Breaking
Fri. Jan 23rd, 2026

ನಟ ದರ್ಶನ್‌ ಜಾಮೀನಿಗೆ ಸುಪ್ರೀಂ ಅಕ್ಷೇಪಣೆ

ನವದೆಹಲಿ.ಜು.24: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತು ಇತರ ಆರೋಪಿಗಳಿಗೆ ಜಾಮೀನು ನೀಡಿದ ರೀತಿಗೆ ಕರ್ನಾಟಕ ಹೈಕೋರ್ಟ್‌ವನ್ನು ಇದೀಗಾ ಸುಪ್ರೀಂಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ , ಸಾಕ್ಷ್ಯಾಧಾರಗಳಿಗಿಂತ ಹೆಚ್ಚು ವಿಮರ್ಶೆ ಇಲ್ಲದೆ ಜಾಮೀನು ನೀಡಿರುವ ಹೈಕೋರ್ಟ್ ತೀರ್ಪು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಮತ್ತು ಜೆ. ಬಿ.ಪರ್ದಿವಾಲಾ ರವರಿದ್ದ ದ್ವಿಸದಸ್ಯಪೀಠವು ಈ ಹಿಂದೆ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಕಠಿಣ ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿತು.ನ್ಯಾಯಾಂಗ ವಿವೇಚನೆಯನ್ನು ನ್ಯಾಯಯುತವಾಗಿ ಅನ್ವಯಿಸಲಾಗಿದೆಯೇ? ಎಂದು ಪ್ರಶ್ನಿಸಿದ ಪೀಠವು, ಹೈಕೋರ್ಟ್‌ ಎಲ್ಲಾ ಜಾಮೀನು ಅರ್ಜಿಗಳಲ್ಲಿ ಒಂದೇ ರೀತಿಯ ಆದೇಶಗಳನ್ನು ನಿರ್ದೇಶಿಸುತ್ತದೆಯೇ? ಎಂದು ಪ್ರಶ್ನೆ ಮಾಡಿತು.ಸುಪ್ರೀಂ ಕೋರ್ಟ್‌ನಲ್ಲಿ 1.40 ನಿಮಿಷಗಳ ಕಾಲ ನಡೆದ ವಿಚಾರಣೆಯಲ್ಲಿ, ಪೀಠವು ಪ್ರಕರಣದ ಸಾಕ್ಷ್ಯಾಧಾರಗಳು, ಎಫ್‌ಎಸ್‌ಎಲ್ ವರದಿ, ಸ್ಥಳ ಪರಿಶೀಲನೆ ವರದಿಗಳು ಎಲ್ಲವೂ ಸ್ಪಷ್ಟವಾಗಿರುವಾಗ, ಹೈಕೋರ್ಟ್ ಯಾಕೆ ಇಂತಹ ತೀರ್ಪು ನೀಡಿತು ಎಂಬ ಪ್ರಶ್ನೆ ಎತ್ತಿದೆ. ಅನೇಕ ಕರೆ ವಿವರಗಳು, ಪ್ರಮುಖ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು, ಹಾಗೂ ಇತರ ಮೌಲ್ಯಮಾಪನಗಳ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟತೆ ಕೇಳಿ ತನಿಖಾ ವರದಿಗಳನ್ನು ಮತ್ತೆ ಪರಿಶೀಲಿಸಲು ಸೂಚಿಸಲಾಗಿದೆ.ಈ ವಿಚಾರಣೆಯ ನಂತರ, ದರ್ಶನ್ ಸೇರಿದಂತೆ ಜಾಮೀನು ಪಡೆದ ಎಲ್ಲ ಏಳು ಆರೋಪಿಗಳ ಭವಿಷ್ಯ ಪ್ರಶ್ನಾರ್ಹವಾಗಿದೆ. ಸುಪ್ರೀಂ ಕೋರ್ಟ್ ಈ ಸಂಬಂಧ ಒಂದು ವಾರದ ಸಮಯ ನೀಡಿದ್ದು, ಅದನಂತರ ಅಂತಿಮ ಆದೇಶ ನೀಡಲಾಗುತ್ತಿದ್ದು. ಈ ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯಗಳು ಇರುವುದರಿಂದ, ಸುಪ್ರೀಂ ಕೋರ್ಟ್ ಇಡೀ ವಿಚಾರಣೆಯ ಮರು ಪರಿಶೀಲನೆ ನಡೆಸುತ್ತಿದೆ. ಹೀಗಾಗಿ, ದರ್ಶನ್ ವಿರುದ್ಧ ತೀವ್ರವಾದ ತೀರ್ಪು ಸಾಧ್ಯತೆ ಇದೆ ಎಂಬ ಅಂದಾಜಿದೆ .

Related Post

Leave a Reply

Your email address will not be published. Required fields are marked *