Site icon NBTV Kannada

ಕ್ಷೌರಕ್ಕೆ ತೆರಳಿದ ಯುವಕ ಶವವಾಗಿ ಪತೆ ; ಶೀಘ್ರ ತನಿಖೆಗೆ MRHS ಆಗ್ರಹ

ಯಾದಗಿರಿ (ಸೆ.12) : ಮನೆಯಿಂದ ಕ್ಷೌರ ಮಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಹೋದ ಯುವಕ ಎರಡು ದಿನಗಳ ನಂತರ ಶವವಾಗಿ ಪತ್ತೆಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೊಡೇಕಲ್‌ ಗ್ರಾಮದಲ್ಲಿ ಸಂಭವಿಸಿದೆ. ಮೃತ ಯುವಕ ಭೀಮಣ್ಣ ಬಿನ್‌ ಮಲ್ಲಪ್ಪ (19) ಎಂದು ಗುರುತಿಸಲಾಗಿದ್ದು.ತಮ್ಮ ಮನೆಯಿಂದ ದಿನಾಂಕ: 29-08-2025 ರಂದು ಕ್ಷೌರ ಮಾಡಿಸಿಕೊಂಡು ಬರುತ್ತೇನೆಂದು ಹೇಳಿ ಹೋದ ಯುವಕ ಸುಮಾರು 02 ದಿನಗಳಾದರೂ ಮನೆಗೆ ಹಿಂತಿರುಗಿ ಬಾರದ ಕಾರಣ ಭಯಭೀತಳಾದ ತಾಯಿ ದುರಗಮ್ಮ ದಿನಾಂಕ: 30-08-2025 ರಂದು ಸಂಜೆ 05-30 ರ ಸುಮಾರಿಗೆ ನಾರಾಯಣಪೂರ ಪೋಲಿಸ್ ಠಾಣೆಗೆ ಹೋಗಿ ಮಗನ ಕಾಣೆಯಾದ ಕುರಿತು ದೂರು ನೀಡಿದ್ದು. ದಿನಾಂಕ: 09-09-2025 ರಂದು ಸದರಿ ಯುವಕನು ಬೋರೋ ಕಂಪನಿಯ ಕೆನಾಲ್ ನೀರಿನಲ್ಲಿ ಶವ ಪತ್ತೆಯಾಗಿರುತ್ತಾನೆ. ಅದೇ ದಿನಾಂಕದಂದು ನಾರಾಯಣಪುರ ಪೋಲಿಸ್ ಠಾಣೆಯಲ್ಲಿ ಇಂತಹದ್ದೆ ಮತ್ತೊಂದು ಪ್ರಕರಣ ದಾಖಲಾಗಿದ್ದು. ಈ ವಿಷಯಗಳ ಸಂಬಂಧ ಇಲ್ಲಿಯವರೆಗೂ ಪೊಲೀಸ್‌ ಅಧಿಕಾರಿಗಳು ಆರೋಪಿಗಳನ್ನು ಬಂಧಿಸದೇ ಇರುವುದು ಖಂಡನೀಯ ಎಂದು ಹಾಗೂ ಈರೀತಿ ರಾಜ್ಯದಲ್ಲಿ ಮಾದಿಗರ ಮೇಲೆ ದೌರ್ಜನ್ಯ ದಬ್ಬಾಳಿಕೆ. ಕೊಲೆ, ಸುಲಿಗೆ, ದಿನ ಬೆಳಗಾದರೇ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿವೆ. ಇಂತಹ ಘಟನೆ ಆದಾಗ ಸರಕಾರ ಕಠಿಣವಾದ ಕಾನೂನು ಜಾರಿಗೆ ತಂದಾಗ ಆಗುವಂತಹ ಅನಾಹುತಗಳು ತಪ್ಪುತ್ತವೆ ಆದ್ದರಿಂದ ಭೀಮಣ್ಣ ತಂದೆ ಮಲ್ಲಪ್ಪ ಎಂಬ ಹುಡುಗನನ್ನು ಕಳೆದುಕೊಂಡ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ. ಕೂಲಿ, ನಾಲಿ ಮಾಡಿ ಮಗ ತಂದೆ-ತಾಯಿ ಅಣ್ಣ-ತಮ್ಮಂದಿರನ್ನು ಅಕ್ಕ-ತಂಗಿಯರನ್ನು ಬದುಕಿಸುತ್ತಿದ್ದ ಅಂಥವನನ್ನು ಉದ್ದೇಶ ಪೂರ್ವಕವಾಗಿ ಕಿಡಿಕೇಡಿಗಳು ಕೊಲೆ ಮಾಡಿ ಕೈಕಾಲು ಕಟ್ಟಿ ಕೆನಾಲ್ ಗೆ ಎಸೆದಿದ್ದಾರೆ. ಇಂತಹ ಗೋಮುಖ ವ್ಯಾರ್ಘಗಳನ್ನು ಗುಂಡಿಟ್ಟು ಕೊಲ್ಲುವಂತ ಕಠಿಣವಾದ ಶಿಕ್ಷೆಯನ್ನು ಮಾನ್ಯ ಗೃಹ ಮಂತ್ರಿಗಳು ಕ್ಯಾಬಿನೇಟ್ ನಲ್ಲಿ ಕಾನೂನು ಜಾರಿಮಾಡ ಬೇಕು. ಆಗ ಮಾತ್ರ ಇಂತಹ ಘಟನೆ ಮತ್ತೆ ಮರುಕಳಿಸುವುದಿಲ್ಲ. ಇನ್ನೂ ದಿನಾಂಕ ಸೆ. 10,2025. ರಂದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ಹಾಡು ಹಗಲೇ ಮಾದಿಗ ಸಮಾಜದ ಯುವಕನನ್ನು ದುಷ್ಕರ್ಮಿಗಳು ಸಾರ್ವಜನಿಕ ರೋಡಿನಿ ಮಧ್ಯ  ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಕೃತ್ಯವು ಗೃಹ ಮಂತ್ರಿಗಳ ತವರು ಜಿಲ್ಲೆಯಲ್ಲೆ ನಡೆದಿದ್ದು ಇನ್ನೂ ಬೇರೆ ತಾಲೂಕುಗಳ ಗತಿ ಎನು…? ಆದ್ದರಿಂದ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣವಾದ ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ದಲಿತರ ಕೇರಿಗಳಿಗೆ ಪೋಲಿಸರು ರಕ್ಷಣೆ ನೀಡಬೇಕು ನೋಂದ ಕುಟುಂಬಗಳಿಗೆ ಸರಕಾರದ ವತಿಯಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಜಿಲ್ಲಾ ಸಮಿತಿ ವತಿಯಿಂದ ಆಗ್ರಹ ಪಡಿಸುತ್ತಾ ತಾಲ್ಲೂಕು ತಹಶೀಲ್ದಾರರ ಮುಖಾಂತರ ಮಾನ್ಯ ಗೃಹ ಮಂತ್ರಿಗಳಾದ ಡಾ. ಜಿ.ಪರಮೇಶ್ವರ್‌ ಪತ್ರವನ್ನು ವರ್ಗಾಹಿಸಲಾಗಿದ್ದಿ ಈ ಸಂದರ್ಭದಲ್ಲಿ MRHS ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪೂರಿ, ತಾಲ್ಲೂಕು ಅಧ್ಯಕ್ಷ ನಿಂಗಪ್ಪ ಗೌಡೂರು, ಹಿರಿಯ ಹೋರಾಟಗಾರ ಭೀಮರಾಯ ಭಂಡಾರಿ, ತಾಲ್ಲೂಕು ಉಪಾಧ್ಯಕ್ಷ ಮೌನೇಶ್‌ ಜಾಲಹಳ್ಳಿ ಹಾಗೂ ಮುಖಂಡರಾದ ಬುರ್ರಪ್ಪ , ಅಬ್ರಾಹಂ ಕಮ್ಮಲದಿನ್ನೆ, ವೆಂಕಟೇಶ್‌ ಜಾಲಹಳ್ಳಿ , ಬಸವರಾಜ ಜಯಂ , ವಿಜಯ ಕುಮಾರ್‌ ಬಲ್ಲಿದವ , ಮಹಾದೇವ ಗೌರಂಪೇಟೆ , ರವಿಚಂದ್ರ ಗುಂಟ್ರಾಳ, ಹೆಚ್.ಶಿವರಾಜ , ರಂಗಪ್ಪ ಹೊನ್ನಾಕುಣಿ, ಯಲ್ಲಪ್ಪ ಮಲ್ದಕಲ್‌ , ಬಸಲಿಂಗಪ್ಪ ಖಾನಾಪೂರ , ಲಕ್ಷ್ಮಣ್‌ ಮಸರಕಲ್‌ ಮಂತಾದವರು ಉಪಸ್ಥಿತರು.

Exit mobile version