Site icon NBTV Kannada

ಒಳಮೀಸಲಾತಿ ಜಾರಿಯಲ್ಲಿ ಸರ್ಕಾರದಿಂದ ವಿಳಂಬ

ಸಂಘಟಕರಿಂದ ವ್ಯಾಪಕ ಖಂಡನೆ ; ಮಾ.೧೨ರಂದು ಬೆಂಗಳೂರಿನಲ್ಲಿ ಬೃಹತ್‌ ಪ್ರತಿಭಟನೆಗೆ

ಬೆಂಗಳೂರು: ಒಳಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯಗಳ ಸ್ವಾಭಿಮಾನಿದ ಒಕ್ಕೂಟ M SSV ವತಿಯಿಂದ ಬೆಂಗಳೂರಿನ ಆನಂದರಾವ್ ಸರ್ಕಲ್ ಬಳಿಯಿರುವ ತಾಮರ ಹೋಟೆಲನಲ್ಲಿ ಫೆ.12ರ ಬುಧುವಾರದಂದು ನಡೆದ ಸಭೆಯಲ್ಲಿ ಒಳಮೀಸಲಾತಿ ಜಾರಿಗಾಗಿ ಕಾಂಗ್ರೆಸ್ ಪಕ್ಷವು ತೆಗೆದುಕೊಂಡ ಕಾಲಾವಧಿ ಮುಗಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಲ್ಲಿರುವ ದತ್ತಾಂಶಗಳನ್ನು ಕ್ಯಾಬಿನೆಟ್ ಮೂಲಕ ಅನುಮೋದನೆ ಮಾಡಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರಿಗೆ ನೀಡದೆ ಸತ್ಯಗಳನ್ನು ಮುಚ್ಚಿಟ್ಟು ವಿಳಂಬ ಧೋರಣೆಯ ನಾಟಕವಾಡುತ್ತಿದ್ದಾರೆ ಎಂದು ಸಂಘಟಕರು ಕಿಡಿಕಾರಿದ್ದಾರೆ.

ಪ್ರಕೃತಿಯಲ್ಲಿ ಅಸಮತೋಲನವಾದರೆ ಬಿರುಗಾಳಿ, ಭೂಕಂಪ, ಪ್ರವಾಹ ಹುಟ್ಟಿಕೊಳ್ಳುತ್ತವೆ. ಮಾದಿಗರ ಒಳಮೀಸಲಾತಿ ತಾರತಮ್ಯವಾದರೆ ಕ್ರಾಂತಿ ಹುಟ್ಟಿಕೊಳ್ಳುತ್ತದೆ. ಇಂತಹ ಕ್ರಾಂತಿಯನ್ನು ಮಾದಿಗ ಸಮುದಾಯ ಮಾಡಿರುತ್ತಾದೆ. ಒಳಮೀಸಲಾತಿ ಜಾರಿಯಾಗುವ ತನಕ ಉಗ್ರವಾದ ಹೋರಾಟ ಮಾಡುವ ಸಮಯ ಹತ್ತಿರದಲ್ಲಿ ಬಂದಿದೆ ಎಂದು ಡಾ: ಎನ್.ಮೂರ್ತಿ ರವರು ನುಡಿದರು.

ಇದೇ ವೇಳೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಫೆ.19ರಂದು ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮವನ್ನು ಮುಂದೂಡಿ, ಮುಂದಿನ ತಿಂಗಳು ಎಂದರೆ ಮಾರ್ಚ್ 12ರ ಬುಧುವಾರರಂದು ಕರ್ನಾಟಕ ರಾಜ್ಯ ಮಟ್ಟದ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲು ನಿರ್ಣಯವನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಕೇಶವಮೂರ್ತಿ, ಅಖಿಲ ಭಾರತ ಬಹುಜನ ಸಮಾಜ ಪಕ್ಷದ ಆರ್.ಮುನಿಯಪ್ಪ, ರಿಬ್ಲಿಕ್ ಪಾರ್ಟಿ ಆಫ್ ಇಂಡಿಯ (ಬಿ) ರಾಷ್ಟ್ರೀಯ M R H S  ಮಾದಿಗ ಮೀಸಲಾತಿ ಹೋರಟ ಸಮಿತಿ ಸಂಸ್ಥಾಪಕ ಅಧ್ಯಕ್ಷರು, ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ  ಡಾ: ಎನ್.ಮೂರ್ತಿ, ಪ್ರೋ ಬಿ.ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಎಂ.ಗುರುಮೂರ್ತಿ ಶಿವಮೊಗ್ಗ, ಒಳಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯ ಸ್ವಾಭಿಮಾನಿ ಒಕ್ಕೂಟದ  ಕೇಶವಮೂರ್ತಿ, ಡಾ.ಭೀಮರಾಜು ವಿಶ್ವ ಆದಿಜಾಂಬ ಮಹಾಸಭಾ ರಾಜ್ಯಾಧ್ಯಕ್ಷರು, ಕನಕೇನಹಳ್ಳಿ ಕೃಷ್ಣಪ್ಪ, ಶಿವರಾಯ ಅಕ್ಕರಿಕಿ, ರಾಜ್ಯಾಧ್ಯಕ್ಷರು ರಾಜ್ಯ ಸಮಿತಿ ನರಸಿಂಹ ಮೂರ್ತಿ, ದಲಿತ ಸೈನ್ಯ ರಾಜ್ಯಾಧ್ಯಕ್ಷರು ಹಾಗೂ ಪತ್ರಕರ್ತ ಕೆ.ನಾರಾಯಣ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

ವರದಿ ; ಸಾಕೆ ನಾರಾಯಣ. ಎ

Exit mobile version