Site icon NBTV Kannada

ದಾರಿ ಬಿಡಲು ಕೇಳಿದ ಯುವಕನ ಮೇಲೆ ಜಾತಿ ನಿಂದನೆ; ಮರಣಾಂತಿಕ ಹಲ್ಲೆ

ಪಾವಗಡ: ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಅರಸೀಕೆರೆ ಪೊಲೀಸ್‌ ಠಾಣ ವ್ಯಾಪ್ತಿಯಲ್ಲಿ ಈಚರ್‌ ಮತ್ತು ಕೆ.ಪಿ.ಟಿ.ಸಿ.ಎಲ್‌ ಸಿಬ್ಬಂದಿ ವಾಹನದ ನಡುವೆ ದಾರಿ ಬಿಡುವಂತೆ ನಡೆದ ಮಾತಿನ ಚಕಮಕಿಯಲ್ಲಿ ಜಾತಿ ನಿಂದನೆಯ ಅವಾಚ್ಯ ಬೈಗುಳಗಳು ಮತ್ತು ಮಾರಣಾಂತಿಕ ಹಲ್ಲೆ ನಡೆದ ಘಟನೆ ನಡಿದಿದೆ.

ಬಾದಿತ ವ್ಯಕ್ತಿಯು ಯುವರಾಜ್‌ (೩೦) ತಾಲ್ಲೂಕಿನ ಅರಸೀಕೆರೆ ಗ್ರಾಮದ ವಾಸಿವಯಾಗಿದ್ದು ಈ ಘಟನೆಯ ಸಂಬಂಧ ದಿನಾಂಕ; ೧೩/೦೯/೨೦೨೫ ರಂದು ತಿಳಿಸಿದ ಪೊಲೀಸ್‌ ದೂರಿನ ಅನ್ವಯ ತಾನೂ ಕುರಿಗೊಬ್ಬರದ ಲೋಡ್ ವಾಹನವನ್ನು‌ ತೆಗೆದುಕೊಂಡು ಹೋಗುತ್ತಿರುವ ವೇಳೆ ಆದೇ ದಾರಿಲ್ಲಿ ಸಾಗಿ ಬರುತ್ತಿದ್ದ ವಾಹನ KA 52 N 4401 ಬೆಸ್ಕಾಂ (ಕೆ.ಪಿ.ಟಿ.ಸಿ.ಎಲ್‌) ಸಿಬ್ಬಂದಿ ನಾಗರಾಜ್‌ ಮತ್ತು ಸಾಗರ್‌ ರವರ ನಡುವೆ ಎರಡು ವಾಹನಗಳ ನಿರ್ಗಮನಕ್ಕೆ ದಾರಿ ಮಾಡಿಕೊಳ್ಳುವ ವಿಚಾರದಲ್ಲಿ ಮಾತಿನ ಚಕಮಕಿಯಿಂದ ಪ್ರಾರಂಭವಾದ ಘರ್ಷಣೆಯು ನಾಗರಾಜ್‌ ಮತ್ತು ಸಾಗರ್‌ ಜೊತೆಗೂಡಿದ ಮೂವರು ಸ್ನೇತರು ಸೇರಿ ಬಾದಿತ ಯುವರಾಜ್‌ ಮೇಲೆ ಜಾತಿನಿಂದನೆಯ ಅವಾಚ್ಯ ಶಬ್ಧಗಳಿಂದ ಬಳಿಸಿ ಕುತ್ತಿಗೆ ಹಿಡಿದು ತಳಿಸಿ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದ್ದು. ಪ್ರಕರಣ ದಾಖಲಾದ ಇವರೆಗೂ ಯಾವುದೇ ರೀತಿಯ ಬೆಳವಣಿಗೆಗಳು ಕಂಡುಬಂದಿರುವುದಿಲ್ಲವೆಂದು ಸ್ಥಳಿಯರು ಮಾಧ್ಯಮಗಳಿಗೆ ತಿಳಿಸಿದ್ದು. ಈ ಘಟನೆಯು ಗೃಹ ಮಂತ್ರಿ ಪರಮೇಶ್ವರ್‌ ಅವರ ತವರು ಜಿಲ್ಲೆಯಲ್ಲಿ ನಡೆದ ಇತ್ತೀಚಿನ ಜಾತಿ ದೌರ್ಜನ್ಯದ ಮೂರನೆ ಪ್ರಕರಣವಾಗಿದೆ.

Exit mobile version