Site icon NBTV Kannada

ಬೆಂಗಳೂರು ವಕೀಲರ ಸಂಘ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿದ 41 ಸ್ಥಾನಗಳಿಗೆ ಆಯ್ಕೆ

ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ವಕೀಲರ ಸಂಘದ (ಎಎಬಿ) ಚುನಾವಣೆಯು ಭಾನುವಾರ ಫೆಬ್ರವರಿ 16 ನಡೆದಿದ್ದು ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಸೇರಿ 38 ಹುದ್ದೆಗಳಿಗೆ 180 ಅಭ್ಯರ್ಥಿಗಳು  ಸ್ಪರ್ಧಿಸಿದ್ದು. ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ರವರೆಗೆ ಸಿಟಿ ಸಿವಿಲ್‌ ಕೋರ್ಟ್‌ನ ಆವರಣದಲ್ಲಿ ನಡೆದ ಮತದಾನದಲ್ಲಿ ಸುಮಾರು 21 ಸಾವಿರ ವಕೀಲರ ಚಲಾಯಿಸಲಾಸಿದ್ದು. ರಾತ್ರಿ ೮ ಗಂಟೆ ಸುಮಾರಿಗೆ ಪ್ರಕಟವಾದ ಫಲಿತಾಂಶದಲ್ಲಿ. ಅಧ್ಯಕ್ಷ ಸ್ಥಾನಕ್ಕೆ 6 ಸ್ಪರ್ಧಿಗಳ ಪೈಕಿ ವಕೀಲ ವಿವೇಕ್‌ ಸುಬ್ಬಾರೆಡ್ಡಿ ಆಯ್ಕೆಯಾಗಿದ್ದು, ಉಪಾಧ್ಯಕ್ಷ ಸ್ಥಾನದ 6 ಸ್ಪರ್ಧಿಗಳಲ್ಲಿ ಸಿ ಎಸ್‌ ಗಿರೀಶ್‌ ಕುಮಾರ್‌ , ಪ್ರಧಾನ ಕಾರ್ಯದರ್ಶಿ ಹುದ್ದೆಗೆ 5 ರ ಪೈಕೆ ಎಚ್‌ ವಿ ಪ್ರವೀಣ್‌ ಗೌಡ  ಹಾಗೂ ಖಜಾಂಚಿ ಸ್ಥಾನದ ಮಹಿಳಾ ಮೀಸಲಾತಿಯಲ್ಲಿ 16 ಮಂದಿ ಸ್ಪರ್ಧಿಸಿಗಳಿಂದ ಶ್ವೇತಾ ರವಿಶಂಕರ್‌ ಜಯಗಳಿಸಿದ್ದಾರೆ. ಇನ್ನು ಹೈಕೋರ್ಟ್‌, ಸಿಟಿ ಸಿವಿಲ್‌ ಕೋರ್ಟ್‌, ಮೆಯೊ ಹಾಲ್‌ ಕೋರ್ಟ್‌ ಮತ್ತು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಈ ನಾಲ್ಕು ಘಟಕಗಳಿಂದ ಆಡಳಿತ ಮಂಡಳಿಗೆ ಒಟ್ಟು 38 ಮಂದಿ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಆಯ್ಕೆಯಾಗಿದ್ದು.

ಈ ಕೇಳಗಿನಂತೆ:

> ಉಚ್ಚ ನ್ಯಾಯಾಲಯ (ಹೈಕೋರ್ಟ್‌) ಘಟಕ: ಎ.ಹಿರೇಮಠ, ಬಾಲಕೃಷ್ಣ ಚಾಮರಾಜ, ಚಂದ್ರಕಾಂತ ಪಾಟೀಲ್‌, ಅರವಿಂದ್‌ ಕಾಮತ್‌, ರಾಜು ಎಸ್‌ ಮತ್ತು ಮಹಿಳಾ ವಿಭಾಗದಲ್ಲಿ ಸಂಧ್ಯಾ, ದೀಕ್ಷಾ ಮತ್ತು ಹರಿಣಿ.  

> ಮೆಯೊ ಹಾಲ್‌ ಕೋರ್ಟ್‌ ಘಟಕ :  ಕೆ ಮೋಹನ್‌, ಎ ಪಿ ನಟೇಶ್‌, ಹಿತೇಶ್‌ ಕುಮಾರ್‌, ಡಿ ಗುಣಶೇಖರ್‌, ಭಕ್ತವತ್ಸಲ ಮತ್ತು ಮಹಿಳಾ ವಿಭಾಗದಿಂದ ಉದಿತಾ ರಮೇಶ್‌ ಮತ್ತು ಕೆ ವಿ ರವಿಲಾ.

>ಮ್ಯಾಜಿಸ್ಟ್ರೇಟ್‌ ಕೋರ್ಟ್‌: ಪ್ರಸನ್ನ ಕೆಂಪೇಗೌಡ, ಕೆ ಸಿ ಸತೀಶ್‌, ಅನಿಲ್‌ ಕುಮಾರ್‌, ಪ್ರಭು, ಶಿವಶಂಕರ್‌ ಮತ್ತು ಮಹಿಳಾ ವಿಭಾಗದಲ್ಲಿ ಅಂಜಲಿ ಮತ್ತು ಸುಜಾತಾ.

>ಸಿಟಿ ಸಿವಿಲ್‌ ಕೋರ್ಟ್‌: ಕೆ ಎನ್‌ ಅಂಬರೀಶ್‌, ಶಶಿಕುಮಾರ್‌ ಗೌಡ, ಅಂಜನ್‌ಕುಮಾರ್‌ ಗೌಡ, ತೇಜಸ್ವಿ ಗೌಡ, ಮುನಿರಾಜು, ಪುಟ್ಟರಾಜು, ಕಾಂತರಾಜು, ಕುಮಾರ್‌ ಆರ್‌.ಎಸ್‌. ಗೌಡ, ಚನ್ನಪ್ಪ ಗೌಡ, ರಾಕೇಶ್‌ ಎನ್.ಎಸ್, ಜಿ ನಾಗರಾಜ ಮತ್ತು ಮಹಿಳಾ ವಿಭಾಗದಿಂದ ಎಂ ಆಶಾ, ವೀಣಾ ರಾವ್‌, ಜೆ ಮಮತಾ ಮತ್ತು ಸಿ ಶಾರದಾ.

ಚುನಾಯಿತರಾಗಿ ಸಮತಿಯ ಸದಸ್ಯ ಸ್ಥಾನವನ್ನು ತಮ್ಮ ಪಾಲಿನದಾಗಿಸಿಕೊಂಡಿದ್ದಾರೆ.

Exit mobile version