ಹುಬ್ಬಳ್ಳಿ: ಹುಬ್ಬಳ್ಳಿಯ ಅಂಜಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಓರ್ವ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಮತ್ತೋರ್ವ ಪೊಲೀಸ್ ಸಿಬ್ಬಂದಿಯನ್ನು ಅಮಾನತಗೊಳಿಸಲಾಗಿದೆ. ಬೆಂಡಿಗೇರಿ ಪೊಲೀಸ್ ಇನ್ಸಪೆಕ್ಟರ್ ಸಿ.ಬಿ.ಚಿಕ್ಕೋಡಿ ಹಾಗೂ ಮಹಿಳಾ ಹೆಡ್ ಕಾನಸ್ಟೇಬಲ್ ರೇಖಾ ಹಾವರಡ್ಡಿ ಕರ್ತವ್ಯ ಲೋಪ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬುಧವಾರ ಮುಂಜಾನೆ ವಿಶ್ವ ಅಲಿಯಾಸ್ ಗಿರೀಶ್ ಎಂಬಾತ ಅಂಜಲಿ ಮನೆಗೆ ನುಗ್ಗಿ ಆಕೆಯನ್ನ ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿದ್ದ. ಆಕೆ ಪ್ರೀತಿಸಲು ನಿರಾಕರಿಸಿದ್ದಕ್ಕೆ ಕೋಪದಲ್ಲಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಮೊದಲೇ ಪೊಲೀಸರಿಗೆ ಮಾಹಿತಿ ನೀಡಿದ್ದ ಕುಟುಂಬ
ಆರೋಪಿ ಗಿರೀಶ ತನ್ನನ್ನು ಪ್ರೀತಿಸದಿದ್ದಕ್ಕೆ ನೇಹಾ ಹಿರೇಮಠ್ ಹತ್ಯೆಯಾದ ಮಾದರಿಯಲ್ಲಿ ನಿನ್ನನ್ನೂ ಕೊಲ್ಲುತ್ತೇನೆ ಎಂದು ವಾರದ ಹಿಂದೆಯೇ ಅಂಜಲಿಗೆ ಬೆದರಿಕೆ ಹಾಕಿದ್ದ. ಇದರಿಂದ ಹೆದರಿದ ಆಕೆಯ ಅಜ್ಜಿ ಹಾಗೂ ಸಹೋದರಿ ಈ ಕುರಿತು ಪೊಲೀಸ್ ಠಾಣೆಗೆ ಬಂದು ದೂರಿನ ಮೂಲಕ ಮಾಹಿತಿ ನೀಡಿದ್ದರು. ಆದರೆ ಪೊಲೀಸರು ಕ್ರಮ ತೆಗೆದುಕೊಳ್ಳುವುದನ್ನ ಬಿಟ್ಟು, ಹಾಗೇನು ಆಗಲ್ಲ ಎಂದು ಉಢಾಪೆಯ ಮಾತುಗಳಾಡಿ ಕೆಲವು ಸಬೂಬುಗಾಳನ್ನು ಹೇಳಿ ಕಳಿಸಿದ್ದರು. ಅಧಿಕಾರಿಗಳು ನಿರ್ಲಕ್ಷ್ಯತೆಯಿಂದ ಇಂದು ಅಂಜಲಿಯ ಕೊಲೆಯಾಗಿದೆ. ಕುಟುಂಬಸ್ಥರು ದೂರು ನೀಡಲು ಬಂದಾಗ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಕ್ಕೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಕೊಲೆ ಮಾಡಿರುವ ವಿಶ್ವ ಅಲಿಯಾಸ್ ಗಿರೀಶ ಯುವತಿ ಕುಟುಂಬಕ್ಕೆ ಪರಿಚಯಸ್ಥನಾಗಿದ್ದ, ಯುವತಿಯ ಪೋಷಕರು ನಿಧನರಾಗಿದ್ದರಿಂದ ಆಕೆ ಅಜ್ಜಿ ಆಶ್ರಯದಲ್ಲಿದ್ದಳು. ನೆರೆಹೊರೆಯವರ ಬಳಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಗಿರೀಶ ಆಕೆಯ ಹಿಂದೆ ಬಿದ್ದಿದ್ದ, ಪ್ರೀತಿಸುವಂತೆ ಪೀಡಿಸುತ್ತಿದ್ದ. ಮೈಸೂರಿಗೆ ಹೋಗೋಣ ಎಂದು ಬೆನ್ನು ಬಿದ್ದಿದ್ದ. ಆದರೆ ಅಂಜಲಿ ಇದಕ್ಕೆಲ್ಲಾ ಒಪ್ಪಿರಲಿಲ್ಲ ,ಇದೇ ಕಾರಣಕ್ಕೆ ಕೊಲೆ ಬೆದರಿಕೆ ಹಾಕಿದ್ದ ಎನ್ನಲಾಗಿದ್ದು.
ಇನ್ನೂ ಗಿರೀಶನ ಬೆದರಿಕೆ ಬೆನ್ನಲ್ಲೇ ಅಂಜಲಿ ಹಾಗೂ ಆಕೆಯ ಸಹೋದರಿ ಪೊಲೀಸ್ ಠಾಣೆಗೆ ಬಂದಿದ್ದು ನಿಜ ಎಂದು ಸಿಸಿಟಿವಿಯಿಂದ ದೃಢಪಟ್ಟಿದೆ. ಇದೇ ಸಾಕ್ಷಿ ಆಧಾರದ ಮೇಲೆ ಇಬ್ಬರು ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲಾಗಿದೆ. ಕೊಲೆ ಆರೋಪಿ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ.
ಆರೋಪಿ ಗಿರೀಶನಿಗಿದು ಮೊದಲ ಪೊಲೀಸ್ ಕೇಸ್ ಆಗಿಲ್ಲದೆ, ಆತನ ಮೇಲೆ ಈ ಹಿಂದೆಯೇ ಕಳ್ಳತನದ ಕೇಸ್ ಕೂಡ ಇದ್ದದು ತಿಳಿದುಬಂದಿದ್ದು. ತನ್ನ ಸ್ನೇಹಿತ ಶೇಷ್ಯಾನ ಜೊತೆಗೂಡಿ ಬುಲೆಟ್ ಬೈಕ್ ಕದ್ದಿದ್ದ ಪ್ರಕರಣ ಕೂಡ ಇದೆ. ಆತನ ಸ್ನೇಹಿತ ಕೂಡ ವಾರದ ಹಿಂದೆಯಷ್ಟೆ ಸದ್ದಾಂ ಎಂಬ ಯುವಕನನ್ನ ಕೊಂದು ಜೈಲು ಸೇರಿದ್ದ. ಇದೀಗ ಮೂರು ದಿನದ ಅಂತರದಲ್ಲಿ ಗಿರೀಶ ಅಂಜಲಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದಾನೆ.