ಮಂಗಳೂರು, ಜುಲೈ 26 : ದೇಶದಲ್ಲೇಡೆ ಸಂಚಲನ ಮೂಡಿಸಿದ ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಹೆಣಗಳನ್ನು ಹೂತಿಟ್ಟ ಪ್ರಕರಣದ ಅನಾಮಧೇಯ ವ್ಯಕ್ತಿಯನ್ನು ಇಂದು ಎಸ್ಐಟಿ ತಂಡದ ಅಧಿಕಾರಿಗಳು ಮಂಗಳೂರಿನಲ್ಲಿ ಸುದೀರ್ಘ 8 ಗಂಟೆಗೂ ಅಧಿಕ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ.ಧರ್ಮಸ್ಥಳ ಕೇಸ್ ನಲ್ಲಿ ಮಹತ್ವದ ಹೆಜ್ಜೆಯಿಟ್ಟ ಎಸ್ಐಟಿ ನಗರದ ಮಲ್ಲಿಕಟ್ಟೆಯ ಐಬಿಯಲ್ಲಿ ಎಸ್ಐಟಿ ತಂಡದ ಡಿಐಜಿ ಎಂ.ಎನ್ ಅನುಚೇತ್ ಮತ್ತು ಎಸ್ಪಿ ಜಿತೇಂದ್ರ ದಯಾಮ ಅವರು ವಿಚಾರಣೆ ನಡೆಸಿದ್ದು. ಶನಿವಾರ ಬೆಳಗ್ಗೆ 10.30ರ ವೇಳೆಗೆ ತನ್ನ ವಕೀಲರ ಜೊತೆಗೆ ಟ್ಯಾಕ್ಸಿ ಕಾರಿನಲ್ಲಿ ಮುಸುಕು ಹಾಕ್ಕೊಂಡಿದ್ದ ವ್ಯಕ್ತಿ ವಿಚಾರಣೆಗೆ ಹಾಜರಾಗಿದ್ದು. ಸಂಜೆ 7.30ರ ತನಕ ಮುಸುಕುಧಾರಿ ವ್ಯಕ್ತಿ ಮತ್ತು ಆತನ ಜೊತೆಗಿದ್ದ ವಕೀಲರು ವಿಚಾರಣೆ ಮುಗಿಸಿ ಹಿಂದಕ್ಕೆ ತೆರಳಿದ್ದಾರೆ. ಅಂದಾಜು ಸುದೀರ್ಘ 8ಗಂಟೆಗೂ ಅಧಿಕ ಕಾಲ ವಿಚಾರಣೆ ನಡೆಸಿದ್ದು, ಹೆಣಗಳನ್ನು ಹೂತು ಹಾಕಿದ್ದು, ಅದಕ್ಕೆ ಕಾರಣವಾದ ಅಂಶಗಳು, ಯಾವಾಗೆಲ್ಲ ಹೆಣಗಳನ್ನು ಹೂಳಲಾಗಿತ್ತು, ಅದು ಯಾರದ್ದಿತ್ತು ಇತ್ಯಾದಿ ವಿಚಾರಗಳ ಕುರಿತು ಮಾಹಿತಿ ನೀಡಿದ ವ್ಯಕ್ತಿ ತಾನೂ ಎಲ್ಲೆಲ್ಲಿ ಶವ ಹೂತಿಟ್ಟಿದ್ದೇನೆ ಎನ್ನುವುದನ್ನು ಬಹಿರಂಗಪಡಿಸಲು ಸಿದ್ದನಿದ್ದೇನೆ ಎಂದು ಹೇಳಿದ್ದು. ಹೂತಿಟ್ಟ ಶವಗಳ ಮಹಜರಿಗೂ ಮುನ್ನ ಮಹತ್ವದ ತನಿಖೆ ನಡೆಯುವ ಸಾಧ್ಯತೆಯಿದೆ.

