Site icon NBTV Kannada

ತೊಗರಿ ಬೆಳೆ ಕ್ಷೇತ್ರೋತ್ಸವ

ಪಾವಗಡ : ಆಹಾರ ಮತ್ತು ಪೌಷ್ಠಿಕ ಭದ್ರತಾ ಯೋಜನೆ ಅಡಿಯಲ್ಲಿ ನಿಡಗಲ್ ಹೋಬಳಿಯ ಚನ್ನಕೇಶವಪುರ ಗ್ರಾಮದಲ್ಲಿ ತಾಲ್ಲೂಕು ಕೃಷಿ ಇಲಾಖೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಸಹಯೋಗದಲ್ಲಿ ತೊಗರಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ,ನಿಡಗಲ್ ಹೋಬಳಿಯ ಕೃಷಿ ಅಧಿಕಾರಿ ಅಶೋಕ್ ಮಾತನಾಡಿ, ರೈತರಿಗೆ ಅನುಕೂಲವಾಗುವ ರೀತಿ ಮುಂಗಾರು ಹಂಗಾಮಿನಲ್ಲಿ ಬಿತ್ತನೇ ಬೀಜ, ಪೋಷಕಾಂಶಗಳು ವಿತರಣೆ ಮಾಡಿದ್ದೇವೆ ಎಂದರು.

ಪ್ರಸ್ತುತ ಕೃಷಿ ಇಲಾಖೆ ವತಿಯಿಂದ ರೈತರಿಗೆ ಅನುಕೂಲವಾಗುವಂತಹ ಕೃಷಿ ಯಂತ್ರೋಪಕರಣಗಳಾದ ಮಿನಿ ಟ್ಯಾಕ್ಟರ್,ಕಲ್ಟಿ ವೇಟರ್, ರೋಟೋವೇಟರ್, ಗಿಡಗಳಿಗೆ ಔಷಧಿ ಹೊಡೆಯುವ ಉಪಕರಣಗಳು, ಕಳೆ ತೆಗೆಯುವ ಉಪಕರಣಗಳನ್ನು ಸಹಾಯಧನದ ಮೂಲಕ ವಿತರಿಸಲಾಗುತ್ತದೆ ಎಂದರು.

ಶೇಂಗಾ ಮತ್ತು ತೊಗರಿ ಬೆಳೆಯಲು
ಕ್ಷೇತ್ರೋತ್ಸವ ತಗೊಳ್ಳಿ ಅಂತ ಸರ್ಕಾರದಿಂದ ಕ್ರಿಯಾ ಯೋಜನೆ ಬಂದಿದೆ ಅದರ ಪ್ರಕಾರ ತೆಗೆದುಕೊಂಡಿದ್ದೇವೆ ಭೂಮಿ ಹೆಚ್ಚಿನ ಫಲವತ್ತತೆ ಕೊಡುವುದಕ್ಕೆ ಗಮನಹರಿಸಬೇಕು ಬಿ ಆರ್ ಜೆ 5 ತಳಿ ಬೇಳೆ ಮಾಡುವುದಕ್ಕೆ ಸೂಕ್ತವಾದ ತಳಿಯೆಂದು ತಿಳಿಸಿದರು.

ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಬೀರೇಂದ್ರ ಬಾಬು ಭಾಗವಹಿಸಿ ರೈತರಿಗೆ ತೊಗರಿ ಬೆಳೆಯ ಬಗ್ಗೆ ಮಾಹಿತಿಯನ್ನು ನೀಡಿದರು,

ಶ್ರೀ ಕ್ಷೇತ್ರ ಗ್ರಾಮ ಅಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ಬೋರಣ್ಣ ಮಾತನಾಡಿ.

ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದಲ್ಲಿ ರೈತರಿಗೂ ಸಹ ಮಾಹಿತಿ ತಿಳಿಸುತ್ತೇವೆ ರೈತರಿಗೆ 2 ಲಕ್ಷದಿಂದ 3, ವರೆಗೂ ಕೃಷಿಗೆ ಸಂಬಂಧಿಸಿದಂತೆ ಸಾಲವನ್ನು ನೀಡುತ್ತಿದ್ದೇವೆ, ಅಂತರ ಬೆಳೆ, ಸಿರಿಧಾನ್ಯ ಬೆಳೆ, ಸಾವಯವ ಗೊಬ್ಬರ, ರೈತರಿಗೆ ಬೆಳೆ ಬೆಳೆಯುವುದಕ್ಕೆ ಸಂಘದ ವತಿಯಿಂದ ಸಾಲ ನೀಡಲಾಗುವುದು ಎಂದರು.

ಈ ಕಾರ್ಯಕ್ರಮಕ್ಕೆ ಕೃಷಿ ಸಂಶೋಧನಾ ಕೇಂದ್ರದ ಸೋನಿಯಾ, ನಿಡಗಲ್ ಹೋಬಳಿಯ ಕೃಷಿ ಅಧಿಕಾರಿ ಅಶೋಕ ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಶ್ರೀ ಬೀರೇಂದ್ರ ಬಾಬು ರೈತರಿಗೆ ತೊಗರಿ ಬೆಳೆಯ ಬಗ್ಗೆ ಮಾಹಿತಿಯನ್ನು ನೀಡಿದರು

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾ ದ ಗಿರೀಶ್, ಅಂಜಿನಪ್ಪ, ರವಿ ಭೀಮಣ್ಣ, ಗೀತಾ, ಕೆಂಚಮ್ಮ, ಕರಿಯಣ್ಣ, ಓಬಳಪ್ಪ, ಚಿತ್ತಪ್ಪ ಹಾಗೂ ರೈತಾಪಿ ವರ್ಗದವರು  ಭಾಗವಹಿಸಿದ್ದರು,

Exit mobile version