
ರಾಂಪುರ: ಮೊಳಕಾಲ್ಮೂರು ತಾಲೂಕಿನ ಗಡಿ ಗ್ರಾಮವಾದ ಶ್ರೀ ಜಂಬಣ್ಣ ತಾತನ ರಥೋತ್ಸವನ್ನು ಸುಮಾರು 26 ವರ್ಷಗಳಿಂದ ಅದ್ದೂರಿಯಾಗಿ ನಡೆಸಿಕೊಂಡು ಬಂದಿದ್ದು ಈ ವರ್ಷದ ಶಿವರಾತ್ರಿಯಂದು ರಥೋತ್ಸವಕ್ಕೆ ತವರು ಮನೆಗಳಿಲ್ಲದ ಮಹಿಳೆಯರಿಗೆ ಉಡಿಯಕ್ಕಿ ತುಂಬುವ ವಿಶೇಷ ಕಾರ್ಯವನ್ನು ಮಠದ ಪೂಜ್ಯನೀಯ ಶ್ರೀ ವೆಂಕಟೇಶ ತಾತನವರು ನೇತೃತ್ವದಲ್ಲಿ ನಡೆಸಿಕೊಡಲಾಗಿದ್ದು.
ಈ ಕಾರ್ಯಕ್ರಮವನ್ನು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಶ್ರೀರಾಮ ರೆಡ್ಡಿ ರವರು ಉದ್ಘಾಟಿಸಿ ಮಾತನಾಡುತ್ತಾ, ಹಿಂದೂ ಪರಂಪರೆಯಲ್ಲಿ ತಾಯಂದಿರಿಗೆ ಉಡಿತುಂಬುವ ಕಾರ್ಯ ಬಹಳ ಶ್ರೇಷ್ಠವಾದದ್ದು. ಅಣ್ಣ ತಮ್ಮದರೂ ಇಲ್ಲದ ಹೆಣ್ಣು ಮಕ್ಕಳಿಗೆ ತವರು ಮನೆಯಾಗಿ ಶ್ರೀ ಜಂಬಣ್ಣ ತಾತ ಮಠದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ 410 ತಾಯಂದಿರಿಗೆ ಉಡಿ ತುಂಬ ಕಾರ್ಯ ನೆರವೇರಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯನೀಯ ಶ್ರೀ ವೆಂಕಟೇಶ ತಾತನವರು ಮಾತನಾಡಿ. ಸುಮಾರು 26 ವರ್ಷಗಳ ಹಿಂದೆ , ಪ್ರಥಮವಾಗಿ 5 ಜನ ಹೆಣ್ಣು ಮಕ್ಕಳಿಗೆ ಉಡಿ ತುಂಬವಿಕೆಯಿಂದ ಪ್ರಾರಂಭವಾದ ಕಾರ್ಯ ಈ ವರ್ಷ 410 ಮಂದಿ ಸಹೋದರಿಯರಿಗೆ ಉಡಿತುಂಬುವ ಭಾಗ್ಯದೊರೆತಿದೆ. ಈ ಕಾರ್ಯದ ಯಶಸ್ವಿಗೆ ನನ್ನ ಬೆನ್ನೆಲುಬಾಗಿ ನಿಂತು ನನ್ನ ಪ್ರತಿಯೊಂದು ಯಶಸ್ವಿನ ಹೆಜ್ಜೆಗೆ ಕಾರಣವದವರು ನನ್ನ ಶ್ರೀಮತಿಯಾದ ಅಂಬಿಕಾ ರವರು ಇಷ್ಟೆಲ್ಲ ಕಾರ್ಯಗಳು ಸುಗಮವಾಗಿ ಯಶಸ್ವಿಗೊಳಲು ಅವರ ಸಹಕಾರ ದೊಡ್ಡದು, ಮುಂಬರುವ ವರ್ಷಗಳಲ್ಲಿ 600ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಉಡಿ ತುಂಬುವ ಕಾರ್ಯವನ್ನು ನೆರವೇರಿಸಿ ಕೊಡುತ್ತೇನೆ ಎಂದು ತಿಳಿಸಿದರು.
ಇನ್ನು ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಎಚ್ ಮೂರ್ತಿರವರು ಮಾತನಾಡಿ ತಾಲೂಕಿನ ಕೀರ್ತಿಯನ್ನು ರಾಜ್ಯದ ಮೂಲೆ ಮೂಲೆಯಲ್ಲಿ ಗುರುತಿಸುವಂತಹ ಕಾರ್ಯವು ಇದಾಗಿದೆ ಎಂದು ಪೂಜ್ಯನೀಯ ಶ್ರೀ ವೆಂಕಟೇಶ ತಾತನವರನ್ನು ಅಭಿನಂದಿಸಿದರು.
ಇನ್ನು ನಿರೂಪಣೆ ಹಾಗೂ ಗಾಯನವನ್ನು ತಮ್ಮೇನಹಳ್ಳಿ ಸಂಗೀತ ಶಿಕ್ಷಕರಾದ ಕೆ ಓ ಶಿವಣ್ಣನವರು ನೆರವೇರಿಸಿದರು.
ಈ ಸಂದರ್ಭದಲ್ಲಿ ತಮ್ಮೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಶಿವಕುಮಾರ್, ಸಹ ಶಿಕ್ಷಕ ಚಿದಾನಂದ ರೆಡ್ಡಿ, ಶ್ರೀಮತಿ ಅಂಬಿಕಾ, ಶಿಲ್ಪ, ರಾಘವೇಂದ್ರ ರೆಡ್ಡಿ, ಹನುಮರೆಡ್ಡಿ, ನಾಗರೆಡ್ಡಿ, ಬಸವರಾಜ ರೆಡ್ಡಿ, ಪುರುಷೋತ್ತಮ್ ರೆಡ್ಡಿ ಸೇರಿದಂತೆ ಉಪಸ್ಥಿತರಿದ್ದರು .
ವರದಿ:ಸಿದ್ದೇಶ ಜಿ ವೆಂಕಟಾಪುರ
