ಬೆಂಗಳೂರು : ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯದ 2025-26ನೇ ಸಾಲಿನ ಆಯವ್ಯಯದ ಬಜೆಟ್ ಗೆ ಸಂಬಂಧಪಟ್ಟಂತೆ ಸಭೆ ನಡೆಸಲಾಗಿದ್ದು. ಅನೇಕ ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಸಭೆಯಲ್ಲಿ ಹಾಜರಿದ್ದರು. ಈ ವೇಳೆ ಮುಖ್ಯಮಂತ್ರಿಗಳಿಗೆ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟದ ರಾಜ್ಯಾ ಪ್ರಧಾನ ಸಂಚಾಲಕರು ಮತ್ತು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ( MRHS ) ರಾಜ್ಯ ಕಾರ್ಯ ಅಧ್ಯಕ್ಷರಾದ ಕೇಶವಮೂರ್ತಿಯವರು ಕಾಂಗ್ರೇಸ್ ಸರ್ಕಾರದ ಒಳ ಮೀಸಲಾತಿ ವಿಳಂಬ ಮಾತನಾಡುತ್ತಾ. ಮಾದಿಗ ಸಮುದಾಯದ ಪಾಲಿಗೆ ಸಮಾಜ ಕಲ್ಯಾಣ ಇಲಾಖೆ 15 ವರ್ಷಗಳಿಂದ ಚಿರನಿದ್ರೆಗೆ ಜಾರಿದಂತೆ ವರ್ತಿಸುತ್ತಿದೆ. ಕೆಲವು ಯೋಜನೆಗಳಿಂದ ಇಲಾಖೆಯು ಸಮುದಾಯವನ್ನು ದೂರ ಇಟ್ಟಿದೆ. ಮುಂಬರುವ 2025-26ರ ಬಜೆಟ್ ನಲ್ಲಿ ಜನಸಂಖ್ಯಾ ಅವರು ಎಸ್.ಸಿ.ಪಿ-ಟಿ.ಎಸ್.ಪಿ ಹಣ ಹಂಚಿಕೆ ಮಾಡಿ ಒಳ ಮೀಸಲಾತಿಯ ಅನುಸಾರ ಸದುಪಯೋಗಿಸಬೆಕು ಎಂದು ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮೂಲಕ ಒತ್ತಾಯ ಮಾಡಿದ್ದು. ಸಭೆಯಲ್ಲಿ ಅತಿ ಹೆಚ್ಚು ಎಸ್.ಸಿ.ಪಿ-ಟಿ.ಎಸ್.ಪಿ ಹಣದ ದುರ್ಬಳಕೆಯೆ ಚರ್ಚೆಯಾಗಿದ್ದು ಮುಂದಿನ ದಿನಗಳಲ್ಲಿ ಸರ್ಕಾರವು ಇಂತಹ ನಿರ್ದಾರಗಳನ್ನು ತೆಗೆದುಕೊಳ್ಳದಂತೆ ಮುಖಂಡರು ಸಲಹೆ ನೀಡಿದ್ದಾರೆ.
ಬಜೆಟ್ ಪುರ್ವಭಾವಿ ಸಭೆಯಲ್ಲಿ ಎಸ್ ಸಿ ಪಿ – ಟಿ ಎಸ್ ಪಿ ಹಣದ ದುರ್ಬಳಕೆ ಪ್ರಶ್ನಿಸಿದ ಸಂಘಟನೆಗಳು

