ಪಾವಗಡ: ತಾಲ್ಲೂಕಿನ ನಿಡಗಲ್ ಹೋಬಳಿಯ ಕೆ.ಟಿ ಹಳ್ಳಿ ಗ್ರಾಮದ ಸರ್ವೆ ನಂಬರ್ 96ರಲ್ಲಿ 30×46 ವಿಸ್ತೀರ್ಣದಲ್ಲಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿಕೊಂಡಿರುವ ಮನೆಗಳನ್ನು 21 /10 /24ರ ಒಳಗೆ ತೆರವುಗೊಳಿಸಬೇಕೆಂದು ತಹಶೀಲ್ದಾರ್ ಕಚೇರಿಯ ಮೂಲಕ ನೋಟಿಸ್ ನೀಡಲಾಗಿತ್ತು.ಇದನ್ನು ವಿರೋಧಿಸಿ ನೋಟಿಸ್ ಪಡೆದ ನಿವಾಸಿಗಳು, ತಹಶೀಲ್ದಾರ್ ಕಚೇರಿ ಮುಂದೆ ವಾಲ್ಮೀಕಿ ಜಾಗೃತಿ ವೇದಿಕೆ ಹಾಗೂ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಮಾತನಾಡಿ,ಸುಮಾರು 20 ವರ್ಷಗಳಿಂದ ಕೆ .ಟಿ. ಹಳ್ಳಿ ಗ್ರಾಮದ ಗ್ರಾಮ ಠಾಣಕ್ಕೆ ಹೊಂದಿಕೊಂಡಿರುವ ಸರ್ವೇ ನಂಬರ್ 96ರಲ್ಲಿ ಕೆ.ಟಿ.ಹಳ್ಳಿ ಗ್ರಾಮದ ಪರಿಶಿಷ್ಟ ಪಂಗಡದ ಬುಡಕಟ್ಟು ಜನಾಂಗದವರು ಅಲ್ಪಸಂಖ್ಯಾತರಾದ ಮುಸಲ್ಮಾನರು ಹಿಂದುಳಿದ ವರ್ಗಕ್ಕೆ ಸೇರಿದ ಮಡಿವಾಳರು ಬಡ ರೈತ ಕುಟುಂಬಕ್ಕೆ ಸೇರಿದ ಒಕ್ಕಲಿಗ ಜನಾಂಗದವರು ಸುಮಾರು 30 ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಈ ಮನೆಗಳನ್ನು ಕಟ್ಟಲು ಗ್ರಾಮ ಪಂಚಾಯಿತಿ ವತಿಯಿಂದ ಆಶ್ರಯ ಯೋಜನೆ ಅಡಿಯಲ್ಲಿ ಕೆಲವರಿಗೆ ಮನೆಯನ್ನು ಮಂಜೂರು ಮಾಡಿದ್ದಾರೆ ಮನೆಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಎನ್.ಓ.ಸಿ. ನೀಡಲಾಗಿದೆ ಸರ್ಕಾರದ ವತಿಯಿಂದ ಸಿ.ಸಿ .ರಸ್ತೆ ಮಾಡಲಾಗಿದ್ದು ಇಂತಹ ಎಲ್ಲ ಸೌಲಭ್ಯಗಳನ್ನು ನೀಡಿ ಕೆಲವು ಮನೆಗಳಿಗೆ ಹಕ್ಕು ಪತ್ರವನ್ನು ಸಹ ನೀಡಲಾಗಿದೆ ಆದರೆ ಈಗ ತಹಸಿಲ್ದಾರ್ ಕಚೇರಿಯಿಂದ ಕೆರೆ ಒತ್ತುವರಿ ಮನೆ ತೆರೆವುಗೊಳಿಸಬೇಕೆಂದು ನೋಟಿಸ್ ನೀಡಿರುವುದನ್ನು ಖಂಡಿಸಿದರು.
ಈ ಕೂಡಲೇ ನೋಟಿಸ್ ನೀಡಿರುವುದನ್ನು ಹಿಂಪಡೆಯಬೇಕು ಅದೇ ಜಾಗದಲ್ಲಿ ವಾಸಿಸಲು ಮಾನ್ಯ ತಾಲೂಕ್ ದಂಡಾಧಿಕಾರಿಗಳು ಅನುಕೂಲ ಕಲ್ಪಿಸಿ ಕೊಡಬೇಕು ಎಂದು ಒತ್ತಾಯಿಸಿದರು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಪೂಜಾ ರಪ್ಪ. ವಾಲ್ಮೀಕಿ ಜಾಗೃತಿ ವೇದಿಕೆ ಪದಾಧಿಕಾರಿಗಳಾದ ಬೇಕರಿ ನಾಗರಾಜ್. ಹರ್ಷ ಈರಣ್ಣ. ರಮೇಶ್. ಮುರುಳಿ ಮಾರುತಿ. ಶ್ರೀನಿವಾಸ ನಾಯಕ. ಲೋಕೇಶ್ ನಾಯಕ. ಕೆ ಟಿ ಹಳ್ಳಿ ಗ್ರಾಮದ ನೋಟಿಸ್ ಪಡೆದ ನಿವಾಸಿಗಳ ಕುಟುಂಬಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು