Site icon NBTV Kannada

ಡಾ.ಬಿ.ಆರ್.‌ ಅಂಬೇಡ್ಕರ್‌ ಕಾನೂನು ಕಾಲೇಜು ವತಿಯಿಂದ ನ.26 ಕ್ಕೆ ” ಸಂವಿಧಾನ ದಿನ ” ಆಚರಣೆ

  ಮುಖ್ಯ ಅತಿಥಿಗಳಾಗಿ ಸಚಿವ ದಿನೇಶ್‌ ಗುಂಡೂರಾವ್‌ ; ಸಚಿವ ಎಚ್‌ ಕೆ ಪಾಟೀಲ್‌ ,



ಬೆಂಗಳೂರು
: ನಗರದ ಸ್ವತಂತ್ರ್ಯಪಾಳ್ಯದ ಡಾ.ಬಿ.ಆರ್.‌ ಅಂಬೇಡ್ಕರ್‌ ಕಾನೂನು ಕಾಲೇಜು ವತಿಯಿಂದ ” ಸಂವಿಧಾನ ದಿನ
” ಆಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡುವುದಾಗಿ. ಕಾಲೇಜು ಪ್ರಾಂಶುಪಾಲರಾದ , ಶ್ರೀ ಮತಿ ಪ್ರೊ.
ಕಾರ್ತಿಕ ರಾಮಮೂರ್ತಿ ಅವರು ಇಂದು ಮಾಧ್ಯಮಗಳಿಗೆ ತಿಳಿಸಿದರು. ಪ್ರಸ್ತುತ ಕಾಲದಲ್ಲಿ ವಿದ್ಯಾರ್ಥಿಗಳಿಗೆ
ಸಂವಿಧಾನವು ಪಠ್ಯ ರೂಪದಲ್ಲಿ ನೀಡುವುದು ಮಾತ್ರವಲ್ಲದೆ. ಅದರ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವುದರ
ಸಲುವಾಗಿ ಈ ಸಂವಿಧಾನದ ದಿನವನ್ನು ನಾವು ನಮ್ಮ ಕಾಲೇಜು ವತಿಯಿಂದ ಆಚರಣೆ ಮಾಡುತ್ತಿದ್ದೆವೆ. ಈ ಕಾರ್ಯಕ್ರಮಕ್ಕೆ
ಮುಖ್ಯ ಅತಿಥಿಗಳಾಗಿ ಸ್ಥಳಿಯ ಶಾಸಕರು ಮತ್ತು ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಶ್ರೀ ಯುತ ದಿನೇಶ್‌
ಗುಂಡೂರಾವ್ ರವರು ಮತ್ತು ಕಾನೂನು ಸಚಿವರಾದ ಶ್ರೀ ಯುತ ಎಚ್‌ ಕೆ ಪಾಟೀಲ್ ರಚರು‌ ಹಾಗೂ ವಿಶ್ರಾಂತಿ
ನ್ಯಾಧೀಶರು, ಬಿ.ಬಿ.ಎಂ.ಪಿ ಕಾನೂನು ಅಧಿಕಾರಿ ಶ್ರಿ ಸೀನಪ್ಪ , ಶ್ರೀ ಪ್ರೋ. ಡಾ. ಸಿ. ಬಸವರಾಜು ರವರು
ಗೌರವಾನ್ವಿತ ಉಪ ಕುಲಪತಿಗಳು , ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ. ರವರು ಆಗಮಿಸಲಿದ್ದಾರೆ
. ಕಾರ್ಯಕ್ರಮದಲ್ಲಿ ಸಾಂಸ್ಕ್ರತಿಕ ಚಟುವಟಿಕೆಗಳು ಮತ್ತು ಸಂವಿಧಾನದ ಮಹತ್ವದ ವಿಚಾರದ ಚರ್ಚೆಯನ್ನು
ವಿಧ್ಯಾರ್ಥಿಗಳೊಂದಿಗೆ ನಡೆಸುದಾಗಿ ತಿಳಿಸಿದ್ದು. ಇದೇ ಸಮಯದಲ್ಲಿ ಕಾರ್ಯಕ್ರಮದ ಕರಪತ್ರವನ್ನು ಬಿಡುಗಡೆ
ಮಾಡಲಾಗಿದ್ದು ಈ ಸಮಯದಲ್ಲಿ ಕಾಲೇಜು ಸಿಬ್ಬಂದಿಗಳಾದ ಶ್ರಿಮತಿ ಪ್ರತಿಷ್ಟ ರಾಮಮೂರ್ತಿ , ಪ್ರೊ. ಶರಣ್ಯ
ರವಿಂದ್ರನಾಥನ್‌ , ಶ್ರಿಮತಿ ಪ್ರೊ. ಸುಖಿತ ಶೆಟ್ಟಿ , ಶ್ರಿಮತಿ ವಸಂತ , ಶ್ರಿಯುತ ರಮೇಸ , ಶ್ರೀಯುತ
ದಶರತನ್‌ ಉಪಸ್ಥಿತರಿದ್ದರು.



Exit mobile version