ಬೆಂಗಳೂರು : ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ವತಿಯಿಂದ ನೀಡಲಾಗುವ ” ದಿ ಫೀಲ್ಡ್ ಆಫ್ ಸೋಶಿಯಲ್ ಸರ್ವಿಸ್ ” ಪ್ರಶಸ್ತಿಗೆ ಶ್ರೀಮತಿ ಪೂರ್ಣಿಮಾ (ಪ್ರಿಯಾ )ರವರ ಭಾನರಾಗಿದ್ದಾರೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಕರ್ನಾಟಕ ಸ್ವಾಭಿಮಾನಿ ಸಂಘಟನೆಗಳ ಒಕ್ಕೂಟದ (ರಿ) ಮಹಿಳಾ ಘಟಕದ ರಾಜ್ಯಾಧ್ಯಕ್ಷರಾಗಿ ಸಮಾಜ ಸೇವೆಯ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಪೂರ್ಣಿಮಾ ರವರು ಅನೇಕ ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡಿದ್ದು ಈ ಗೌರವ ಸಂದಲೂ ಸಾಧ್ಯವಾಗಿದೆ ಎನ್ನಲಾಗಿದ್ದು .ಈ ಹೆಮ್ಮೆಯ ಕ್ಷಣಕ್ಕೆ ಕರ್ನಾಟಕ ಸ್ವಾಭಿಮಾನಿ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಎ.ಸಿ ರಾಜು ಸಂಘದ ಪದಾಧಿಕಾರಿಗಳ ಸಹಕಾರ ಮತ್ತು ಬೆಂಬಲವೇ ಕಾರಣ ಎಂದು ಪೂರ್ಣಿಮಾ ರವರು ಹೇಳಿಕೆ ನೀಡಿದ್ದು. ಈ ಪ್ರಶಸ್ತಿ ನೀಡಿದ ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಸಂಸ್ಥೆಗೆ ತಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.
‘ ದಿ ಫೀಲ್ಡ್ ಆಫ್ ಸೋಶಿಯಲ್ ಸರ್ವಿಸ್ ‘ ಪ್ರಶಸ್ತಿಗೆ ಪೂರ್ಣಿಮಾ ಆಯ್ಕೆ.

