Site icon NBTV Kannada

ರಾಜ್ಯ ಬಜೆಟ್: ಎಸ್ ಸಿ ಮತ್ತು ಎಸ್ ಟಿ ಸಮುದಾಯಗಳ ಅಭಿವೃದ್ಧಿಗಾಗಿ 42 ಸಾವಿರ ಕೋಟಿ ಅನುದಾನ ಮೀಸಲು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಂಡಿಸಿದ ರಾಜ್ಯ ಬಜೆಟ್ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳ ಅಭಿವೃದ್ಧಿಗಾಗಿ 42,018 ಕೋಟಿ ರೂ.ಗಳ ಅನುದಾನವನ್ನು ಎಸ್‌.ಸಿ.ಪಿ ಮತ್ತು ಟಿ.ಎಸ್‌.ಪಿ ಮಿಸಾಲಿಟ್ಟಿದ್ದಾಗಿ ಮತ್ತು ಈ ಕೆಳಗಿನಂತ ಯೋಜನೆಗೆ ಹಣವನ್ನು ಉಪಯೋಗಿಸುವಂತೆ ಹೇಳಿಕೆ ನೀಡಿದ್ದಾರೆ.ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಮೂಲಸೌಲಭ್ಯಕ್ಕೆ ಪ್ರಗತಿ ಕಾಲೋನಿ ಯೋಜನೆಯಡಿ 559 ಕೋಟಿ ರೂ. ಹಿಂದಿನ ವರ್ಷದ ಕಾಮಗಾರಿ ಪೂರ್ಣಗೊಳಿಸಲು 222 ಕೋಟಿ ರೂ.ದಲಿತರ ಮೇಲಿನ ದೌರ್ಜನ್ಯ ತಡೆಗಾಗಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಹೊಸ ಪೊಲೀಸ್‌‍ ಠಾಣೆಗಳ ರಚನೆ.ಎಸ್‌ ‍ಸಿ/ಎಸ್‌ ‍ಟಿ, ಓಬಿಸಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ 31 ವಸತಿ ಶಾಲೆಗಳನ್ನು ಪಿಯು ಕಾಲೇಜುಗಳನ್ನಾಗಿ ಉನ್ನತೀಕರಣಗೊಳಿಸಲು. 26 ಹೊಸ ವಸತಿ ಶಾಲೆಗಳನ್ನು ಪ್ರಾರಂಭಿಸಲು.1292 ಕೋಟಿ ರೂ. ವೆಚ್ಚದಲ್ಲಿ ಪರಿಶಿಷ್ಟ ಜಾತಿಯ 40, ಪರಿಶಿಷ್ಟ ಪಂಗಡದ 7, ಹಿಂದುಳಿದ ವರ್ಗಗಳ 14 ವಸತಿ ಶಾಲೆಗಳೂ ಸೇರಿದಂತೆ ನಿವೇಶನ ಲಭ್ಯವಿರುವ 61 ಕಡೆ ಕ್ರೈಸ್‌‍ ವಸತಿ ಶಾಲೆಗಳಿಗೆ ಕಟ್ಟಡಗಳನ್ನು ನಿರ್ಮಿಸಲು.ಇವುಗಳು ಈ ವರ್ಷದ ಬಜೆಟ್ ನ ಯೋಜನೆಗಳಾಗಿವೆ ಎಂದು ಬಜೆಟ್ ನಲ್ಲಿ ಮಂಡಿಸಿದ್ದಾರೆ.

Exit mobile version