ಬೆಂಗಳೂರು: ಮಾನವ ಹಕ್ಕುಗಳು ಮತ್ತು ಗ್ರಾಮೀಣಾಭಿರುದ್ಧಿ ಸಂಸ್ಥೆ (ನೊo.) ವತಿಯಿಂದ ಶೇಷಾದ್ರಿ ಪುರಂ ಕಚೇರಿಯಲ್ಲಿ ವಿಶ್ವ ಮಾನವ ಹಕ್ಕುಗಳ ದಿನದ ಆಚರಣೆಯನ್ನು ಹಮ್ಮಿಕೊಂಡಿದ್ದು.
ಈ ವೇಳೆ ಮಾನವ ಹಕ್ಕುಗಳು ಮತ್ತು ಗ್ರಾಮೀಣಾಭಿರುದ್ಧಿ ಸಂಸ್ಥೆಯ, ಸಂಸ್ಥಾಪಕರು ಡಾ. ಸಿ. ನಾರಾಯಣ ಸ್ವಾಮಿ ರವರು ಮಾತನಾಡುತ್ತಾ ವಿಶ್ವ ಮಾನವ ಹಕ್ಕುಗಳ ದಿನವಾದ ಇಂದು, 1948 ರಲ್ಲಿ ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಅಂಗೀಕರಿಸಿದ ಐತಿಹಾಸಿಕ ದಿನವಾಗಿದೆ. ನಾವು ಎಲ್ಲೇ ಇರಲಿ, ನಮ್ಮ ಹಿನ್ನೆಲೆ ಏನೇ ಇರಲಿ, ನಾವೆಲ್ಲರೂ ಘನತೆ, ಗೌರವ ಮತ್ತು ಸಮಾನತೆಯೊಂದಿಗೆ ಬದುಕುವ ಮೂಲಭೂತ ಹಕ್ಕುಗಳನ್ನು ನಾವು ಇಂದು ಹೊಂದಿದ್ದೇವೆ.
ಆದಕಾರಣ ಪ್ರತಿಯೊಬ್ಬರು ವ್ಯಕ್ತಿಯ ಘನತೆ, ಹಕ್ಕುಗಳನ್ನು ಗೌರವಿಸುವ ಮತ್ತು ರಕ್ಷಿಸುವ ಜವಾಬ್ದಾರಿಯನ್ನು ನಾವು ಹೊರಬೇಕು. ಅನ್ಯಾಯ ಎಲ್ಲಾದರೂ ನಡೆದಾಗ ನಮ್ಮ ಧ್ವನಿ ಎತ್ತಿ, ಸಮಾನತೆಯನ್ನು ಎತ್ತಿ ಹಿಡಿದು ನಮ್ಮ ನೆರೆಹೊರೆಯವರ ಹಕ್ಕುಗಳನ್ನು ರಕ್ಷಿಸಿ, ಜಾಗೃತಗೊಳಿಸಿ ಅವರಲ್ಲಿ ಬಾತೃತ್ವ ಮತ್ತು ಭಾವೈಕ್ಯತೆಯನ್ನು ಬೆಳಸಿಕೊಳ್ಳಬೇಕುವಂತೆ ಮಾಡಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅಹಿಂದ ಚಳುವಳಿ ಕರ್ನಾಟಕ ರಾಜ್ಯ ಸಂಚಾಲಕರಾದ ಎಸ್. ನಾಗರಾಜ್ ರವರು ಈ ಕಾರ್ಯಕ್ರಮವನ್ನು ಉದ್ದೇಶಿಸಿ, ಭಾರತದ ಇತಿಹಾಸವನ್ನು ಪುನಃ ಬರೆದ ವಿಶ್ವವಿಖ್ಯಾತ ಮಾನವ ಹಕ್ಕುಗಳ ರಕ್ಷಕರಾದ ಡಾ. ಬಿ. ಆರ್. ಅಂಬೇಡ್ಕರ್ ರವರು ಸಂವಿಧಾನ ಆರ್ಟಿಕಲ್ 14 ಮತ್ತು 15 ರ ಮೂಲಕ ಕಾನೂನಿನ ಮುಂದೆ ಎಲ್ಲರೂ ಸಮಾನರು, ಕಾನೂನಿಗಿಂತ ಯಾರೂ ಮೇಲಲ್ಲ, ಕಾನೂನಿನ ಸಮಾನ ರಕ್ಷಣೆ ಎಂಬ ನಿಯಮಗಳು ಭಾರತದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಅನ್ವಯಿಸುತ್ತದೆ ಅಲ್ಲದೇ ನಮ್ಮ ದೇಶದ ಸಂವಿದಾನವು ಜಾತಿ, ಜನಾಂಗ, ಧರ್ಮ, ಲಿಂಗ ಅಥವಾ ಹುಟ್ಟಿದ ಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ನಿರಾಕರಿಸಿದ್ದು ಇಂದು ನಾವು ಮನುಷ್ಯರಂತೆ ನೆಮ್ಮದಿಯಾಗಿ ಬದುಕಲು ಅವಕಾಶ ದಕ್ಕಿದೆ ಎಂದು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರವರನ್ನು ಸ್ಮರಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಡಾ.ಸಿ ನಾರಾಯಣ ಸ್ವಾಮಿ, ಎಸ್ ಸುಬ್ಬಣ್ಣ ನಾಗರಾಜ್, ಗೊಲ್ಲಪಲ್ಲಿ ನರಸಿಂಹ, ದೌರ್ಜನ್ಯ ನಿಯಂತ್ರಣ ಸದಸ್ಯರಾದ ಶಿವಕುಮಾರ್ ಎಸ್. ವೆಂಕಟ್ ಮುಂತಾದವರು ಪಾಲ್ಗೊಂಡಿದ್ದರು
ವರದಿ : ಸಾಕೇ ನಾರಾಯಣ.

