ಕರ್ನಾಟಕದ ಸರ್ಕಾರದ ಅಂಗ ಸಂಸ್ಥೆಯಾದ “ನಂದಿನಿ” ಇದೀಗ ಅಂತರ್ ರಾಷ್ಟ್ರೀಯ ಮಟ್ಟದ ಪ್ರಸಂಶಗೆ ಪಾತ್ರವಾಗಿದೆ. ಮಲೇಷಿಯಾ, ವಿಯೆಟ್ನಾಂ, ಸಿಂಗಾಪುರ, ಅಮೇರಿಕಾ, ದುಬೈ, ಯುಎಇ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಈಗ T20 ವಿಶ್ವಕಪ್ ಪಂದ್ಯಕೂಟದಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ.
ರಾಜ್ಯದ ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳು ಮತ್ತು ನಾಡಿನ ರೈತರ ಶ್ರಮವೆರಡನ್ನೂ ವಿಶ್ವಕ್ಕೆ ಪರಿಚಯಿಸುವ ಸಂಕಲ್ಪ ನಮ್ಮದು. ನಂದಿನಿಯನ್ನು ಜಾಗತಿಕ ಬ್ರಾಂಡ್ ಆಗಿ ರೂಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ.
ಈ ಬಾರಿ ವಿಶ್ವಕಪ್‌ನಲ್ಲಿ ರಾರಾಜಿಸಲಿದೆ ನಂದಿನಿ, ಕಂಗೊಳಿಸಲಿದೆ ಕನ್ನಡ.
ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಈ ವಿಚಾರಗಳನ್ನು ಹಂಚಿಕೊಂಡು ಸಂತಸ ವ್ಯಕ್ತ ಪಡಿಸಿದ್ದಾರೆ.
ಇನ್ನೂ ಐಸಿಸಿ ಟಿ-20 ಟೂರ್ನಿಗೆ ಕರ್ನಾಟಕದ ಹೆಮ್ಮೆಯ ನಂದಿನಿ ಬ್ರ್ಯಾಂಡ್ ಇರೋ ಲೋಗೊವನ್ನ ಸ್ಕಾಟ್ಲೆಂಡ್ ತಂಡ ಇದೀಗ ಅನಾವರಣಗೊಳಿಸಿದೆ. ಪ್ರಮುಖವಾಗಿ ಸ್ಕಾಟ್ಲೆಂಡ್ ಜೆರ್ಸಿಯ ಬಲ ತೋಳಿನ ಮೇಲೆ ನಂದಿನಿ ಲಾಂಛನವನ್ನ ಹಾಕಲಾಗಿದ್ದು, ಅದ್ರ ಮೇಲೆ ನಂದಿನಿ ಅಂತ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ. ಈ ಹೊಸ ಜೆರ್ಸಿಗಳನ್ನ ತೊಟ್ಟಿರೊ ಆಟಗಾರರ ಫೋಟೋವನ್ನ ಸ್ಕಾಟ್ಲೆಂಡ್ ತಂಡ ತನ್ನ ವೈಬ್‌ಸೈಟ್‌ನಲ್ಲಿ ರಿಲೀಸ್ ಕೂಡ ಮಾಡಿದೆ.