ಈ ಹಿಂದೆ ಕೆಲವು ಚಟುವಟಿಕೆಗಳ ಮೂಲಕ ವಿಧ್ಯಾರ್ಥಿ ಸಂಘಟನೆಯಾಗಿ ಗುರುತಿಸಿಕೊಂಡಿದ್ದ ‘ ದಲಿತ ವಿದ್ಯಾರ್ಥಿ ಪರಿಷತ್ ‘ ಗೆ ಮುಖಂಡರು ಹಾಗೂ ತುಮಕೂರು ಜಿಲ್ಲೆಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಯುತ ಅಜಿತ್ ಕುಮಾರ್ ಬೆಳ್ಳಿಬಟ್ಲು ಓಬಯ್ಯ ರವರು ತಮಗೆ ನೀಡಿದ ಜವಾಬ್ದಾರಿಯನ್ನು ರಾಜ್ಯ ಸಮಿತಿಯ ಘಟಕಕ್ಕೆ ಹಿಂತಿರುಗಿಸಿದ್ದಾರೆ. ಈ ವಿಚಾರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ‘ ನನಗೆ ನೀಡಿದ ತುಮಕೂರು ಜಿಲ್ಲಾ ಸಂಚಾಲಕ ಪದವಿಯನ್ನು ತ್ಯಜಿಸುತ್ತಿದ್ದು . ಈ ಬಗ್ಗೆ ನನ್ನ ಅಧಿಕೃತ ಪತ್ರದಲ್ಲಿ ವಿಷಯವನ್ನು ರಾಜ್ಯ ಸಂಚಾಲಕರು ಮತ್ತು ರಾಜ್ಯಾಧ್ಯಕ್ಷರಿಗೆ ತಿಳಿಸಿದ್ದೇನೆ . ಹಾಗೂ ನನ್ನ ವೈಯಕ್ತಿಕ ಅಂತರ್ಜಾಲ ತಾಣಗಳಲ್ಲೂ ಈ ಬಗ್ಗೆ ಸ್ಪಷ್ಟತೆ ನೀಡಿದ್ದೇನೆ ‘ ಎಂದು ತಿಳಿಸಿದ್ದರು.
ಇನ್ನೂ ಪತ್ರದಲ್ಲಿ ತಮ್ಮ ಅವರು ತಮ್ಮ ಪದವಿ ತ್ಯಜಿಸಲು ಈ ಕೆಳಕಂಡ ಕಾರಣಗಳನ್ನು ನೀಡಿದ್ದಾರೆ.
1) 2020 ರಿಂದ ಈವರೆಗೆ ಅಂದರೆ ಸುಮಾರು 4 ವರ್ಷದ ಕಾಲ ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದರು . ಪ್ರಸ್ತುತತದ ವರೆಗೂ ಅರ್ಥಕ ಸಬಲತೆಯ ಬಗ್ಗೆ ನಿಮ್ಮಗಳಿಂದ ಬರೀ ಭರವಸೆಗಳು ಮೂಡಿಬಂದಿವೆ ಹೊರತು ಯಾವು ಕಾರ್ಯಗತವಾಗಿಲ್ಲ ಇಗಿದ್ದು ನಾವು ಕುಟುಂಬದ ಜವದ್ವರಿಯನ್ನು ನಿರ್ವಹಿಸಲಾಗದೆ ಪರಿಷತ್ ( ಸಂಘಟನೆಯಲ್ಲಿ ) ಆರ್ಥಿಕವಾಗಿ ಸಾಕಷ್ಟು ಕಳೆದು ಕೊಂಡಿದ್ದರು ಯಾವುದು ಕೂಡ ನಿಮ್ಮಿಂದ ಹಿಂದಿರುಗಿಲ್ಲ .
2 ) ಪ್ರಸ್ತುತ ನಾವು ವಿಧ್ಯಾರ್ಥಿಗಳು ಆಗಿದ್ದು ಪರಿಷತ್ ನಾ ಕಾರ್ಯಕ್ರಮಗಳಿಗೆ ನೀವು ಹೇಳಿದಾಗ ನಾವು ಸರ್ಕಾರಿ ನೌಕರಿಂದಾಗಲಿ ಅಥವಾ ಸಮುದಾಯದ ಶ್ರೀಮಂತ ವ್ಯಕ್ತಿಗಳಿಂದ ಚಂದ ವಸೂಲಿ ಮಾಡುವ ಪದ್ಧತಿ ನಮ್ಗೆ ಹಿಡಿಸಲಿಲ್ಲ ಈ ಬಗ್ಗೆ ನಾನು ನಿಮ್ಮ ಬಳಿ ಪ್ರಸ್ತಾಪ ಮಾಡಿದರು ” ಅಂಬೇಡ್ಕರ್ ಕೂಡ ಕೆಲವು ಕಡೆ ಚಂದ ಪಡೆದಿದ್ದಾರೆ ” ಎನ್ನುವ ಮಾತು ನಿಜಕ್ಕೂ ನಮ್ಮಿಂದ ಸಹಿಸಲು ಆಗಲಿಲ್ಲ.
3 ) ನೀವು ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ ಜಾಹೀರಾತು ಪತ್ರಿಕೆಗಳಲ್ಲಿ ನೀಡದ ಭರವಸೆಗಳಾದ ಉಚಿತ ತರಬೇತಿ ನೀಡುವ ವಿಚಾರವಾಗಿ 4 ವರ್ಷಗಳಿಂದ ನಮ್ಮ ಜಿಲ್ಲೆಯ ಯಾವ ವಿಧ್ಯಾರ್ಥಿಗಳು ಅದರ ಫಲಾನುಭವಿಗಳು ಆಗದೇ ಇರುವುದರಿಂದ ಅನೇಕ ವಿಧ್ಯಾರ್ಥಿಗಳ ಈ ಪ್ರಶ್ನೆಗೆ ನಾವು ಉತ್ತರ ನೀಡಲು ಆಗುತ್ತಿಲ್ಲ .
4 ) ನಾವು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಿದ್ಧಾಂತದ ಸ್ವಾಭಿಮಾನದ ಬದುಕನ್ನು ಎದೆಗೆ ಅಪ್ಪಿಕೊಂಡು ಬದುಕುತ್ತಿದ್ದೇವೆ ಆದರೆ ಸಂಘಟನೆಯಲ್ಲಿ ಕಾಲ ಕಳೆದಂತೆ ಅ ಸ್ವಾಭಿಮಾನಕ್ಕೆ ದಕ್ಕೆ ತರುವಂತ ಕೆಲವು ವ್ಯಕ್ತಿಗಳ ನಡವಳಿಕೆ ನಮಗೆ ಸಹಿಸಲಾಗಲಿಲ್ಲ .
5 ) ಈ ವರೆಗೂ ನಾವು ನಿಮ್ಮಗಳಿಂದ ಯಾವುದನ್ನು ಋಣಾತ್ಮಕವಾಗಿ ಲಾಭಗಳನ್ನು ಪಡೆದಿಲ್ಲ ಇದು ಸ್ಪಷ್ಟತೆ , ಏನಾದರೂ ನಾವು ಸಂಘಟನೆಯಲ್ಲಿ ಇದ್ದು ಒಂದಷ್ಟು ಅನುಕೂಲಗಳನ್ನು ಪಡೆದಿದ್ದಾರೆ ಅದು ನಮ್ಮ ಪರಿಶ್ರಮಕ್ಕೆ ತಕ್ಕ ಲಾಭವೆಂದೆ ನೀವು ತಿಳಿಯಬೇಕು .
ಈ ಕಾರಣಗಳನ್ನು ವಿದ್ಯಾರ್ಥಿ ಸಮುದಾಯಗಳ ಮುಂದೆ ಪ್ರಶ್ನಾರ್ಥಕ ಎಂಬಂತೆ ತಿಳಿಸುವ ಮೂಲಕ ಅವರು ಪರಿಷತ್ ( ಸಂಘಟನೆಯಿಂದ ) ಶಾಶ್ವತವಾಗಿ ದೂರು ಉಳಿಯುವುದಾಗಿ ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ