ಬೆಂಗಳೂರು : ನಗರದಲ್ಲಿ ರಾಜ್ಯ ಮಾತಂಗ ಜಾಗೃತಿ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಚರ್ಚಾ ಕೂಟದಲ್ಲಿ, “ಪ್ರಸ್ತುತ ಕಾಲಕ್ಕೆ ನಾವೆಲ್ಲಾ ಒತ್ತಡದಿಂದಲೇ ಸಾಗುತ್ತಿದ್ದೇವೆ, ನಮ್ಮ ವೈಯಕ್ತಿಕ ಬದುಕಿನ ಗೊಂದಗಳ ನಡುವೆ ಮತ್ತು ಸಮಾಜದ ಅನೇಕ ಏರುಪೇರುಗಳ ನಡುವೆ ನಮ್ಮದೇ ಸಮುದಾಯದ ಬೆಳೆವಣಿಗೆಯನ್ನು ಮರೆತ್ತಿದ್ದೇವೆ ಅದರಿಂದ ಸಮುದಾಯವನ್ನು ಪ್ರೀತಿಯಿಂದ ಕಟ್ಟಲು ನಾವುಗಳು ಪ್ರಯತ್ನಿಸಬೇಕು. ಸಮಾಜದ ಮನಸ್ಸುಗಳು ಒಗ್ಗೂಡಿಸಲು ನಾವು ನಮಗಿರುವ ಅಲ್ಪವಿರಾಮದ
ಸಮಯ, ಜ್ಞಾನವನ್ನು ಸಮುದಾಯದಲ್ಲಿ ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮತ್ತು ಸಮುದಾಯಲ್ಲಿ ನೊಂವುಂಡವರ ಸೇವೆ ನಾವು ಮುಂದಾಗ ಬೇಕಿದೆ” ಎಂದು ರಾಜ್ಯ ಮಾತಂಗ ಜಾಗೃತಿ ಸಮಿತಿ ವತಿಯ ಸಂಸ್ಥಾಪಕರು ಮತ್ತು ಗೌರವಾಧ್ಯಕ್ಷರು . ಆರ್ ಲೋಕೇಶ್ ತಮ್ಮ ಆಶಯವನ್ನು ವ್ಯಕ್ತ ಪಡಿಸಿದರು.
ಈ ವೇಳೆ ಕೋಡಿಹಳ್ಳಿ ಮಠದ ಪೂಜ್ಯಾನಿಯರು ಶ್ರೀ ಷಡಕ್ಷರಮುನಿ ಸ್ವಾಮಿಗಳನ್ನು ಪ್ರೀತಿಯ ಗೌರವದೊಂದಿಗೆ ಪದಾಧಿಕಾರಿಗಳು ಎಲ್ಲರೂ ಸೇರಿ ಗೌರವದಿಂದ ಸನ್ಮಾನಿಸಿದರು, ಈ ಸಂದರ್ಭದಲ್ಲಿ
ರಾಜ್ಯ ಮಾತoಗ ಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷರಾದ, ಶ್ರೀ ಗುರುದತ್ ಉಪಾಧ್ಯಕ್ಷರುಗಳಾದ ಶ್ರೀ ಬಾಲಪ್ಪ, ಕರಗಯ್ಯ,ಪ್ರಧಾನ ಕಾರ್ಯದರ್ಶಿ ಶ್ರೀ ವೀರಾಂಜನಪ್ಪ, ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ವೆಂಕಟೇಶ್, ಖಜಾಂಚಿಯಾದ ಶ್ರೀ ಮುನಿರಾಜು,ಶ್ರೀ ದೇವರಾಜ್,ಶ್ರೀ ಜಗದೀಶ್, ಶ್ರೀ ಜಯರಾಮ್, ಶ್ರೀ ಲಕ್ಷ್ಮಿ ರಂಗಯ್ಯ, ಶ್ರೀ ಗೋವಿಂದರಾಜು, ಶ್ರೀ ತುಳಸಿ ರಾಮ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ : ಸಾಕೆ ನಾರಾಯಣ

