬ ಕಾರಣ ಸುವರ್ಣೀಯರಿಂದ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಅಮಾನವೀಯ ಘಟನೆ. ನಂದೀಶ್ ಎಂಬ ಪರಿಶಿಷ್ಟ ಜಾತಿಗೆ ಸೇರಿದ ಯುವಕ ಹಲ್ಲೆಗೆ ಒಳಗಾಗಿದ್ದು, ಹಲ್ಲೆ ನಡೆಸಿದ ಕೀರ್ತಿಕುಮಾರ್ ಹಾಗೂ ಮಧು ಎಂಬುವರ ಲಿಂಗಾಯತ ಸಮುದಾಯದವರು ಎಂದು ತಿಳಿದಿದ್ದು. ಬಿಳೆಕೆರೆಯ ಬೈಪಾಸ್ ರಸ್ತೆಯಲ್ಲಿರುವ ಫಾಸ್ಟ್ ಫುಡ್ ಅಂಗಡಿ ಒಂದರಲ್ಲಿ ನಂದೀಶ್ ತಿಂಡಿ ತಿನ್ನುತ್ತಿದ್ದಾಗ ಅಲ್ಲಿಗೆ ಬಂದ ಕೀರ್ತಿಕುಮಾರ್ ಹಾಗೂ ಮಧು ಗುರಾಯಿಸಿ ನೋಡಿ ನಮ್ಮ ಜೊತೆ ಸರಿಸಮಾನವಾಗಿ ಕುಳಿತಿದ್ದಾನೆಂದು ಉದ್ದೇಶ ಪೂರ್ವಕವಾಗಿ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ನಂದೀಶ್ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು. ಕೀರ್ತಿಕುಮಾರ್ ಹಾಗೂ ಮಧು ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷರಾದ ಕೊಳಗಟ್ಟೆ ಕೃಷ್ಣ ರವರು ಒತ್ತಾಯಿಸಿದ್ದಾರೆ. ಸದ್ಯ ಹಲ್ಲೆ ನಡೆಸಿದ ಆರೋಪಿಗಳ ವಿರುದ್ದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಫ್ ಐ ರ್ ( FIR ) ನಲ್ಲಿ ಎ ೧ ಕೀರ್ತಿ ಕುಮಾರು ಬಿನ್ ನಿಂಗರಾಜಪ್ಪ ಮತ್ತು ಎ ೨ ಮಧು ಎಂದು ಗುರುತಿಸಲಾಗಿದ್ದಿ. ಪೊಲೀಸ್ ಪಿರ್ಯಾದಿನಲ್ಲಿ ದೈಹಿಕ ಹಲ್ಲೆಯ ಜೊತೆಗೆ ಚಪ್ಪಲಿಯಿಂದ ಹೊಡೆದು , ಜಾತಿ ನಿಂದನೆಯಂತಹ ಅವಾಚ್ಯ ಸಬ್ದಗಳಿಂದ ನಿಂದಿಸಿರುವ ವಿಷಯವಯ ಬೆಳಕಿಗೆ ಬಂದಿದ್ದು. ಹಲ್ಲೆಗೆ ಒಳಗಾದ ವ್ಯಕ್ತಿಯ ಕುಟುಂಬದಿಂದ ಸಮಾಜಿಕ ನ್ಯಾಯಕ್ಕಾಗಿ ಮನವಿ ಮಾಡಿಕೊಳ್ಳಲಾಗಿದೆ.