
ಬೆಂಗಳೂರು, ಅ.22: ನಗರದಲ್ಲಿ ನಡೆದ ಜೂಡೋ ಹಾಗೂ ಕುಸ್ತಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ ರಾಯಚೂರು ಮೂಲದ ಮಹೇಶ್ ರಾಜು. ಎಚ್ ಅವರು ಎರಡು ಚಿನ್ನದ ಪದಕವನ್ನು ಗಳಿಸಿ ಆಲ್ ಇಂಡಿಯಾ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಕೆಂಗೇರಿಯಲ್ಲಿನ ಶೇಷಾದ್ರಿಪುರಂ ಬಿಸಿನೆಸ್ ಸ್ಟಡೀಸ್ ಕಾಲೇಜಿನಲ್ಲಿ ನಡೆದ ವಿಶ್ವವಿದ್ಯಾಲಯ ಮಟ್ಟದ ಜೂಡೋ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಅದಲ್ಲದೇ ವಿಜಯನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿಶ್ವವಿದ್ಯಾಲಯ ಮಟ್ಟದ ಕುಸ್ತಿ ಪಂದ್ಯಾವಳಿಲ್ಲೂ ಸೆಣೆಸಿ ಚಿನ್ನದ ಪದಕ ಗೆಲ್ಲುವ ಮೂಲಕ ಆಲ್ ಇಂಡಿಯಾ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಈ ವೇಳೆ ತಮ್ಮ ಸಂತೋಷವನ್ನು nbtv ಯೋಡನೆ ಹಂಚಿಕೊಂಡ ಕ್ರೀಡಾ ಪಟು ಮಹೇಶ್ ರಾಜು. ಎಚ್ “ ಕಳೆದ ವರ್ಷ ಬೆಂಗಳೂರು ನಗರ ವಿಶ್ವವಿದ್ಯಾಲಯ (ಬಿ.ಸಿ.ಯು)ನಲ್ಲಿ ನಡೆದ ರಾಜ್ಯ ಮಟ್ಟದ ಜೂಡೋ ಕ್ರೀಡೆಯಲ್ಲಿ ಭಾಗಿಯಾಗಿ ಚಿನ್ನದ ಪದಕ ಪಡೆಯುವ ಮೂಲಕ ಗೆಲುವು ಸಾಧಿಸಿ, ಸೌಥ್ ಜೂನ್ ಮಟ್ಟದ ಮಧ್ಯ ಪ್ರದೇಶ ಕ್ರೀಡಾ ಕೂಟದಲ್ಲಿ ಬೆಂಗಳೂರಿನ ಪ್ರತಿನಿಧಿಯಾಗಿ ಸ್ಪರ್ಧಿಸಿದ್ದೆ. ಇನ್ನು ಕ್ರೀಡಾ ಕ್ಷೇತ್ರದಲ್ಲಿ ಸಾಧಿಸುವ ಅಂಬಲವಿದೆ “ ಎಂದು ಅಭಿಪ್ರಯ ವ್ಯಕ್ತಪಡಿಸಿದರು.

