ಸೌಂದರ್ಯವೆಂದರೆ ಕೇವಲ ಬರೀ ಮುಖ ಚೆನ್ನಾಗಿದ್ದರೆ ಅದು ಸೌಂದರ್ಯವಲ್ಲ, ಆಂತರಿಕ ಸೌಂದರ್ಯವೈ ಮುಖ್ಯವಾಗಿರುತ್ತದೆ. ಎಲ್ಲಾ ಸಮಸ್ಯೆಗಳಿಗೂ ಒಂದೊಂದು ಪರಿಹಾರ ಇದ್ದೇ ಇರುತ್ತದೆ.
ಆರೋಗ್ಯಕರವಾದ ತ್ವಚೆಗೆ ಕೆಲವೊಂದಿಷ್ಟು ಟಿಪ್‌ಗಳು
ಈಗಂತೂ ಎಲ್ಲರ ಮನೆಯಲ್ಲಿಯೂ ಆಲೋವೆರಾವನ್ನು ಬೆಳೆಸಿರುತ್ತಾರೆ. ಇಲ್ಲದಿದ್ದರೆ ಮಾರುಕಟ್ಟೆಗಳಲ್ಲಿ ಆಲೋವೆರಾ ಜೆಲ್ ಕೂಡ ಲಭ್ಯವಾಗಿದೆ.
ಈ ಆಲೋವೆರಾವು ತ್ವಚೆಯನ್ನು ಕಾಂತಿಯುತವಾಗಿ ಮಾಡಿ ತ್ವಚೆಯಲ್ಲಿ ತೇವಾಂಶವಿರುವಂತೆ ಮಾಡುತ್ತದೆ ಆದ್ದರಿಂದ ಇದನ್ನು ರಾತ್ರಿ ಮಲಗುವ ಮುನ್ನ ಹಚ್ಚಿ ಮಸಾಜ್ ಮಾಡಿದರೆ ಬೆಳಗಾಗುವಷ್ಟರಲ್ಲಿ ಚರ್ಮವೂ ಹೊಳೆಯುವಂತಾಗುತ್ತದೆ.
ತೆಂಗಿನ ಎಣ್ಣೆಯೂ ಎಲ್ಲ ರೀತಿಯಂದಲೂ ಸಹಕಾರಿಯಾಗಿದೆ. ಇದೂ ಕೂಡ ತ್ವಚೆಯನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದಲ್ಲದೆ ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ. ಸೂರ್ಯನ ವಿಷಕಾರಿಕ ಕಿರಣಗಳಿಂದ ತ್ವಚೆಯನ್ನು ರಕ್ಷಣೆ ಮಾಡುತ್ತದೆ.
ಹಾಲು: ಈ ಹಾಲು ತಾಯಿಯಂತೆ ಮಗುವಿನ ಹಸಿವನ್ನು ತಣಿಸುತ್ತದೆ ಎಂದರೆ ಇದರ ಮಹತ್ವ ಎಷ್ಟಿರಬಹುದೆಂದು ನಿಮಗೆ ಈಗಾಗಲೇ ಅಂದಾಜಿಗೆಏ ಬಂದಿರುತ್ತದೆ. ನಿಮ್ಮ ತ್ವಚೆಯು ತೇವಾಂಶವನ್ನು ಕಳೆದುಕೊಳ್ಳದಂತೆ ಮಾಡುತ್ತದೆ ಇದನ್ನು ಸೌಂದರ್ಯವಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಳಸಬಹುದು.
ನೀರು: ನೀರು ನಮ್ಮ ಆರೋಗ್ಯಕ್ಕೆ ರಾಮಬಾಣವಿದ್ದಂತೆ ನೀರು ಇಲ್ಲದಿದ್ದರೆ ಎಲ್ಲವೂ ಶೋನ್ಯ. ಪ್ರತಿದಿನ 4-5 ಲೀಟರ್ ನೀರನ್ನು ಕುಡಿದರೆ ಯಾವ ಕಾಯಿಲೆಯೂ ಹತ್ತಿರ ಸುಳಿಯುವುದಿಲ್ಲ. ನೀರು ಸರಿಯಾಗಿ ಕುಡಿಯುವುದರಿಂದ ಅರ್ಧ ಖಾಯಿಲೆಗಳನ್ನು ವಾಸಿ ಮಾಡಿಕೊಂಡಂತೆ.
ಎಳನೀರು: ಈ ಎಳನೀರು ಈಗಿನ ಆಧುನಿಕ ಜೀವನ ಶೈಲಿಯಲ್ಲಿ ಅನೇಕ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ವೈದ್ಯರ ಬಳಿ ಹೋಗುವ ಮುನ್ನ ಮನೆಯಲ್ಲಿಯೇ ಪ್ರಥಮ ಚಿಕಿತ್ಸೆಯನ್ನು ಮಾಡಿಕೊಳ್ಳುತ್ತಾರೆ ಆಗ ನೆನಪಾಗುವುದೇ ಎಳನೀರು. ಈ ಎಳನೀರನ್ನು ಕುಡಿಯುವಂತೆ ಡಾಕ್ಟರ್ ಸಲಹೆಯನ್ನು ನೀಡುತ್ತಾರೆ. ಅದರಂತೆ ಪ್ರತಿದಿನವೂ ಎಳನೀರನ್ನು ಕುಡಿದರೆ ಚರ್ಮದ ಕಾಂತಿಯೂ ಹೆಚ್ಚಾಗುತ್ತದೆ.
ಹರಿಶಿಣ: ಈ ಹರಿಶಿಣದಲ್ಲಿ ಔಷಧಿಯ ಗುಣ ಯಥೇಚ್ಚವಾಗಿರುತ್ತದೆ, ಇದು ಸಾಂಬಾರ್ ಪದಾರ್ಥ ಮಾತ್ರವಾಗದೇ ಆರೋಗ್ಯ ಸಮಸ್ಯೆಗಳಿಗೂ ರಾಮಬಾಣವಾಗಿದೆ. ಈ ಹರಿಶಿಣವೂ ಯಾವಯದೇ ರೀತಿಯ ಚರ್ಮದ ಅಲರ್ಜಿಗೆ ರಾಮಬಾಣವಾಗಿದೆ. ತ್ವಚೆಗೆ ಹರಿಶಿಣವನ್ನು ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆದುಕೊಳ್ಳುತ್ತಾ ಬಂದರೆ ತ್ವಚೆಯೂ ಆರೋಗ್ಯಕರವಾಗಿರುತ್ತದೆ.
ಸಾಸಿವೆ ಎಣ್ಣೆ: ಸಾಸಿವೆ ಎಣ್ಣೆಯನ್ನು ಕೊಂಚ ಬಿಸಿ ಮಾಡಿ ನಂತರ ಆರಿಸಿ ಮೈಕೈಗೆಲ್ಲಾ ಹಚ್ಚಿ ಮಸಾಜ್ ಮಾಡಿಕೊಂಡರೆ ತ್ವಚೆಯೂ ಮೃದುವಾಗಿ ಹೊಳೆಯುತ್ತದೆ.
ಬಾದಾಮಿ ಎಣ್ಣೆ: ಬಾದಾಮಿ ಎಣ್ಣೆಯನ್ನು ಕೂಡಾ ರಾತ್ರಿ ಹಚ್ಚಿ ಬೆಳಗ್ಗೆ ತೊಳೆಯುವುದರಿಂದ ತ್ವಚೆಯೂ ಮೃದುವಾಗಿ ತೇವಾಂಶವನ್ನು ಉಳಿಯುವಂತೆ ಮಾಡುತ್ತದೆ.