Breaking
Tue. Jan 27th, 2026

ಧರ್ಮಸ್ಥಳ ಪ್ರಕರಣ ಸದ್ಯಕ್ಕೆ ಎಸ್ಐಟಿ ಸ್ಥಾಪನೆ ಸಾಧ್ಯವಿಲ್ಲ : ಸಿಎಂ

ಮೈಸೂರು : ಧರ್ಮಸ್ಥಳದಲ್ಲಿ ಹಲವು ದಿನಗಳಿಂದ ನಡೆದಿದೆ ಎನ್ನಲಾದ ಮಹಿಳೆಯರ ಮೇಲಿನ ದೌರ್ಜನ್ಯ, ಅಸ್ವಾಭಾವಿಕ ಸಾವು / ಕೊಲೆ, ಅತ್ಯಾಚಾರ ಮತ್ತು ನಾಪತ್ತೆ ಪ್ರಕರಣಗಳ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್.ಐ.ಟಿ) ರಚಿಸುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಹಿರಿಯ ವಕೀಲರಾದ ಎಸ್.‌ ಬಾಲನ್‌ ಮತ್ತು ಸಿ.ಎಸ್.‌ ದ್ವಾರಕನಾಥ್‌ ಅವರ ನೇತೃತ್ವದ ವಕೀಲರ ನಿಯೋಗ ಈ ಕುರಿತು ಮನವಿ ಮಾಡಿತ್ತು. ಪ್ರಸ್ತುತ ಮೈಸೂರಿನಲ್ಲಿ ಇದೇ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಧರ್ಮಸ್ಥಳದಲ್ಲಿ ಅಪರಿಚಿತ ಶವಗಳ ಪತ್ತೆ ಮತ್ತು ನಾಪತ್ತೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್‌ಐಟಿ ರಚನೆ ಮಾಡುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, “ಯಾರೋ ಹೇಳಿದರು ಎಂದ ಮಾತ್ರಕ್ಕೆ ದಿಢೀರನೆ ಎಸ್‌ಐಟಿ ಮಾಡಲು ಆಗುವುದಿಲ್ಲ. ಎತ್ತು ಮರಿ ಹಾಕಿತ್ತು ಅಂಥ ಕೊಟ್ಟಿಗೆ ರೆಡಿ ಮಾಡಲು ಸಾಧ್ಯನಾ ಎನ್ನುತ್ತಾ, ಸದ್ಯಕ್ಕೆ ಈ ವಿಚಾರವಾಗಿ ಎಸ್‌ಐಟಿ ರಚನೆ ಮಾಡಲಾಗದು ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.

ತಲೆಬುರುಡೆ ಪತ್ತೆ ಮತ್ತು ನಾಪತ್ತೆ ಪ್ರಕರಣಗಳ ಹಿನ್ನೆಲೆ

ವ್ಯಕ್ತಿ ಓರ್ವನು “ನಾನೂ ಧರ್ಮಸ್ಥಳದಲ್ಲಿ ಎಷ್ಟೋ ಶವಗಳನ್ನು ಹುತೂ ಹಾಕ್ಕಿದ್ದೇನೆ” ಎಂಬ ಹೇಳಿಕೆಯು, ಜುಲೈ 12ರಂದು ಹಲವಾರು ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳ ಪ್ರಕಾರ, ಒಂದು ತಲೆಬುರುಡೆ ದೊರೆತಿದ್ದು, ಇದೇ ವೇಳೆ ವೈದ್ಯಕೀಯ ವಿದ್ಯಾರ್ಥಿನಿ ನಾಪತ್ತೆಯ ಬಗ್ಗೆ ಕುಟುಂಬದವರ ಹೇಳಿಕೆಯೂ ಗಮನಾರ್ಹವಾಗಿದೆ. ಈ ವಿಚಾರಗಳು ಸಾಮಾಜಿಕ ವಲಯದಲ್ಲಿ ಬಾರಿ ಸಂಚಲನ ಮೂಡಿಸುವ ಮೂಲಕ  ಎಲ್ಲರಲ್ಲೂ ಸಾಮಾಜಿಕ ನ್ಯಾಯದ ಎಂದು ಪ್ರಶ್ನೆಯಾಗಿ ಉಳಿದಿದ್ದನ್ನು ಗಮನಿಸಿದ  ಮಹಿಳಾ ಆಯೋಗವು ಈ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸ್ ಠಾಣೆಗಳು ಈ ಹಿಂದಿನ ನಾಪತ್ತೆ ಮತ್ತು ಸಾವು ಪ್ರಕರಣಗಳಿಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂಬ ಗಂಭೀರ ಆರೋಪಗಳನ್ನೂ ಗುರುತಿಸಿತು. ಈ ಸಂಬಂಧ ಕಳೆದ 20 ವರ್ಷಗಳಲ್ಲಿ ಧರ್ಮಸ್ಥಳ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವರದಿಯಾಗಿರುವ ನಾಪತ್ತೆಯಾದ ಮಹಿಳೆಯರು, ವಿದ್ಯಾರ್ಥಿನಿಯರು, ಅಸ್ವಾಭಾವಿಕ ಸಾವು, ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳ ಸಮಗ್ರ ತನಿಖೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಎಸ್​ಐಟಿ ರಚನೆಯ ಅಗತ್ಯವಿದೆ ಎಂದು ಭಾವಿಸಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಮುಖ್ಯಮಂತ್ರಿಗಳನ್ನು ಕೋರಿದ್ದರು.

Related Post

Leave a Reply

Your email address will not be published. Required fields are marked *