ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ದಿನಾಂಕ 5/01/25 ಭಾನುವಾರ ರಂದು ನಾಗಲಮಡಿಕೆ ಗ್ರಾಮದಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ಜಾತ್ರೆ ಮಹೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಂಧ್ರ ಪ್ರದೇಶದಿಂದ ಹಾಗೂ ತಾಲ್ಲೂಕಿನ ಅನೇಕ ಭಾಗಗಳಿಂದ ಆಗಮಿಸಿ ಪೂಜೆ ಸಲ್ಲಿಸಿದ್ದು. ಜಾತ್ರೆ ಮಹೋತ್ಸವವನ್ನು ಪಾವಗಡ ತಾಲ್ಲೂಕಿನ ಮಾನ್ಯ ಶಾಸಕರಾದ ಹೆಚ್ ವಿ ವೆಂಕಟೇಶ್ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉದ್ಘಟಿಸಿದ್ದಾರೆ. ಈ ವೇಳೆ ಮಾಜಿ ಸಚಿವರಾದ ವೆಂಕಟರಮಣಪ್ಪ , ಅಂಧ್ರ ಪ್ರದೇಶದ ರಾಪ್ತಾಡು ವಿಧಾನಸಭೆ ಕ್ಷೇತ್ರದ ಮಾಜಿ ಸಚಿವರು ಹಾಗೂ ಹಾಲಿ ಶಾಸಕಿ ಪರಿಟಾಲ ಸುನೀತಾ ರವರು ಕೂಡ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿ ಪಾವಗಡ ತಾಲೂಕಿನ ಭಕ್ತಾದಿಗಳಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು ಈ ಇದೇ ಸಂದರ್ಭದಲ್ಲಿ ಜಾತ್ರ ಮಹೋತ್ಸವಕ್ಕೆ ಸಹಾಯಕ ಜಿಲ್ಲಾಧಿಕಾರಿಗಳಾದ ತಿಪ್ಪೇಸ್ವಾಮಿ ರವರು. ಮಧುಗಿರಿ ವಿಭಾಗ ದಂಡಾಧಿಕಾರಿಗಳರಾದ ಗುಂಟೂರು ಶಿವಪ್ಪ ಪಾವಗಡ ತಾಲ್ಲೂಕಿನ ತಹಸಿಲ್ದಾರ್ ವರದರಾಜ್. ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಗಿರೀಶ್. ಪಾವಗಡ ಪುರಸಭೆ ಅಧ್ಯಕ್ಷರಾದ ರಾಜೇಶ್ , ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ನಗರ ಬ್ಲಾಕ್ ಅಧ್ಯಕ್ಷರು ಹಾಗೂ ಪುರಸಭ ಸದಸ್ಯರಾದ ಸುದೇಶ್ ಬಾಬು. ಸದಸ್ಯರಾದ ರವಿ, ಮತ್ತು ವಲ್ಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಚನ್ನಕೇಶವ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಪರಿಟಾಲ ನಾನಿ. ಶಂಕರ್ ರೆಡ್ಡಿ. ನಾಗೇಂದ್ರ ರಾವ್. ಇನ್ನು ಮುಂತಾದವರು ಉಪಸ್ಥಿತರಿದ್ದರು
ವರದಿಗಾರರು. ಶಿವಾನಂದ ಪಾವಗಡ ತಾಲ್ಲೂಕು ತುಮಕೂರ್ ಜಿಲ್ಲೆ

