ರಾಯಚೂರು: ಕೊಲೆ ಪಾತಕರಿಗೆ ಸನ್ಮಾನ ಮಾಡಿರುವುದು ಕರ್ನಾಟಕಕ್ಕೆ, ಮಾನವೀಯತೆಗೆ ಹಾಗೂ ಈ ದೇಶದ ಸಂವಿದಾನಕ್ಕೆ ಆಗಿರುವ ಅವಮಾನ. ಹಿಂಸೆಗೆ ನೀಡಿರುವ ಬಹಿರಂಗ ಪ್ರಚೋದನೆ ಎಂದು ಒತ್ತಾಯಿಸಿ ಗೌರಿ ಲಂಕೇಶ್ ಬಳಗ ವತಿಯಿಂದ ಪ್ರತಿಭಟನೆ ನಡೆಸಿದರು.ಅವರಿಂದು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ, ಹಿಂಸೆ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುತ್ತಿರುವ ಕೋಮುವಾದಿ ಸಂಘಟನೆಗಳ ಮೇಲೆ ಕ್ರಮ ಜರುಗಿಸಿ, ಗೌರಿ ಕೊಲೆಯ ವಿಚಾರಣೆಯನ್ನು ತ್ವರಿತಗೊಳಿಸಿ ಹಂತಕರಿಗೆ ಶೀಘ್ರವೇ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.
ಕರ್ನಾಟಕದ ದೀನ ದಲಿತರ ದನಿಯಾಗಿದ್ದ ಗೌರಿ ಲಂಕೇಶ್ ಅವರನ್ನು ಕೊಲೆಗೈದ ಆರೋಪಿಗಳನ್ನು ಸನ್ಮಾನಿಸಿರುವ ಮೂಲಕ ಈ ನಾಡಿಗೆ ಪರಂಪರೆಗೆ, ಈ ನೆಲ ಪೋಷಿಸಿಕೊಂಡು ಬರುತ್ತಿರುವ ಮಾನವೀಯ ಮೌಲ್ಯಗಳಿಗೆ ಮಾಡಿದ ದೊಡ್ಡ ಕಳಂಕ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಹಾರಾಷ್ಟ್ರ ಮೂಲದ ಗೌರಿ ಹಂತಕ ಶ್ರೀಕಾಂತ್ ಹೊಂಗರಕರ್ ಜಾಮೀನಿನ ಮೇಲೆ ಹೊರಬಂದ ಕೂಡಲೇ ಮಹಾರಾಷ್ಟ್ರದ ಚುನಾವಣೆಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸುತ್ತಿರುವುದನ್ನು ಅಲ್ಲಿಯ ರಾಜಕೀಯ ಪಕ್ಷಗಳು ಆತನನ್ನು ಆಹ್ವಾನಿಸಿರುವುದನ್ನು ನೋಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲಿಗೆ ತಲುಪಿದೆ ಎಂದು ಬೇಸರವಾಗುತ್ತಿದೆ. ಗೃಹ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.
ಗೌರಿ ಹಂತಕರಿಗೆ ಸನ್ಮಾನ ಮಾಡಿರುವ ವ್ಯಕ್ತಿಗಳ ಮೇಲೆ ಕೊಲೆ ಪ್ರಚೋದನೆಯಡಿ ಕೇಸು ದಾಖಲಿಸಬೇಕು, ಹಿಂಸೆ ಮತ್ತು ದೋಷಕ್ಕೆ ಪ್ರಚೋದನೆ ನೀಡುತ್ತಿರುವ ಕೋಮುವಾದಿ ಸಂಘಟನೆಗಳ ಮೇಲೆ ಕ್ರಮ ಜರುಗಿಸಬೇಕು, ಗೌರಿ ಕೊಲೆಯ ವಿಚಾರಣೆಯನ್ನು ತ್ವರಿತಗೊಳಿಸಿ ಹಂತಕರಿಗೆ ಶೀಘ್ರವೇ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಕುಮಾರ್ ಸಮತಳ, ಖಾಜಾ ಅಸ್ಲಾಂ, ಶ್ರೀನಿವಾಸ ಕಲವಲದೊಡ್ಡಿ, ಎಸ್.ಮಾರೆಪ್ಪ ವಕೀಲರು, ಜಿ.ಅಮರೇಶ್, ಕೆ.ಜಿ.ವೀರೇಶ, ಶ್ರೀನಿವಾಸ ಕೊಪ್ಪರ್, ಜಾನ್ ವೆಸ್ಲಿ , ಎಂ ಆರ್ ಭೇರಿ, ಮಾರೆಪ್ಪ ಹರವಿ, ಲಕ್ಷ್ಮಣ ಮಂಡಲಗೇರ, ಅಂಜಿನಯ್ಯ ಕುರುಬದೊಡ್ಡಿ ಸೇರಿದಂತೆ ಮುಂತಾದವರು ಹಾಜಾರಿದ್ದರು..