ನವದೆಹಲಿ: ಈ ಹಿಂದೆ ಪದವಿ ಶಿಕ್ಷಣವು 3 ವರ್ಷದ ವ್ಯಾಸಂಗ ಎಂದು ನಿಗದಿಪಡಿಸಲಾಗಿತ್ತು ಆದರೆ 2017-18 ನೇ ಸಾಲಿನಲ್ಲಿ ಪಠ್ಯಕ್ರಮ ಬದಲಾವಣೆಯ ವಿಚರದಂತೆ NPE ಶಿಕ್ಷಣ ಕ್ಷೇತ್ರಕ್ಕೆ ಕಾಲಿರಿಸಿದಂತೆ ಅನೇಕ ಬದಲಾವಣೆ ಗಳನ್ನೂ ತಂದಿತು. ಆಗಲೇ 3 ವರ್ಷದ ಪದವಿಯ ಅಭ್ಯಾಸವನ್ನು 4 ವರ್ಷದವರೆಗೂ ವಿಸ್ತರಿಸಿತು. ಇದೀಗ ಹೊಚ್ಚ ಹೊಸ ಸುದ್ದಿ ಎಂದರೆ 4 ವರ್ಷದ ಪದವಿಪೂರ್ವ ಪದವಿ ಪಡೆದ ವಿದ್ಯಾರ್ಥಿಗಳು ಈಗ ನೇರವಾಗಿ ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ (ಎನ್‌ಇಟಿ) ಹಾಜರಾಗಲು ಅರ್ಹರಾಗಿದ್ದಾರೆ ಎಂದು ಯುಜಿಸಿ ಅಧ್ಯಕ್ಷ ಶ್ರೀಯುತ ಜಗದೀಶ್ ಕುಮಾರ್ ಘೋಷಿಸಿದ್ದಾರೆ. ಈ ಕ್ರಮವು ಉನ್ನತ ಶಿಕ್ಷಣವನ್ನು ಮುಂದುವರಿಸಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರಕ್ರಿಯೆಯನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ ಎಂದು ಭಾವಿಸಲಾಗಿದ್ದು.
4 ವರ್ಷಗಳ ಪದವಿಪೂರ್ವ ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಪದವಿ ಕೋರ್ಸ್ ನ ಶಿಸ್ತು ಲೆಕ್ಕಿಸದೆ ಯಾವುದೇ ವಿಷಯದಲ್ಲಿ ಪಿಎಚ್ಡಿ(Phd) ಮಾಡಬಹುದು ಎಂದು ಯುಜಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಹೆಚ್ಚುವರಿಯಾಗಿ ಶೇಕಡಾ 75% ಒಟ್ಟು ಅಂಕಗಳು ಅಥವಾ ತತ್ಸಮಾನ ಶ್ರೇಣಿಗಳನ್ನು ಹೊಂದಿರುವವರು ನೇರವಾಗಿ ಪಿಎಚ್ಡಿ ಮಾಡಬಹುದು. ಇದು ಶೈಕ್ಷಣಿಕ ಪ್ರಗತಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎಂದು ಈ ಬದಲಾವಣೆಗಳು ಈ ಪರೀಕ್ಷೆಗಳಿಗೆ ಅರ್ಹತಾ ಮಾನದಂಡಗಳಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತವೆ. ಅರ್ಹ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತವೆ ಎನ್ನಲಾಗಿದೆ.