Site icon NBTV Kannada

ಕಾರ್ಯದರ್ಶಿಗಳಿಂದ ಬಳಲುತ್ತಿದೆಯಾ ಸರ್ಕಾರದ ಮಾತೃ ಇಲಾಖೆಗಳು; ಸಾಮಾಜಿಕ ವಲದಲ್ಲಿ ಚರ್ಚೆ

ಬೆಂಗಳೂರು (ಸೆ೧೦) : ಸರ್ಕಾರದ ಅನೇಕ ಇಲಾಖೆಗಳಲ್ಲಿ ಭ್ರಷ್ಟಚಾರವು ತಾಂಡವವಾದುತ್ತಿದ್ದು ಇದೀಗ ಸರದಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾಲಿಟ್ಟಿದೆ. ಮಾನ್ಯ ಸಚಿವರಾದ ಹೆಚ್.ಸಿ.ಮಹದೇವಪ್ಪ ಮತ್ತು ಸರ್ಕಾರದ ಕಾರ್ಯದರ್ಶಿಗಳಾದ ಮಣಿವಣ್ಣನ್ ರವರಿಂದ ಇಲಾಖೆಯಲ್ಲಿ ಸಾಕಷ್ಟು ಅಕ್ರಮ ಮಾರ್ಗದಲ್ಲಿ ಹಣ ದುರ್ಬಳಕೆಯಾಗುತ್ತಿದೆ ಎನ್ನುವ ಸುದ್ದಿ ಹಬ್ಬಿದ್ದೆ. ಇದಕ್ಕೆ ಸಾಕ್ಷಿಯಾಗಿ ಇಂದಿರ ಗಾಂಧಿ ವೃತ್ತಿ ಕೇಂದ್ರದಲ್ಲಿ ಬಾರಿ ಅವ್ಯವಹಾರ ನಡೆದಿದೆ ಎಂದು ಮುಖ್ಯಮಂತ್ರಿಗಳಿಗೆ ಸಂಘ-ಸಂಸ್ಥೆಗಳಿಂದ ದೂರು ನೀಡಲಾಗಿದ್ದು. ಆಡಳಿತ ಪಕ್ಷ ತನ್ನ ಆಪ್ತರನ್ನು ಅಧಿಕಾರಿಗಳನ್ನಾಗಿ ನೇಮಿಸಿಕೊಂಡಿರುವುದೆ ಭ್ರಷ್ಟಚಾರಕ್ಕೆ ಮೂಲ ಕಾರಣ ಎಂಬಂತೆ ದೂರಿನ ಮೂಲಗಳು ತಿಳಿಸಿವೆ. ಈ ಬಗ್ಗೆ ಸಮಾಜಿಕ ವಲಯದಲ್ಲಿ ಮತ್ತು ಸಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಈ ಕೆಳಕಂಡ ಪ್ರಶ್ನೆಗಳು ಧ್ವನಿ ಎತ್ತುತ್ತಿವೆ.

1) ಸುಮಾರು 3 ರಿಂದ 4 ವರ್ಷಗಳು ಕಳೆದರೂ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಾದ ಮಣಿವಣ್ಣನ್ ಮತ್ತು ಆಯುಕ್ತರಾದ ರಾಕೇಶ್ ಕುಮಾರ್ ರವರು ವರ್ಗಾವಣೆ ಮಾಡದೆ ಸಚಿವರ ಕೃಪಾ ಕಟಾಕ್ಷ ದಿಂದ ಮುಂದೆವರೆಯುತ್ತಿದ್ದಾರೆ. ಬೇರೆ ಇಲಾಖೆಯವರನ್ನು ಮಾತ್ರ ವರ್ಗಾವಣೆ ಮಾಡುತ್ತಿರುವುದು ಮಾನ್ಯ ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲವೇ ?

2) ಸಮಾಜ ಕಲ್ಯಾಣ ಇಲಾಖೆಯ ಅಧೀನದ ಲಿಡ್ಕರ್ ನಿಗಮಕ್ಕೆ ಬೇರೆ ಇಲಾಖೆಯ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಳಿಸಿದ್ದು. ಆ ಹುದ್ದೆಯು ಸಮಾಜ ಕಲ್ಯಾಣ ಇಲಾಖೆಯ ಹುದ್ದೆಗಳಿಗೆ ಸರಿಸಮಾನ ಅಧಿಕಾರಿ ಇದ್ದರೂ ಅರ್ಹತೆ ಇಲ್ಲದವರನ್ನು ಏಕೆ ವ್ಯವಸ್ಥಾಪಕ ನಿರ್ದೇಶಕರಾಗಿ ಮಾಡಿದ್ದೀರಾ ಇದು ಸೇವಾ ನಿಯಮಗಳನ್ನು ಉಲ್ಲಂಘನೆ ಮಾಡಿದಂತಲ್ಲವೇ ?

3) ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರಕ್ಕೆ ಬೇರೆ ಇಲಾಖೆಯ ಅಧಿಕಾರಿಯನ್ನು ಮುಖ್ಯ ಅಡಳಿತ ಅಧಿಕಾರಿಗಳಾಗಿ ನೇಮಕಗೊಳಿಸಿದ್ದಿರಿ. ಈ ಹುದ್ದೆಯು ಕೂಡ ಸಮಾಜ ಕಲ್ಯಾಣ ಇಲಾಖೆಯ ಹುದ್ದೆಗಳಿಗೆ ಸರಿಸಮಾನ ಅಧಿಕಾರಿ ಹೊಂದಿದ್ದರು ಇಲ್ಲಿಯೂ ಅರ್ಹತೆ ಇಲ್ಲದವರನ್ನು ಏಕೆ ಮುಖ್ಯ ಅಡಳಿತ ಅಧಿಕಾರಿಗಳಾಗಿ ನೇಮಕ ಮಾಡಿದ್ದೀರಿ? ಇದು ಸಹ ಸೇವಾ ನಿಯಮಗಳನ್ನು ಉಲ್ಲಂಘನೆ ಮಾಡಿದಂತಲ್ಲವೇ? ಇದೇ ಇಲಾಕೆಯ ಉಪ ನಿರ್ದೇಶಕರ ಹುದ್ದೆಯನ್ನು ಮುಖ್ಯ ಅಡಳಿತ ಅಧಿಕಾರಿ ಹುದ್ದೆಗೆ ಪರಿವರ್ತನೆ ಮಾಡಿದ್ದು ಯಾರ ಲಾಭಕೆ? ಆಗಾದ್ರೆ ಅಪರ ನಿರ್ದೇಶಕರು ಏತಕೆ ಬೇಕು?

4) ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ಕಛೇರಿಯಲ್ಲಿ ಜಂಟಿ ನಿರ್ದೇಶಕರು (ಶಿಕ್ಷಣ) ಹಾಗೂ ಜಂಟಿ ನಿರ್ದೇಶಕರು (ಮೂಲಭೂತ ಸೌಕರ್ಯ) ಇವರು ಸುಮಾರು ೩ – 6 ವರ್ಷಗಳಿಂದ ವರ್ಗಾವಣೆ ಇಲ್ಲದೆ ಅದೇ ಹುದ್ದೆಯಲ್ಲಿ ಏಕೆ ಕಾರ್ಯನಿರ್ವಹಿಸುತ್ತಿದ್ದಾರೆ? ಜಂಟಿ ನಿರ್ದೇಶಕರು (ಶಿಕ್ಷಣ )ಇವರು ಆಪರ ನಿರ್ದೇಶಕ ರಾಗಿ ಪ್ರಮೋಷನ್ ಪಡೆದರು ಯಾಕೆ ಆ ಹುದ್ದೆಗೆ ಹೋಗಿಲ್ಲ, ಇದು ಸಹ ಸೇವಾ ನಿಯಮಗಳ ಉಲ್ಲಂಘನೆ ಮಾಡಿದಂತಲ್ಲವೇ?

ಒಟ್ಟಾರೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವಾ ನಿಯಮಗಳನ್ನು ಈ ರೀತಿಯಾಗಿ ಗಾಳಿಗೆ ತೂರಿ ಒಂದೇ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಮತ್ತು ಅವರಿಗೆ ಬೇಕಾದ ಅಧಿಕಾರಿಗಳನ್ನು ಆಯಾ ಕಟ್ಟಿನ ಹುದ್ದೆಗೆ ನೇಮಿಸಿಕೊಂಡು ಭ್ರಷ್ಟಚಾರ ಮಾಡುತ್ತಿರುವುದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರ ಗಮನಕ್ಕೆ ಬಂದಿಲ್ಲವೇ ಎಂಬದು ಗಮನಾರ್ಹವಾಗಿ ಅನೇಕ ಪರಿಶಿಷ್ಟ ಸುಮುದಾಯಗಳ ಮುಖಂಡರ ಸಭೆಗಳಲ್ಲಿ ಚರ್ಚೆಯೂ ನಡೆಯುತ್ತಿದೆ.

Exit mobile version