Site icon NBTV Kannada

ಮೇಲಾಧಿಕಾರಿಗಳ ಜಾತಿ ದೌರ್ಜನ್ಯಯಿಂದ ಶಿಕ್ಷಕಿಯ ವರ್ಗಾವಣೆ

ಕೋಲಾರ : ಕೆಲವು ಸಂವಿಧಾನಿಕ ಚಟುವಟಿಕೆ ಕಾರ್ಯಕ್ರಮಗಳನ್ನು ಕೈಗೊಂಡು ಶಾಲ ಮಕ್ಕಳಲ್ಲಿ ಚೈತನ್ಯ ತುಂಬುತ್ತಿದ್ದ ರಾಧ ಸಿ.ವೈ ಎಂಬ ಶಿಕ್ಷಕಿಯನ್ನು ಕೋಲಾರ ಜಿಲ್ಲೆಯಾ ಶೈಕ್ಷಣಿಕ ಕ್ಷೇತ್ರದ ಉಪ ನಿರ್ದೇಶಕರು ಹಾಗೂ ಕೆಲವು ಅಧಿಕಾರಿಗಳು ಹಲವು ಆರೋಗಳನ್ನು ಹೊರೆಸಿ , ಜಾತಿ ನಿಂದನೆಯ ಕಿರುಕುಳ ನೀಡಿ ಬೇರೊಂದು ಕಡೆ ವರ್ಗಾವಣೆ ಮಾಡಿರುವ ಸುದ್ದಿ ಇದೀಗ ಬೆಳಕಿಗೆ ಬಂದಿದೆ.

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ದೊಡ್ಡ ಶಿವಾರ ಎಂಬ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕಿ ರಾಧ ಎಂಬುವರು ಸುಮಾರು ಕಳೆದ ಮೂರು ವರ್ಷಗಳಿಂದ ಇಂಗ್ಲಿಷ್‌ ವಿಷಯದ ಭೋದಕರಾಗಿ ಸೇವೆ ಸಲ್ಲಿಸುತ್ತಿದ್ದು. ಅದೇ ಶಾಲೆಯ ಕೆಲವು ಸಹ ಶಿಕ್ಷಕರಿಂದ ಜಾತಿ ದೌರ್ಜನ್ಯದ ಕಿರುಕುಳಕ್ಕೆ ಒಳಗಾಗಿದ್ದಾರೆ ಎನ್ನಾಲಾಗಿದೆ. ಇನ್ನೂ ಈ ವಿಷಯದಲ್ಲಿ ಊರಿನ ಕೆಲವು ಮೇಲ್ವರ್ಗದ ಜನಾಂಗಿಯ ವ್ಯಕ್ತಿಗಳ ಕೈವಾಡವು ಇರುವುದಾಗಿ ಕೆಲೆವು ಪೂರ್ವ ತಯಾರಿ ಕುಮ್ಮಕ್ಕಿನ ಮೇರೆಗೆ ನನ್ನ ಮೇಲೆ ಅನೇಕ ಸುಳ್ಳು ಆರೋಪಗಳನ್ನು ಹೊರೆಸಿ ಸ್ಥಳಿಯ ಡಿಡಿಪಿಐ ಕಛೇರಿಗೆ ತಪ್ಪು ಮಾಹಿತಿಯನ್ನು ನೀಡಿ ನನ್ನನ್ನು ಶಾಲೆಯಿಂದ ವರ್ಗಾಹಿಸಿ ಬೇರೊಂದು ಶಾಲೆಗೆ ನಿಯೋಜನೆ ಮಾಡಿದ್ದಾರೆ ಎಂದು ತಮ್ಮ ನೋವನ್ನು nbtv ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.

ಈ ವಿಷಯವಾಗಿ ಕೆಲವು ಪತ್ರಿಕೆಗಳು ನನ್ನ ಮೇಲೆ ಹುಸಿ ಸುದ್ದಿಗಳನ್ನು ಪ್ರಕಟಿಸಿ. ನನ್ನ ವ್ಯಕ್ತಿತ್ವಕ್ಕೆ ಅಗೌರವ ಉಂಟು ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗು ಹಾಗೂ ಸ್ತಳಿಯ ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ” ನಾನೂ ಕೆವಲ ಪರಿಶಿಷ್ಟ ಜಾತಿಯ ಹೆಣ್ಣು ಎಂಬ ಕಾರಣಕ್ಕೆ ಈ ರೀತಿಯಾ ಕಿರುಕುಳಗಳು ನನ್ನ ಮೇಲೆ ನಡೆದಿವೆ ” ಎಂದು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದ್ದು. ಇನ್ನೂ ತಾನು ನೀಡಿರುವ ದೂರಿನ ವಿಚಾರವಾಗಿ ಯಾವುದೇ ವಿಚಾರಣೆ ಅಥವಾ ಕ್ರ,ಮಕೈಗೊಳ್ಳವುದರ ಬಗ್ಗೆ ವಿಷಾದ ವ್ಯಕ್ತ ಪಡಿಸಿದ್ದು. ಪ್ರಸ್ತುತ ಇವರ ಬೆಂಬಲಕ್ಕೆ ಇದೀಗ ಅಹಿಂದ್‌ ಸಂಘಟನೆಗಳು ಮತ್ತು ದಲಿತ ಸಂಘಟನೆಗಳು ನ್ಯಾಯಕ್ಕಾಗಿ ಹೋರಾಟದ ಹಾದಿಗೆ ಇಳಿದಿವೆ.

Exit mobile version