ಎಸ್.ಐ.ಓ(SIO) ಇಲಕಲ್ಲ ವತಿಯಿಂದ ಇಂದು ನಗರದ ಇಬ್ರಾಹಿಂ ಮಸ್ಜಿದ್ ಆವರಣದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಆಯಾ ಶಾಲಾ/ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ನಗರದ ವಿವಿಧ ಶಾಲಾ/ಕಾಲೇಜಿನ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು.
ಇಲಕಲ್ಲ: 2023-24ರ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಆಯಾ ಪ್ರೌಢಶಾಲೆ ಮತ್ತು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಂಡಿದ್ದು . ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗುರು ಮಹಾಂತ ಸ್ವಾಮೀಜಿಗಳು ಎಸ್.ಐ.ಓ(SIO) ವಿದ್ಯಾರ್ಥಿ ಸಂಘಟನೆ ಆಯೋಜಿಸಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಎಲ್ಲರನ್ನೂ ಒಳಗೊಂಡಿದೆ, ಆದ್ದರಿಂದ ಈ ಸಮಾರಂಭವು ಸೌಹಾರ್ದ ಪರಂಪರೆಗೆ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು, ವಿದ್ಯಾರ್ಥಿಗಳು ತಮ್ಮ ಮುಂದಿನ ಶೈಕ್ಷಣಿಕ ಕೋರ್ಸ್ ಆಯ್ಕೆಯ ಸಂದರ್ಭದಲ್ಲಿ ಗೊಂದಲಕ್ಕೆ ಒಳಗಾಗದೆ, ಸ್ನೇಹಿತರ ಕೋರ್ಸ್ ಗಳನ್ನೇ ಆಯ್ದುಕೊಳ್ಳುವ ಬದಲು ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಗೆ ಅನುಗುಣವಾಗಿ ತಮ್ಮ ಮುಂದಿನ ಭವಿಷ್ಯಕ್ಕೆ ಪೂರಕವಾಗಿ ಒಂದು ನಿರ್ದಿಷ್ಟ ಗುರಿಯನ್ನು ಸಾಧಿಸಲು ಸಹಕಾರಿಯಾಗುವ ಕೋರ್ಸ್ ನ ಅಧ್ಯಯನಕ್ಕೆ ದಾಖಲಾಗುವಂತೆ ಮಾರ್ಗದರ್ಶನ ನೀಡಿದರು.
ಅದೇ ರೀತಿಯಾಗಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರದ ಖ್ಯಾತ ಗ್ರಾನೈಟ್ ಉದ್ದಿಮೆದಾರರು ಮತ್ತು ಶಿಕ್ಷಣ ಪ್ರೇಮಿಗಳಾದ ಶ್ರೀ ವೆಂಕಟೇಶ್ ಸಾಕಾ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮಹತ್ವವಾದದ್ದು ಮತ್ತು ಅದನ್ನು ಪಡೆಯಲು ಎಂತಹ ಕಷ್ಟ ಬಂದರೂ ಶಿಕ್ಷಣವನ್ನು ಆರ್ಥಿಕ ಕಾರಣಗಳಿಂದ ಅಥವಾ ಮತ್ಯಾವುದೆ ಕಾರಣಗಳಿಂದಾಗಲಿ ಮೊಟಕುಗೊಳಿಸದೆ ಉನ್ನತವಾದ ಎತ್ತರಕ್ಕೆ ಬೆಳೆಯುವವರೆಗೂ ಅಧ್ಯಯನ ಮಾಡಬೇಕು, ಈ ನಿಟ್ಟಿನಲ್ಲಿ ಅನೇಕ ರೀತಿಯ ಸ್ಕಾಲರ್ಶಿಪ್ ಸರ್ಕಾರದಿಂದ ಮತ್ತ ಅನೇಕ ಖಾಸಗಿ ವಲಯಗಳಿಂದ ದೊರೆಯುತ್ತಿದ್ದು ಅವುಗಳ ಸಹಕಾರವನ್ನು ಪಡೆದುಕೊಳ್ಳುವಂತೆ ಮಾರ್ಗದರ್ಶನನೀಡಿದರು.
ಇನ್ನೂ ಎಸ್.ಐ.ಓ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಪೀರ್ ಲಟಗೇರಿ ಮಾತನಾಡಿ ” ಶಿಕ್ಷಣವು ಸಾಮಾಜಿಕ ಒಳಿತೆಂದು ನಾವೆಲ್ಲರೂ ಒಪ್ಪಿದ್ದರು, ಅದರೆ ಅದು ನಮ್ಮಲ್ಲಿ ಸಾಮಾಜಿಕ ಬದಲಾವಣೆಯನ್ನು ತರುತ್ತಿಲ್ಲ, ಅದರೆ ಇಂದು ನಾವುಗಳು ಶಿಕ್ಷಣದಿಂದ ವ್ಯಕ್ತಿ ಮತ್ತು ಸಮಾಜದಲ್ಲಿ ಪರಿವರ್ತನೆಯನ್ನು ತರಬೇಕಿದೆ ಹಾಗೂ ಸಾಮಾಜಿಕ ಕೆಡುಕುಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಶಿಕ್ಷಣ ಸಾಗಿಸಬೇಕಿದೆ , ಇವುಗಳನ್ನು ನಾವು ಗಮನದಲ್ಲಿಟ್ಟುಕೊಂಡು ಅಂಕಗಳು ಶಿಕ್ಷಣವನ್ನು ಅಳೆಯುವ ಮಾನದಂಡವಲ್ಲದೆ, ಅದು ವ್ಯಕ್ತಿತ್ವ ನಿರ್ಮಾಣ ಹಾಗೂ ನೈತಿಕ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಅದನ್ನು ಪ್ರಭಲವಾದ ಅಸ್ತ್ರವಾಗಿಸಿಕೊಂಡು ಈ ನಾಡಿನಲ್ಲಿ ಮತ್ತು ದೇಶದಲ್ಲಿ ವಿಶ್ವಮಾನವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಅಧ್ಯಕ್ಷರಾದ ಸಯೀದ್ ಅಹ್ಮದ್ ಕೊತ್ವಾಲ್, ವಲಯ ಸಂಚಾಲಕ ಮೆಹಬೂಬ್ ಆಲಂ ಬಡಗನ್ ಹಾಗೂ ಎಸ್.ಐ.ಓ ಸ್ಥಾನೀಯ ಅಧ್ಯಕ್ಷರಾದ ಆಸಿಫ್ ಹುಣಚಗಿ, ಎಸ್.ಐ.ಓ(SIO) ಸದಸ್ಯರು, ಕಾರ್ಯಕರ್ತರು ಹಾಗೂ ವಿದ್ಯಾರ್ಥಿ-ಪೋಷಕರು ಉಪಸ್ಥಿತರಿದ್ದರು.